ಇದು ಆರಂಭವಷ್ಟೇ… ಅಭಿಷೇಕ್ ಆಟಕ್ಕೆ ಯುವರಾಜ್ ಸಿಂಗ್ ಮೆಚ್ಚುಗೆ
Abhishek Sharma: ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರಿಂದ ಅಭಿಷೇಕ್ ಶರ್ಮಾ ಕೋಚಿಂಗ್ ಪಡೆದಿದ್ದಾರೆ. ಈ ಬಾರಿಯ ಐಪಿಎಲ್ಗೂ ಮುನ್ನ ಅಭಿಷೇಕ್ ಯುವರಾಜ್ ಸಿಂಗ್ ಅವರ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ನೇರವಾಗಿ ಐಪಿಎಲ್ಗೆ ಆಗಮಿಸಿದ್ದ ಯುವ ದಾಂಡಿಗ ಸನ್ರೈಸರ್ಸ್ ಹೈದರಾಬಾದ್ ಪರ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದ ಫಲವಾಗಿ ಇದೀಗ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ.
ಝಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಅಭಿಷೇಕ್ ಶರ್ಮಾ (Abhishek Sharma) ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಮೊದಲ ಓವರ್ನಲ್ಲೇ ಸಿಕ್ಸ್ ಸಿಡಿಸುವ ಮೂಲಕ ರನ್ ಖಾತೆ ತೆರೆದಿದ್ದರು.ಇದಾದ ಬಳಿಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಆ ಬಳಿಕ ಶುರುವಾದ ಸಿಡಿಲಬ್ಬರಕ್ಕೆ ಝಿಂಬಾಬ್ವೆ ಬೌಲರ್ಗಳು ಹೈರಾಣರಾದರು. ಪರಿಣಾಮ ಕೇವಲ 46 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಶತಕ ಸಿಡಿಸಿ ಔಟಾದರು.
ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 234 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡವು ಕೇವಲ 134 ರನ್ಗಳಿಗೆ ಆಲೌಟ್ ಆಗಿ 100 ರನ್ಗಳ ಹೀನಾಯ ಸೋಲನುಭವಿಸಿದೆ. ಈ ಗೆಲುವಿನ ಬಳಿಕ ಅಭಿಷೇಕ್ ಶರ್ಮಾ ತಮ್ಮ ಪೋಷಕರಿಗೆ ವಿಡಿಯೋ ಕಾಲ್ ಮಾಡಿದ್ದರು. ಇದೇ ವೇಳೆ ತಂದೆ-ತಾಯಿ ಮಗನ ಸೆಂಚುರಿ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಅಭಿಷೇಕ್ ಶರ್ಮಾ ಕರೆ ಮಾಡಿದ್ದು ತನ್ನ ಗುರು ಯುವರಾಜ್ ಸಿಂಗ್ಗೆ ಎಂಬುದು ವಿಶೇಷ. ಈ ವಿಡಿಯೋ ಕರೆಯನ್ನು ಸ್ವೀಕರಿಸಿದ ಯುವಿ, ನಮ್ಮ ಆಟದ ಬಗ್ಗೆ ಹೆಮ್ಮೆಯಿದೆ. ಇದು ಆರಂಭವಷ್ಟೇ, ನಿನ್ನಿಂದ ಇನಷ್ಟು ನಿರೀಕ್ಷಿಸುತ್ತಿದ್ದೇನೆ ಎಂದು ಅಭಿಷೇಕ್ ಶರ್ಮಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಭಿಷೇಕ್ ಶರ್ಮಾ ಧನ್ಯವಾದ ಹೇಳಿದ್ದಾರೆ. ಇದೀಗ ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ

