ಅಫ್ಘಾನಿಸ್ತಾನ್ ಕ್ರಿಕೆಟಿಗನ 2 ವರ್ಷದ ಪುಟ್ಟ ಮಗಳು ನಿಧನ..!

Hazratullah Zazai: ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ 26 ವರ್ಷದ ಹಝರತುಲ್ಲಾ ಝಝಾಹಿ 16 ಏಕದಿನ ಕ್ರಿಕೆಟ್​ನಲ್ಲಿ 2 ಅರ್ಧಶತಕಗಳೊಂದಿಗೆ 361 ರನ್ ಕಲೆಹಾಕಿದ್ದಾರೆ. ಹಾಗೆಯೇ 45 ಟಿ20 ಪಂದ್ಯಗಳಿಂದ 1161 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 3 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ.

ಅಫ್ಘಾನಿಸ್ತಾನ್ ಕ್ರಿಕೆಟಿಗನ 2 ವರ್ಷದ ಪುಟ್ಟ ಮಗಳು ನಿಧನ..!
Hazratullah Zazai -Daughter

Updated on: Mar 15, 2025 | 1:56 PM

ಅಫ್ಘಾನಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಹಝರತುಲ್ಲಾ ಝಝಾಹಿ ಅವರ 2 ವರ್ಷದ ಪುಟ್ಟ ಕಂದಮ್ಮ ನಿಧನವಾಗಿದೆ. ಈ ಆಘಾತಕಾರಿ ಸುದ್ದಿಯನ್ನು ಅಫ್ಘಾನ್ ತಂಡ ಆಲ್​ರೌಂಡರ್ ಕರೀಮ್ ಜನ್ನತ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದು, ಝಝಾಹಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದಾಗ್ಯೂ ಪುಟ್ಟ ಮಗುವಿನ ನಿಧನಕ್ಕೆ ಕಾರಣವೇನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

“ನನ್ನ ಆತ್ಮೀಯ ಸ್ನೇಹಿತ ಸಹೋದರ ಹಝರತುಲ್ಲಾ ಝಝಾಹಿ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ ಎಂಬ ದುಃಖಕರ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ಅವರ ಮತ್ತು ಅವರ ಕುಟುಂಬಕ್ಕಾಗಿ ನನ್ನ ಸಂತಾಪಗಳು. ಅವರಿಗಾಗಿ ಅವರ ಕುಟುಂಬಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಕರೀಮ್ ಜನ್ನತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

26 ವರ್ಷದ ಹಝರತುಲ್ಲಾ ಝಝಾಹಿ ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. 2016 ರಲ್ಲಿ ಅಫ್ಘಾನಿಸ್ತಾನ್ ಪರ ಪಾದಾರ್ಪಣೆ ಮಾಡಿದ್ದ ಝಝಾಹಿ ಈವರೆಗೆ 16 ಏಕದಿನ ಹಾಗೂ 45 ಟಿ20 ಪಂದ್ಯಗಳನ್ನಾಡಿದ್ದಾರೆ.

16 ಏಕದಿನ ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 361 ರನ್ ಕಲೆಹಾಕಿದರೆ, 45 ಟಿ20 ಪಂದ್ಯಗಳಿಂದ 1161 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 3 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

ಇನ್ನು 2018 ರಲ್ಲಿ ನಡೆದ ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್​ನಲ್ಲಿ (ಎಪಿಎಲ್) ಹಝರತುಲ್ಲಾ ಝಝಾಹಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ್ದರು. ಅಲ್ಲದೆ ಬಾಲ್ಖ್ ಲೆಜೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಾಬೂಲ್ ಜ್ವಾನಾನ್ ಪರ ಕಣಕ್ಕಿಳಿದಿದ್ದ ಅವರು 14 ಎಸೆತಗಳಲ್ಲಿ 62 ರನ್ ಬಾರಿಸಿದ್ದರು.

ಈ ಮೂಲಕ ಒಂದೇ ಓವರ್​ನಲ್ಲಿ ಆರು ಸಿಕ್ಸ್ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು.