IND vs AUS: ಬೃಹತ್ ಮೊತ್ತದತ್ತ ಭಾರತ: ಟೀಮ್ ಇಂಡಿಯಾ ಗೆಲುವು ನಿಶ್ಚಿತ

|

Updated on: Nov 24, 2024 | 11:19 AM

Australia vs India, 1st Test: ಆಸ್ಟ್ರೇಲಿಯಾ vs ಭಾರತ ನಡುವಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಪರ್ತ್​ನಲ್ಲಿ ನಡೆಯುತ್ತಿದೆ. ಒಪ್ಟಸ್ ಸ್ಟೇಡಿಯಂನಲ್ಲಿ ಜರುಗುತ್ತಿರುವ ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.

IND vs AUS: ಬೃಹತ್ ಮೊತ್ತದತ್ತ ಭಾರತ: ಟೀಮ್ ಇಂಡಿಯಾ ಗೆಲುವು ನಿಶ್ಚಿತ
IND vs AUS
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಮೂರನೇ ದಿನದಾಟಕ್ಕೆ ಕಾಲಿಟ್ಟಿದೆ. ಮೂರನೇ ದಿನದಾಟದ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಭಾರತ ತಂಡವು 304 ರನ್​ಗಳನ್ನು ಪೂರೈಸಿದೆ. ಅಲ್ಲದೆ ಮೊದಲ ಇನಿಂಗ್ಸ್​ನಲ್ಲಿನ 46 ರನ್​ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾದ ಒಟ್ಟು ಸ್ಕೋರ್ 350 ದಾಟಿದೆ.

ಇತ್ತ ಭಾರತ ತಂಡದ ಸ್ಕೋರ್ 350ರ ಗಡಿದಾಟುತ್ತಿದ್ದಂತೆ ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಭೀತಿ ಎದುರಾಗಿರುವುದು ಸುಳ್ಳಲ್ಲ. ಏಕೆಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಬಲಿಷ್ಠ ತಂಡ ಎನಿಸಿಕೊಂಡರೂ ಆಸೀಸ್ ಪಡೆ ತವರಿನಲ್ಲಿ ಬೃಹತ್ ಮೊತ್ತದ ಚೇಸಿಂಗ್​ ವಿಷಯದಲ್ಲಿ ಈಗಲೂ ಹಿಂದುಳಿದಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು…

  • ಆಸ್ಟ್ರೇಲಿಯಾ ತಂಡವು ತವರಿನಲ್ಲಿ 15 ಟೆಸ್ಟ್ ಪಂದ್ಯಗಳಲ್ಲಿ 300+ ಸ್ಕೋರ್​ಗಳನ್ನು ಚೇಸ್ ಮಾಡಿದೆ.
  • ಈ ವೇಳೆ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಅಂದರೆ 300+ ಸ್ಕೋರ್ ಬೆನ್ನತ್ತಿ ಮೂರು ಬಾರಿ ಮಾತ್ರ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
  • ಇನ್ನುಳಿದ 7 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಸೋಲನುಭವಿಸಿದೆ. ಅಂದರೆ ಆಸೀಸ್ ಪಡೆಯು 300+ ಸ್ಕೋರ್​ ಅನ್ನು ಚೇಸ್​ ಮಾಡುವಲ್ಲಿ ಹಲವು ಬಾರಿ ಎಡವಿದೆ.
  • ಇದಾಗ್ಯೂ 300+ ಸ್ಕೋರ್ ಬೆನ್ನತ್ತಿ ಆ ಪಂದ್ಯವನ್ನು 5 ಬಾರಿ ಡ್ರಾ ಮಾಡಿಕೊಂಡಿದೆ. ಅಂದರೆ ಇಲ್ಲಿ ಆಸೀಸ್ ಪಡೆ ಸೋಲಿನ ಭೀತಿಯ ನಡುವೆ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದೆ ಎನ್ನಬಹುದು.

ತವರಿನಲ್ಲಿ ಆಸ್ಟ್ರೇಲಿಯಾದ ಯಶಸ್ವಿ ಚೇಸಿಂಗ್:

  • ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಚೇಸ್ ಮಾಡಿದ ಅತ್ಯಧಿಕ ಸ್ಕೋರ್ 404. ಅದು ಕೂಡ 1948 ರಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.
  • ಇದಾದ ಬಳಿಕ 1977 ರಲ್ಲಿ ಪರ್ತ್​ ಟೆಸ್ಟ್​ನಲ್ಲಿ ಭಾರತದ ವಿರುದ್ಧ 342 ರನ್ ಚೇಸ್ ಮಾಡಿ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತ್ತು.
  • ಹಾಗೆಯೇ 1999 ರಲ್ಲಿ​ ಅಡಿಲೇಡ್​ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ 369 ರನ್ ಚೇಸ್ ಮಾಡಿ ಗೆಲುವು ದಾಖಲಿಸಿತ್ತು.

ಅಂದರೆ ಆಸ್ಟ್ರೇಲಿಯಾ ತಂಡವು ತವರಿನಲ್ಲಿ 350+ ರನ್​ಗಳನ್ನು ಚೇಸ್ ಮಾಡಿ ಗೆದ್ದು 25 ವರ್ಷಗಳೇ ಕಳೆದಿವೆ. ಇದೀಗ ಭಾರತದ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ ಕೇವಲ 104 ರನ್​ಗಳಿಗೆ ಮುಗ್ಗರಿಸಿರುವ ಆಸೀಸ್ ಪಡೆಗೆ ಟೀಮ್ ಇಂಡಿಯಾ 400+ ರನ್​ಗಳ ಬೃಹತ್ ಮೊತ್ತದ ಗುರಿ ನೀಡುವುದು ಖಚಿತ.

ಈ ಗುರಿಯೊಂದಿಗೆ ಭಾರತ ತಂಡವು ಕೊನೆಯ ಎರಡು ದಿನದಾಟಗಳಲ್ಲಿ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸಿದರೆ, ಆಸ್ಟ್ರೇಲಿಯಾ ತಂಡವು ಡ್ರಾ ಮಾಡಿಕೊಳ್ಳಲು ಯತ್ನಿಸಲಿದೆ. ಈ ಯತ್ನ ಪ್ರಯತ್ನಗಳ ನಡುವೆ ಭರ್ಜರಿ ಬೌಲಿಂಗ್ ಸಂಘಟಿಸಿದರೆ ಟೀಮ್ ಇಂಡಿಯಾ ಗೆಲುವು ನಿಶ್ಚಿತ.

93 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್- 312/2

ಟೀಮ್ ಇಂಡಿಯಾದ ಒಟ್ಟು ಮುನ್ನಡೆ- 358 ರನ್​ಗಳು

ಭಾರತ ಪ್ಲೇಯಿಂಗ್ 11: ಜಸ್​ಪ್ರೀತ್ ಬುಮ್ರಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೇಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಇತಿಹಾಸ ನಿರ್ಮಿಸಿದ ರಿಷಭ್ ಪಂತ್

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್.