ದುನಿತ್ ವೆಲ್ಲಲಾಗೆ ನಂತರ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ತಂದೆ ನಿಧನ
Alex Carey's Father Passes Away: ಕಳೆದ ವಾರವಷ್ಟೇ ಶ್ರೀಲಂಕಾದ ಯುವ ಕ್ರಿಕೆಟ್ ಆಟಗಾರ ದುನಿತ್ ವೆಲ್ಲಲಾಗೆ ಅವರ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಇದೀಗ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಅವರ ತಂದೆ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಅಲೆಕ್ಸ್ ಕ್ಯಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

ಶ್ರೀಲಂಕಾದ ಉದಯೋನ್ಮುಖ ಕ್ರಿಕೆಟಿಗ ದುನಿತ್ ವೆಲ್ಲಲಾಗೆ ಅವರ ತಂದೆ ಸುರಂಗ ವೆಲ್ಲಲಾಗೆ ಕೆಲವೇ ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ವಾಸ್ತವವಾಗಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ಸಮಯದಲ್ಲಿ ದುನಿತ್ ವೆಲ್ಲಲಾಗೆ ಒಂದೇ ಓವರ್ನಲ್ಲಿ 5 ಸಿಕ್ಸರ್ ಹೊಡೆಸಿಕೊಂಡಿದ್ದರು. ಈ ಆಘಾತದ ನಡುವೆಯೇ ಅವರ ತಂದೆ ಇಹಲೋಕ ತ್ಯಜಿಸಿದ್ದರು. ಇದರಿಂದಾಗಿ ತಂಡವನ್ನು ತೊರೆದಿದ್ದ ದುನಿತ್ ವೆಲ್ಲಲಾಗೆ ತಂದೆಯ ಮುಖವನ್ನು ಕೊನೆಯ ಬಾರಿಗೆ ನೋಡಿ ಮತ್ತೆ ತಂಡವನ್ನು ಕೂಡಿಕೊಂಡಿದ್ದರು. ಆದಾಗ್ಯೂ ಲಂಕಾ ತಂಡಕ್ಕೆ ಏಷ್ಯಾಕಪ್ ಫೈನಲ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ಕ್ಯಾನ್ಸರ್ ಜೊತೆ ದೀರ್ಘ ಕಾಲದಿಂದ ಹೋರಾಟ ನಡೆಸಿದ್ದ ಆಸ್ಟ್ರೇಲಿಯಾದ ಸ್ಟಾರ್ ವಿಕೆಟ್ ಕೀಪರ್ – ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಅವರ ತಂದೆ ಒಂದು ಕೊನೆಯುಸಿರೆಳೆದಿದ್ದಾರೆ.
ಅಲೆಕ್ಸ್ ಕ್ಯಾರಿ ತಂದೆ ನಿಧನ
ಆಸ್ಟ್ರೇಲಿಯಾದ ಸ್ಟಾರ್ ವಿಕೆಟ್ ಕೀಪರ್ – ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಅವರ ತಂದೆ ಗೋರ್ಡನ್ ಕ್ಯಾರಿ ನಿಧನರಾಗಿದ್ದಾರೆ. ಅಲೆಕ್ಸ್ ಕ್ಯಾರಿ ತಮ್ಮ ತಂದೆಯ ನಿಧನದ ವಿಚಾರವನ್ನು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. 2021 ರಲ್ಲಿ ಗೋರ್ಡನ್ ಕ್ಯಾರಿಗೆ ಲಿಂಫೋಸೈಟಿಕ್ ಲ್ಯುಕೇಮಿಯಾ (CLL) ಮತ್ತು ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ( ALL) ಇರುವುದು ಪತ್ತೆಯಾಯಿತು. ಅನಾರೋಗ್ಯದ ಕಾರಣ ಅವರು ಡಿಸೆಂಬರ್ 2021 ರಲ್ಲಿ ಗಬ್ಬಾದಲ್ಲಿ ನಡೆದ ತಮ್ಮ ಮಗನ ಟೆಸ್ಟ್ ಚೊಚ್ಚಲ ಪಂದ್ಯಕ್ಕೆ ಗೈರಾಗಿದ್ದರು.
ಇದೀಗ ತಂದೆಯ ನಿಧನಕ್ಕೆ ಅಲೆಕ್ಸ್ ಕ್ಯಾರಿ ಇನ್ಸ್ಟಾಗ್ರಾಮ್ನಲ್ಲಿ ದುಃಖ ವ್ಯಕ್ತಪಡಿಸಿದ್ದು, ತಮ್ಮ ತಂದೆಯೊಂದಿಗಿನ ಫೋಟೋ ಹಂಚಿಕೊಂಡಿರುವ ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಅಪ್ಪಾ, ನಾನು ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ವಾಸ್ತವವಾಗಿ ಅಲೆಕ್ಸ್ ಕ್ಯಾರಿ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದ ಟಿ20 ತಂಡದಲ್ಲಿ ಅಲೆಕ್ಸ್ ಕ್ಯಾರಿ ಸ್ಥಾನ ಪಡೆದಿದ್ದಾರೆ. ಈ ಸರಣಿಯ ಮೊದಲ ಟಿ20 ಪಂದ್ಯವು ಅಕ್ಟೋಬರ್ 1 ರಂದು ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್‌ನಲ್ಲಿ ನಡೆಯಲಿದೆ . ತಂದೆಯ ಅಗಲಿಕೆಯ ನೋವಿನಲ್ಲಿರುವ ಅಲೆಕ್ಸ್ ಈ ಪ್ರವಾಸಕ್ಕೆ ಹೋಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಲೆಕ್ಸ್ ಕ್ಯಾರಿಯ ಕ್ರಿಕೆಟ್ ವೃತ್ತಿಜೀವನ
ಅಲೆಕ್ಸ್ ಕ್ಯಾರಿ ಪ್ರಸ್ತುತ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರು. ಅವರು ಮೂರು ಸ್ವರೂಪಗಳಲ್ಲಿ ಆಡುತ್ತಾರೆ. ಆಸ್ಟ್ರೇಲಿಯಾ ಪರ ಅವರು ಇದುವರೆಗೆ 43 ಟೆಸ್ಟ್ , 83 ಏಕದಿನ ಮತ್ತು 39 ಟಿ20 ಪಂದ್ಯಗಳನ್ನು ಆಡಿದ್ದು, 4,481 ರನ್ ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24 ಅರ್ಧಶತಕಗಳು ಮತ್ತು ಮೂರು ಶತಕಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
