AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Faf Du Plessis: IPL 2021 ಬೆಸ್ಟ್ ಕ್ಯಾಚ್ ಇದು: ಕಾಲಿನಿಂದ ನೆತ್ತರು ಹರಿಯುತ್ತಿದ್ದರೂ ಬೌಂಡರಿ ಲೈನ್ ಬಳಿ ಡುಪ್ಲೆಸಿಸ್​ ರೋಚಕ ಕ್ಯಾಚ್

CSK vs KKR IPL 2021: ಫಾಫ್ ಡುಪ್ಲೆಸಿಸ್ ಅವರು ಇಯಾನ್ ಮಾರ್ಗನ್​ರ ರೋಚಕ ಕ್ಯಾಚ್ ಹಿಡಿದು ಸಂಭ್ರಮಿಸುವ ವೇಳೆ ಅವರ ಕಾಲಿನಿಂದ ರಕ್ತ ಬರುತ್ತಿರುವುದು ಎದ್ದು ಕಾಣುತ್ತಿತ್ತು.

Faf Du Plessis: IPL 2021 ಬೆಸ್ಟ್ ಕ್ಯಾಚ್ ಇದು: ಕಾಲಿನಿಂದ ನೆತ್ತರು ಹರಿಯುತ್ತಿದ್ದರೂ ಬೌಂಡರಿ ಲೈನ್ ಬಳಿ ಡುಪ್ಲೆಸಿಸ್​ ರೋಚಕ ಕ್ಯಾಚ್
Faf du Plessis Caath with bleeding knee
TV9 Web
| Edited By: |

Updated on: Sep 27, 2021 | 11:57 AM

Share

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2021) ಭಾನುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs KKR) ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಕೊನೇಯ ಎಸೆತದ ವರೆಗೂ ನಡೆದ ಕಾದಾಟದಲ್ಲಿ ಎಂ. ಎಸ್ ಧೋನಿ (MS Dhoni) ಪಡೆ 2 ವಿಕೆಟ್​ಗಳ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಸದ್ಯ ಈ ಪಂದ್ಯದಲ್ಲಿ ಸಿಎಸ್​ಕೆ (CSK) ತಂಡದ ಸ್ಟಾರ್ ಬ್ಯಾಟರ್ ಫಾಫ್ ಡುಪ್ಲೆಸಿಸ್ (Faf Du Plessis) ಬೌಂಡರಿ ಗೆರೆ ಬದಿಯಲ್ಲಿ ಹಿಡಿದ ಅದ್ಭುತ ಕ್ಯಾಚ್​ನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಂಜುರಿಗೆ ತುತ್ತಾಗಿ ಕಾಲಿನಿಂದ ನೆತ್ತರು ಹರಿಯುತ್ತಿದ್ದರೂ ಫಾಪ್ ಹಿಡಿದ ಅಮೋಘ ಕ್ಯಾಚ್​ಗೆ ನೆಟ್ಟಿಗರೂ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದುವೇ ಐಪಿಎಲ್ 2021ರ ಬೆಸ್ಟ್ ಕ್ಯಾಚ್ ಎಂದು ಹೇಳುತ್ತಿದ್ದಾರೆ.

ಈ ಘಟನೆ ನಡೆದಿದ್ದು ಕೆಕೆಆರ್ ಬ್ಯಾಟಿಂಗ್ ಇನ್ನಿಂಗ್ಸ್​ನ ಜೋಶ್ ಹ್ಯಾಜ್ಲೆವುಡ್ ಬೌಲಿಂಗ್​ನ 10ನೇ ಓವರ್​ನಲ್ಲಿ. ರನ್ ಬರ ಎದುರಿಸುತ್ತಿದ್ದ ಕೆಕೆಆರ್​ಗೆ ಫೋರ್-ಸಿಕ್ಸರ್​ನ ಅವಶ್ಯಕತೆಯಿತ್ತು. ನಾಯಕ ಇಯಾನ್ ಮಾರ್ಗನ್ ಲಾಂಗ್ ಆನ್​ನಲ್ಲಿ ಸಿಕ್ಸರ್​ಗೆಂದು ಚೆಂಡನ್ನು ಅಟ್ಟಿದರು. ಆದರೆ, ಬೌಂಡರಿ ಲೈನ್ ಬಳಿ ಇದ್ದ ಫಾಫ್ ಡುಪ್ಲೆಸಿಸ್ ಹಾರಿ ಬಾಲ್ ಅನ್ನು ಹಿಡಿದರು, ಇದೇವೇಳೆ ನಿಯಂತ್ರಣ ಕಳೆದುಕೊಂಡ ಫಾಫ್ ಬೌಂಡರಿ ಗೆರೆ ದಾಟಬೇಕಾಗಿ ಬಂತು. ಆಗ ಚೆಂಡನ್ನು ಮೇಲಕ್ಕೆ ಗಾಳಿಯಲ್ಲಿ ಎಸೆದು ತಕ್ಷಣವೇ ಬೌಂಡರಿ ಲೈನ್​ನಿಂದ ಒಳಗೆ ಬಂದು ಅದ್ಭುತವಾಗಿ ಕ್ಯಾಚ್ ಹಿಡಿದರು.

ಡುಪ್ಲೆಸಿಸ್ ಹಿಡಿದ ಕ್ಯಾಚ್ ಸಿಎಸ್​ಕೆ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು. ಸದ್ಯ ಈ ಕ್ಯಾಚ್​ನ ವಿಡಿಯೋ ಇಂಟರ್​ನೆಟ್​ನಲ್ಲಿ ಭಾರೀ ಹರಿದಾಡುತ್ತಿದೆ. ಆಘಾತ ಎಂದರೆ ಈ ಕ್ಯಾಚ್ ಹಿಡಿಯುವ ಮುನ್ನ ಫಾಫ್ ಇಂಜುರಿಗೆ ತುತ್ತಾಗಿದ್ದರು. ಕ್ಯಾಚ್ ಹಿಡಿದು ಸಂಭ್ರಮಿಸುವ ವೇಳೆ ಅವರ ಕಾಲಿನಿಂದ ರಕ್ತ ಬರುತ್ತಿರುವುದು ಎದ್ದು ಕಾಣುತ್ತಿತ್ತು. ಇವರು ಬ್ಯಾಟಿಂಗ್ ಮಾಡುವಾಗಲೂ ಕಾಲಿನಿಂದ ರಕ್ತ ಸೋರುತ್ತಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿತು. ತಂಡದ ಪರ ರಾಹುಲ್ ತ್ರಿಪಾಠಿ 33 ಎಸೆತಗಳಲ್ಲಿ 45 ರನ್ ಸಿಡಿಸಿದರೆ, ನಿತೀಶ್ ರಾಣ ಅಜೇಯ 37 ಮತ್ತು ದಿನೇಶ್ ಕಾರ್ತಿಕ್ 26 ರನ್ ಬಾರಿಸಿದರು. ಸಿಎಸ್​ಕೆ ಪರ  ಜೋಶ್ ಹ್ಯಾಜ್ಲೆವುಡ್ ಮತ್ತು ಶಾರ್ದೂಲ್ ಥಾಕೂರ್ ತಲಾ 2 ವಿಕೆಟ್ ಕಿತ್ತರು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಸಿಎಸ್​ಕೆ ಸ್ಫೋಟಕ ಆರಂಭ ಪಡೆದುಕೊಂಡಿತು. ರುತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 40 ಮತ್ತು ಡುಪ್ಲೆಸಿಸ್ 30 ಎಸೆತಗಳಲ್ಲಿ 43 ರನ್ ಚಚ್ಚಿದರು. ಮೊಯೀನ್ ಅಲಿ 32 ರನ್ ಬಾರಿಸಿದರು. ಇವರ ನಿರ್ಗಮನದ ಬಳಿಕ ದಿಢೀರ್ ಕುಸಿತ ಕಂಡು ಸೋಲಿನ ಸುಳಿಯಲ್ಲಿದ್ದ ಚೆನ್ನೈಗೆ ರವೀಂದ್ರ ಜಡೇಜಾ ಗೆಲುವು ಆಸೆ ಚಿಗುರಿಸಿದರು.

ಕೇವಲ 8 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದಿಟ್ಟರು. ಸಿಎಸ್​ಕೆ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಇದರ ಮೂಲಕ ಚೆನ್ನೈ 16 ಅಂಕದೊಂದಿಗೆ ಟೇಬಲ್ ಟಾಪ್​ನಲ್ಲಿದ್ದು, ಪ್ಲೇ ಆಫ್​​ಗೆ ಲಗ್ಗೆಯಿಟ್ಟಿದೆ.

IPL 2021 Teams Points Table: ಆರ್​ಸಿಬಿ, ಸಿಎಸ್​ಕೆ ಗೆಲುವಿನ ಬಳಿಕ ಪಾಯಿಂಟ್ ಟೇಬಲ್​ನಲ್ಲಾಗಿದೆ ಬಹುದೊಡ್ಡ ಬದಲಾವಣೆ

Virat Kohli, RCB vs MI: ಪೊಲಾರ್ಡ್, ಹಾರ್ದಿಕ್ ವಿಕೆಟ್ ಕೀಳಲು ಕೊಹ್ಲಿ ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?

(Faf Du Plessis Takes Fantabulous Catch Near Boundary Line with a bleeding knee in CSK vs KKR IPL 2021 Match)