ಇಂದಿನಿಂದ ಆರಂಭವಾಗಿರುವ ದುಲೀಪ್ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶುಕ್ರವಾರ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬಿರುಸಿನ ದ್ವಿಶತಕ ಗಳಿಸಿದ ನಂತರ ಪಶ್ಚಿಮ ವಲಯ ನಾಯಕ ರಹಾನೆ ಕೂಡ ದ್ವಿಶತಕ ಸಿಡಿಸಿದ್ದಾರೆ. ಜೈಸ್ವಾಲ್ ಮತ್ತು ರಹಾನೆ ಅವರ ದ್ವಿಶತಕ ಮತ್ತು ಪೃಥ್ವಿ ಶಾ ಅವರ ಶತಕದ ಆಧಾರದ ಮೇಲೆ ಪಶ್ಚಿಮ ವಲಯ ತಂಡ ಈಶಾನ್ಯ ವಲಯದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಸ್ಕೋರ್ ಗಳಿಸಿದೆ. ರಹಾನೆ 135 ಎಸೆತಗಳಲ್ಲಿ ಶತಕ ಪೂರೈಸಿದರು. ಇದರ ನಂತರ, ಅವರು ಮುಂದಿನ 100 ರನ್‌ಗಳನ್ನು ಇನ್ನಷ್ಟು ಬಿರುಸಿನ ರೀತಿಯಲ್ಲಿ ಪೂರ್ಣಗೊಳಿಸಿ, ಇಟ್ಟಾರೆ 264 ಎಸೆತಗಳಲ್ಲಿ ಅಜೇಯ 207 ರನ್ ಗಳಿಸಿದ್ದಾರೆ.
ಬಿಗ್ ಸ್ಕೋರ್ ಕಲೆಹಾಕಿದ ಪಶ್ಚಿಮ ವಲಯ
ಪಶ್ಚಿಮ ವಲಯ 2 ದ್ವಿಶತಕ ಮತ್ತು ಶತಕದ ಆಧಾರದ ಮೇಲೆ 2 ವಿಕೆಟ್ ನಷ್ಟಕ್ಕೆ 590 ರನ್ ಗಳಿಸಿದೆ. ರಾಹುಲ್ ತ್ರಿಪಾಠಿ 25 ರನ್ ಗಳಿಸಿ ಕ್ರೀಸ್‌ನಲ್ಲಿರುವ ರಹಾನೆಗೆ ಆಸರೆಯಾಗಿದ್ದಾರೆ. ಪಂದ್ಯದ ಕುರಿತು ಮಾತನಾಡುವುದಾದರೆ, ಶಾ ಮತ್ತು ಜೈಸ್ವಾಲ್ ನಡುವೆ 206 ರನ್‌ಗಳ ಜೊತೆಯಾಟವಿತ್ತು. ಶಾ 121 ಎಸೆತಗಳಲ್ಲಿ 113 ರನ್ ಗಳಿಸಿದರು. ಈ ವೇಳೆ ಅವರು 11 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದರು. ಶಾ ಪೆವಿಲಿಯನ್ಗೆ ಮರಳಿದ ಬಳಿಕ ನಾಯಕ ರಹಾನೆ ಜತೆಗೂಡಿ 333 ರನ್‌ಗಳ ಅದ್ಭುತ ಜೊತೆಯಾಟವನ್ನು ಹಂಚಿಕೊಂಡರು. ಪಶ್ಚಿಮ ವಲಯ 539 ರನ್‌ಗಳಿಗೆ ಜೈಸ್ವಾಲ್ ರೂಪದಲ್ಲಿ ಎರಡನೇ ಹೊಡೆತವನ್ನು ಪಡೆಯಿತು. ಜೈಸ್ವಾಲ್ 321 ಎಸೆತಗಳಲ್ಲಿ 228 ರನ್ ಗಳಿಸಿದರು. ಈ ವೇಳೆ ಅವರು 22 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಬಾರಿಸಿದರು.
Stumps Day 2: West Zone – 590/2 in 122.6 overs (R A Tripathi 25 off 38, Ajinkya Rahane 207 off 264) #WZvNEZ #DuleepTrophy #QF1
— BCCI Domestic (@BCCIdomestic) September 9, 2022
Boys are back?@imVkohli @ajinkyarahane88 https://t.co/C7v5kAQK3v
— Style & Substance (@Sumanth_279) September 9, 2022
24 ಬೌಂಡರಿ ಬಾರಿಸಿದ ರಹಾನೆ
ರಹಾನೆ ಮತ್ತು ತ್ರಿಪಾಠಿ ನಡುವೆ 51 ರನ್‌ಗಳ ಮುರಿಯದ ಜೊತೆಯಾಟವೂ ಇದೆ. ರಹಾನೆ ಇದುವರೆಗೆ 18 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡ 24 ಬೌಂಡರಿಗಳನ್ನು ಬಾರಿಸಿದ್ದಾರೆ. ವಾಸ್ತವವಾಗಿ ರಹಾನೆ ಮಂಡಿರಜ್ಜು ಗಾಯದಿಂದಾಗಿ IPL 2022 ರಿಂದ ಹೊರಗುಳಿದಿದ್ದರು. ಗಾಯದ ಕಾರಣ ಮುಂಬೈ ಪರ ರಣಜಿ ಟ್ರೋಫಿ ನಾಕೌಟ್ ಪಂದ್ಯವನ್ನಾಡಲು ಸಾಧ್ಯವಾಗಲಿಲ್ಲ. ಇದೀಗ ಸಂಪೂರ್ಣ ಫಿಟ್ ಆಗಿದ್ದು, ದ್ವಿಶತಕ ಬಾರಿಸುವ ಮೂಲಕ ಫಿಟ್ ನೆಸ್ಗೆ ಪುರಾವೆಯನ್ನೂ ನೀಡಿದ್ದಾರೆ.
Published On - 5:07 pm, Fri, 9 September 22