Viral Video: ಬಾಬರ್ಗೆ ಭುವಿಯ ಬೌನ್ಸರ್ ಭಯ: ವಿಡಿಯೋ ವೈರಲ್..!
Asia Cup 2022: ಸೂಪರ್-4 ಹಂತದಲ್ಲಿ ಭಾರತ-ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಅವರ ಶಾರ್ಟ್ ಬಾಲ್ ಬೌನ್ಸರ್ ಎಸೆತಗಳಿಗೆ ಹೇಗೆ ಉತ್ತರ ನೀಡಬೇಕೆಂದು ಬಾಬರ್ ಆಜಂ ಅಭ್ಯಾಸ ನಡೆಸುತ್ತಿದ್ದಾರೆ.
ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ದ ಪಾಕಿಸ್ತಾನ ಹೀನಾಯ ಸೋಲನುಭವಿಸಿತು. ಪಾಕ್ ತಂಡದ ಈ ಸೋಲಿಗೆ ಪ್ರಮುಖ ಕಾರಣವೆಂದರೆ ಬ್ಯಾಟಿಂಗ್ ವೈಫಲ್ಯ. ಅದರಲ್ಲೂ ಆರಂಭಿಕ ಆಟಗಾರ ಬಾಬರ್ ಆಜಂ ಬೇಗನೆ ಔಟಾಗಿದ್ದು ತಂಡಕ್ಕೆ ದುಬಾರಿಯಾಯಿತು. ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದ ಬಾಬರ್ ಆಜಂರನ್ನು ಭುವನೇಶ್ವರ್ ಕುಮಾರ್ ಬೌನ್ಸರ್ ಬಲೆಗೆ ಬೀಳಿಸಿದ್ದರು.
ಭುವಿ ಎಸೆದ ಶಾರ್ಟ್ ಬಾಲ್ ಬೌನ್ಸರ್ಗೆ ಭರ್ಜರಿ ಉತ್ತರ ನೀಡಲು ಹೋದ ಬಾಬರ್ 30 ಯಾರ್ಡ್ ಸರ್ಕಲ್ನಲ್ಲೇ ಕ್ಯಾಚ್ ನೀಡಿದ್ದರು. ಹೀಗೆ ಶಾರ್ಟ್ ಬಾಲ್ಗೆ ಔಟಾಗಿದ್ದ ಬಾಬರ್ ಇದೀಗ ಬೌನ್ಸರ್ ಎಸೆತಕ್ಕೆ ಬ್ಯಾಟಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಭಾರತ ವಿರುದ್ಧದ ಆ ಸೋಲು ಪಾಕ್ ನಾಯಕನ ಮನದಲ್ಲಿ ನೆಲೆಯೂರಿದ್ದು, ಈಗ ಅದನ್ನು ಮೆಟ್ಟಿ ನಿಲ್ಲಲು ವಿಶೇಷ ತಯಾರಿಯನ್ನು ಆರಂಭಿಸಿದ್ದಾರೆ.
ಏಕೆಂದರೆ ಸೂಪರ್-4 ಹಂತದಲ್ಲಿ ಭಾರತ-ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಅವರ ಶಾರ್ಟ್ ಬಾಲ್ ಬೌನ್ಸರ್ ಎಸೆತಗಳಿಗೆ ಹೇಗೆ ಉತ್ತರ ನೀಡಬೇಕೆಂದು ಬಾಬರ್ ಆಜಂ ಅಭ್ಯಾಸ ನಡೆಸುತ್ತಿದ್ದಾರೆ.
ಹಾಂಗ್ ಕಾಂಗ್ ವಿರುದ್ದದ ಪಂದ್ಯಕ್ಕಾಗಿ ಬಾಬರ್ ಆಜಂ ಅಭ್ಯಾಸ ಶುರು ಮಾಡಿದ್ದಾರೆ. ಈ ವೇಳೆ ಹೆಚ್ಚಾಗಿ ಶಾರ್ಟ್ ಬಾಲ್ ಎಸೆತಗಳಲ್ಲಿ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ. ಅಂದರೆ ಭುವನೇಶ್ವರ್ ಕುಮಾರ್ ಶಾರ್ಟ್ ಬಾಲ್ ಎಸೆತಕ್ಕೆ ಔಟಾಗಿದ್ದ ಬಾಬರ್ ಇದೀಗ ಅದೇ ತಪ್ಪನ್ನು ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಸೂಪರ್-4 ಹಂತಕ್ಕೇರುವ ಮುನ್ನವೇ ಬಾಬರ್ ಆಜಂ ಭುವನೇಶ್ವರ್ ಕುಮಾರ್ ಅವರ ನಿಧಾನಗತಿ ಬೌನ್ಸರ್ಗಳನ್ನು ಎದುರಿಸಲು ಸಜ್ಜಾಗುತ್ತಿರುವುದು ಸ್ಪಷ್ಟ. ಹೀಗಾಗಿ ಟೀಮ್ ಇಂಡಿಯಾ ವಿರುದ್ದದ ಮುಂದಿನ ಪಂದ್ಯದಲ್ಲಿ ಬಾಬರ್ ಕಡೆಯಿಂದ ಭರ್ಜರಿ ಇನಿಂಗ್ಸ್ ಅನ್ನು ಪಾಕ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
Published On - 2:12 pm, Wed, 31 August 22