Ranji Trophy 2021-22: ಸೀನಿಯರ್ ರಹಾನೆ, ಜೂನಿಯರ್ ಯಶ್ ಶತಕದ ಮೂಲಕ 2 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಚಾಲನೆ

Ajinkya Rahane and Yash Dhull Century: ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಜಿಂಕ್ಯಾ ರಹಾನೆ ಬ್ಯಾಟ್​ನಿಂದ ಉಪಯುಕ್ತವಾದ ಶತಕ ಮೂಡಿಬಂದರೆ, ಚೊಚ್ಚಲ ರಣಜಿ ಟ್ರೋಫಿ ಆಡುತ್ತಿರುವ ಯಶ್ ಧುಲ್ ಸೆಂಚುರಿ ಬಾರಿಸಿ ಟೀಮ್ ಇಂಡಿಯಾದಲ್ಲಿ ಸ್ಥಾನ ಹುಡುಕುತ್ತಿದ್ದಾರೆ.

Ranji Trophy 2021-22: ಸೀನಿಯರ್ ರಹಾನೆ, ಜೂನಿಯರ್ ಯಶ್ ಶತಕದ ಮೂಲಕ 2 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಚಾಲನೆ
Ajinkya Rahane and Yash Dhull
Follow us
TV9 Web
| Updated By: Vinay Bhat

Updated on: Feb 18, 2022 | 11:11 AM

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ದೇಶೀಯ ಟೆಸ್ಟ್ ಕ್ರಿಕೆಟ್ ರಣಜಿ ಟ್ರೋಫಿಗೆ (Ranji Trophy 2021-22) ಭರ್ಜರಿ ಚಾಲನೆ ಸಿಕ್ಕಿದ್ದು ಮೊದಲ ದಿನವೇ ಸಾಕಷ್ಟು ರೋಚಕತೆಗೆ ಸಾಕ್ಷಿಯಾಯಿತು. ಜೈವಿಕ ಸುರಕ್ಷಾ ವಲಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಯುತ್ತಿರುವ ರಣಜಿ ಕ್ರಿಕೆಟ್ ಟೂರ್ನಿಯ ಮೊದಲ ಹಂತದ ಲೀಗ್‌ ಮುಖಾಮುಖಿಯಲ್ಲಿ ಒಟ್ಟು 19 ಪಂದ್ಯಗಳು ಏಕಕಾಲಕ್ಕೆ ಸೆಣೆಸಾಟ ನಡೆಸುತ್ತಿವೆ. ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳು ಶತಕದ ಮಳೆಯನ್ನೇ ಸುರಿಸಿದರು. ಅದರಲ್ಲೂ ಪ್ರಮುಖವಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಜಿಂಕ್ಯಾ ರಹಾನೆ (Ajinkya Rahane) ಬ್ಯಾಟ್​ನಿಂದ ಉಪಯುಕ್ತವಾದ ಶತಕ ಮೂಡಿಬಂದರೆ, ಚೊಚ್ಚಲ ರಣಜಿ ಆಡುತ್ತಿರುವ ಅಂಡರ್- 19 ವಿಶ್ವಕಪ್ ವಿಜೇತ ತಂಡದ ನಾಯಕ ಯಶ್ ಧುಲ್ (Yash Dhull) ಸೆಂಚುರಿ ಬಾರಿಸಿ ದಾಖಲೆ ಬರೆದು ಟೀಮ್ ಇಂಡಿಯಾದಲ್ಲಿ ಸ್ಥಾನ ಹುಡುಕುತ್ತಿದ್ದಾರೆ. ಇದರ ನಡುವೆ ಕರ್ನಾಟಕದ ಮನೀಶ್ ಪಾಂಡೆ ಬ್ಯಾಟ್​ನಿಂದ ಸ್ಫೋಟಕ ಶತಕ ಮೂಡಿಬಂತು.

ರಣಜಿ ಟ್ರೋಫಿಯಲ್ಲಿ ಡೆಲ್ಲಿ ತಂಡದ ಪರ ಆಡುತ್ತಿರುವ ಯಶ್ ಧುಲ್ ತಮಿಳುನಾಡು ವಿರುದ್ಧ ಅಬ್ಬರಿಸಿದರು. ಕೇವಲ 150 ಎಸೆತಗಳಲ್ಲಿ 18 ಬೌಂಡರಿ ಬಾರಿಸಿ 113 ರನ್ ಸಿಡಿಸಿದರು. ಈ ಮೂಲಕ ರಣಜಿ ಟ್ರೋಫಿ ಕ್ರಿಕೆಟ್​ನಲ್ಲಿ ಶತಕದೊಂದಿಗೆ ಪಾದಾರ್ಪಣೆ ಮಾಡಿದರು. ದೆಹಲಿ ತಂಡವು ಕೇವಲ 7 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ 19 ವರ್ಷದ ಯಶ್ ಧುಲ್ ತಂಡವನ್ನು ಮುನ್ನಡೆ ಸಾಧಿಸಿದರು. ಮೂರನೇ ವಿಕೆಟ್‌ಗೆ ನಿತೀಶ್ ರಾಣಾ ಅವರೊಂದಿಗೆ ಅದ್ಭುತ ಅರ್ಧಶತಕದ ಜೊತೆಯಾಟವಾಡಿದರು. ಇತ್ತೀಚೆಗಷ್ಟೆ ನಡೆದ ಐಪಿಎಲ್ 2022 ಮೆಗಾ ಹರಾಜಿನಲ್ಲಿ ಯಶ್ ಧುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 50 ಲಕ್ಷ ರೂ. ನೀಡಿ ಖರೀದಿಸಿದೆ.

ಮೊದಲ ದಿನದಾಟ ಮುಗಿದ ಬಳಿಕ ಮಾತನಾಡಿದ ಯಶ್, “ಕಳೆದ 2-3 ವಾರಗಳು ನನಗೆ ಅದ್ಭುತವಾಗಿದೆ. ಕೆಲವು ದೊಡ್ಡ ವಿಷಯಗಳು ನನ್ನ ಜೀವನದಲ್ಲಿ ನಡೆದಿವೆ. ನನ್ನನ್ನು ನಾನು ಸಾಭೀತು ಪಡಿಸಲು ಅವಕಾಶ ಮೂಡಿಬಂದಿದೆ. ಅದನ್ನು ಚೆನ್ನಾಗಿ ಉಪಯೋಗಿಸುತ್ತೇನೆ. ಎದುರಾಳಿಯನ್ನು ಅಟಾಕ್ ಮಾಡುವುದು ನನ್ನ ನ್ಯಾಚುರಲ್ಆಟ, ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸಬೇಕು ಎಂಬುದನ್ನು ಅರಿತಿದ್ದೇನೆ,” ಎಂದು ಹೇಳಿದ್ದಾರೆ.

ಇನ್ನು ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿರುವ ಅಜಿಂಕ್ಯಾ ರಹಾನೆ ರಣಜಿಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಶತಕ ಸಿಡಿಸಿ ಆಸರೆಯಾಗಿ ನಿಂತಿದ್ದಾರೆ. 50 ರನ್​ಗೂ ಮೊದಲೇ 3 ವಿಕೆಟ್ ಕಳೆದುಕೊಂಡಿದ್ದಾಗ ಸರ್ಫರಾಜ್ ಖಾನ್ ಜೊತೆಗೂಡಿ ದ್ವಿಶತಕದ ಜೊತೆಯಾಟ ಆಡುತ್ತಿದ್ದಾರೆ. ರಹಾನೆ ಮುಂಬೈ ತಂಡದ ಪರ ಕಣಕ್ಕಿಳಿದಿದ್ದರೆ, ಸೌರಾಷ್ಟ್ರ ತಂಡದ ಪರ ಚೇತೇಶ್ವರ್ ಪೂಜಾರ ಕಣಕ್ಕಿಳಿದಿದ್ದಾರೆ. ಈ ಇಬ್ಬರಿಗೂ ಸಹ ಟೀಮ್ ಇಂಡಿಯಾ ಆಯ್ಕೆಗಾರರು ಷರತ್ತು ವಿಧಿಸಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಬೇಕೆಂದರೆ ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿಕೊಳ್ಳಲೇಬೇಕಾಗಿದೆ. ಒಂದುವೇಳೆ ಈ ರಣಜಿ ಟ್ರೋಫಿಯಲ್ಲಿಯೂ ಈ ಇಬ್ಬರು ಆಟಗಾರರು ವಿಫಲರಾದರೆ ಟೀಮ್ ಇಂಡಿಯಾ ಬಾಗಿಲು ಇಬ್ಬರಿಗೂ ಶಾಶ್ವತವಾಗಿ ಮುಚ್ಚಿದ ಹಾಗೆ ಎಂದು ಹೇಳಬಹುದು.

ಇನ್ನು ಕರ್ನಾಟಕ ತನ್ನ ಮೊದಲ ಪಂದ್ಯದಲ್ಲೇ ಭರ್ಜರಿ ಆರಂಭ ಪಡೆದುಕೊಂಡಿದೆ. ರೈಲ್ವೇಸ್​ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಾಯಕ ಮನೀಶ್ ಪಾಂಡೆ ಮತ್ತು ಕೆ ಸಿದ್ಧಾರ್ಥ್​​ ಅವರ ಭರ್ಜರಿ ಶತಕದಿಂದ ಬೃಹತ್​ ಮೊತ್ತದತ್ತ ದಾಪುಗಾಲಿಟ್ಟಿದೆ. 110 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡ ಸಂದರ್ಭದಲ್ಲಿ ಒಂದಾದ ಕೆ ಸಿದ್ಧಾರ್ಥ್​ ಮತ್ತು ಮನೀಶ್ ಪಾಂಡೆ ದ್ವಿಶತಕದ ಜೊತೆಯಾಟ ನಡೆಸಿದು. ಮನೀಶ್ ಪಾಂಡೆ ಕೇವಲ 121 ಎಸೆತಗಳಲ್ಲಿ 12 ಬೌಂಡರಿ, 10 ಸಿಕ್ಸರ್​ ಸಹಿತ 156 ರನ್​ಗಳಿಸಿ ಔಟಾದರು. ಸಿದ್ಧಾರ್ಥ್ 150ರ ಅಂಚಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

Simon Katich: ಸನ್​ರೈಸರ್ಸ್ ತಂಡದಲ್ಲಿ ಸಂಚಲನ: ಹರಾಜಿನ ಬೆನ್ನಲ್ಲೇ ಕೊಚ್ ಹುದ್ದೆ ತ್ಯಜಿಸಿ ಹೊರ ನಡೆದ ಕ್ಯಾಟಿಚ್

IND vs WI T20: 2ನೇ ಟಿ20ಯಿಂದ ಸ್ಟಾರ್ ಪ್ಲೇಯರ್ ಔಟ್: ಭಾರತ ಪರ ಮತ್ತೊಬ್ಬ ಆಟಗಾರ ಪದಾರ್ಪಣೆ?

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ