6,6,6,6,6,6: ಟಿ20 ಕ್ರಿಕೆಟ್​ನಲ್ಲಿ​ ಹೊಸ ವಿಶ್ವ ದಾಖಲೆ ಬರೆದ ಅಘ್ಘಾನ್ ದಾಂಡಿಗ

Najibullah Zadran: ಕೇವಲ 17 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 43 ರನ್​ ಬಾರಿಸಿದ ಝರ್ದಾನ್ ಟಿ20 ಕ್ರಿಕೆಟ್​ನಲ್ಲಿ 2 ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದರು. ಆ ದಾಖಲೆಗಳು ಈ ಕೆಳಗಿನಂತಿವೆ...

6,6,6,6,6,6: ಟಿ20 ಕ್ರಿಕೆಟ್​ನಲ್ಲಿ​ ಹೊಸ ವಿಶ್ವ ದಾಖಲೆ ಬರೆದ ಅಘ್ಘಾನ್ ದಾಂಡಿಗ
Najibullah Zadran
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 31, 2022 | 1:25 PM

Asia Cup 2022: ಏಷ್ಯಾಕಪ್​ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ದ ಅಬ್ಬರಿಸುವ ಮೂಲಕ ಅಫ್ಘಾನಿಸ್ತಾನದ ಎಡಗೈ ಬ್ಯಾಟ್ಸ್​ಮನ್ ನಜೀಬುಲ್ಲಾ ಝರ್ದಾನ್ (Najibullah Zadran) ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸಿಡಿಲಬ್ಬರದ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಬಾಂಗ್ಲಾದೇಶ್ ನೀಡಿದ 128 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 13 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 62 ರನ್ ಮಾತ್ರ. ಅದರಂತೆ ಕೊನೆಯ 7 ಓವರ್​ಗಳಲ್ಲಿ 67 ರನ್​ಗಳ ಗುರಿ ಪಡೆದ ಅಫ್ಘಾನಿಸ್ತಾನ್ ಪರ ನಜೀಬುಲ್ಲಾ ಝರ್ದಾನ್ ಅಬ್ಬರಿಸಿದ್ದರು. ಅದರಲ್ಲೂ ಡೆತ್ ಓವರ್​ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದರು.

ಕೇವಲ 17 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 43 ರನ್​ ಬಾರಿಸಿದ ಝರ್ದಾನ್, ಟಿ20 ಕ್ರಿಕೆಟ್​ನಲ್ಲಿ 2 ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದರು. ಆ ದಾಖಲೆಗಳೆಂದರೆ…

  1. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನ ಚೇಸಿಂಗ್​ ವೇಳೆ ಡೆತ್ ಓವರ್​ಗಳಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ನಜೀಬುಲ್ಲಾ ಝರ್ದಾನ್ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮೋರ್ಗನ್ ಮತ್ತು ಶ್ರೀಲಂಕಾದ ಆಲ್‌ರೌಂಡರ್ ತಿಸಾರ ಪೆರೆರಾ ಚೇಸಿಂಗ್ ವೇಳೆ ಡೆತ್ ಓವರ್‌ಗಳಲ್ಲಿ 17 ಸಿಕ್ಸ್​ಗಳನ್ನು ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಬಾಂಗ್ಲಾ ವಿರುದ್ಧ 6 ಸಿಕ್ಸರ್ ಸಿಡಿಸುವ ಮೂಲಕ ನಜೀಬುಲ್ಲಾ ಚೇಸಿಂಗ್ ವೇಳೆ ಒಟ್ಟು 18 ಸಿಕ್ಸ್​ಗಳನ್ನು ಬಾರಿಸಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
  2. ಇನ್ನು ಈ 6 ಸಿಕ್ಸರ್​​ಗಳೊಂದಿಗೆ ಟಿ20 ಕ್ರಿಕೆಟ್​ನ ಡೆತ್ ಓವರ್​ಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟ್ಸ್​ಮನ್ ಎಂಬ ಎಂಬ ದಾಖಲೆಯನ್ನೂ ಅಫ್ಘಾನಿಸ್ತಾನದ ಎಡಗೈ ದಾಂಡಿಗ ಪಾತ್ರರಾಗಿದ್ದಾರೆ. ನಜೀಬುಲ್ಲಾ ಝರ್ದಾನ್ ಡೆತ್​ ಓವರ್​ಗಳಲ್ಲಿ ಇದುವರೆಗೆ 53 ಸಿಕ್ಸ್​ಗಳನ್ನು ಬಾರಿಸಿದ್ದಾರೆ. ವಿಶೇಷ ಎಂದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಡೆತ್ ಓವರ್​ಗಳಲ್ಲಿ ಯಾವುದೇ ಬ್ಯಾಟ್ಸ್​ಮನ್ 50 ಸಿಕ್ಸ್​ಗಳನ್ನು ಬಾರಿಸಿಲ್ಲ. ಈ ಹಿಂದೆ ಡೇವಿಡ್ ಮಿಲ್ಲರ್ ಡೆತ್ ಓವರ್​ಗಳಲ್ಲಿ 47 ಸಿಕ್ಸ್ ಬಾರಿಸಿದ್ದು ದಾಖಲೆಯಾಗಿತ್ತು. ಇದೀಗ ಬಾಂಗ್ಲಾದೇಶ್ ವಿರುದ್ದ 6 ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ನಜೀಬುಲ್ಲಾ ಝರ್ದಾನ್ ಅಪರೂಪದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್