Allan donald: ದಕ್ಷಿಣ ಆಫ್ರಿಕಾದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಭಾರತಕ್ಕೆ ಟಿಪ್ಸ್ ಕೊಟ್ಟ ಆಫ್ರಿಕಾ ಆಟಗಾರ
South Africa vs India 2nd Test: ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಜನವರಿ 3ಕ್ಕೆ ಶುರುವಾಗಲಿದೆ. ಹೀಗಿರುವಾಗ ಆಫ್ರಿಕಾ ಮಾಜಿ ಮಾರಕ ಬೌಲರ್ ಅಲನ್ ಡೊನಾಲ್ಡ್ ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ಸಲಹೆ ನೀಡಿ ರನ್ ಗಳಿಸಲು ಹೇಗೆ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ.
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ತೀರಾ ಕಳಪೆ ಆಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್ ಗಳಿಸಿದರೆ ಎರಡನೇ ಇನಿಂಗ್ಸ್‌ನಲ್ಲಿ ತಂಡ ಕಲೆಹಾಕಿದ್ದು ಕೇವಲ 131 ರನ್. ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಎದುರಿಸುವುದು ರೋಹಿತ್ ಪಡೆಗೆ ತುಂಬಾ ಕಷ್ಟಕರವಾಗಿತ್ತು. ಈ ಕಾರಣದಿಂದಲೇ ಭಾರತ ಪಂದ್ಯ ಸೋತಿತ್ತು. ಇದೀಗ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀಡಿ, ಅವರು ಯಾವ ರೀತಿಯ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಮಾಜಿ ಮಾರಕ ಬೌಲರ್ ಅಲನ್ ಡೊನಾಲ್ಡ್ ಟೀಮ್ ಇಂಡಿಯಾದ ಬ್ಯಾಟರ್ಗಳಿಗೆ ಸಲಹೆ ನೀಡಿ ರನ್ ಗಳಿಸಲು ಹೇಗೆ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಇಂಡೋ-ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಜನವರಿ 3ಕ್ಕೆ ಶುರುವಾಗಲಿದ್ದು, ಈ ಮೈದಾನದಲ್ಲಿ ಟೀಮ್ ಇಂಡಿಯಾಗೆ ಒಂದೂ ಗೆಲುವು ಸಿಕ್ಕಿಲ್ಲ. ಇಲ್ಲಿ ಭಾರತ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಡೊನಾಲ್ಡ್ ಹೇಳಿದ್ದಾರೆ.
INDW vs AUSW 2nd ODI: ಭಾರತ-ಆಸೀಸ್ ಏಕದಿನ ಪಂದ್ಯದಲ್ಲಿ ಭಾರೀ ಅವಘಡ: ಸ್ನೇಹ್ ರಾಣಗೆ ಮೈದಾನದಲ್ಲೇ ಅನಾರೋಗ್ಯ
ಸಚಿನ್ ತರಹ ಬ್ಯಾಟ್ ಮಾಡಿ
ಯಾವುದೇ ಭಾರತೀಯ ಬ್ಯಾಟರ್ ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂದರೆ ಅದು ಸಚಿನ್ ತೆಂಡೂಲ್ಕರ್ ಎಂದು ಡೊನಾಲ್ಡ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಆಫ್ರಿಕಾದಲ್ಲಿ ಬ್ಯಾಟಿಂಗ್ ಮಾಡುವಾಗ ಸಚಿನ್ ಮಿಡಲ್ ಸ್ಟಂಪ್ ಮೇಲೆ ನಿಲ್ಲದೆ ಮೂವ್ ಮೆಂಟ್ ಮಾಡುತ್ತಿದ್ದರು. ಸಚಿನ್ ಮುಂದೆ ಬಂದು ಚೆಂಡನ್ನು ಗಮನಿಸಿ ಚೆನ್ನಾಗಿ ಬಿಡುತ್ತಿದ್ದರು. ಆಫ್ರಿಕಾದಲ್ಲಿ ಚೆಂಡನ್ನು ಬಿಡುವುದು ಹೇಗೆ ಎಂದು ಬ್ಯಾಟ್ಸ್‌ಮನ್‌ಗೆ ತಿಳಿದಿದ್ದರೆ ಅವನು ರನ್ ಗಳಿಸಬಹುದು ಎಂದು ಡೊನಾಲ್ಡ್ ಹೇಳಿದ್ದಾರೆ. ಕೇಪ್ ಟೌನ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ, ಆದ್ದರಿಂದ ಇಲ್ಲಿ ಬ್ಯಾಟ್ಸ್‌ಮನ್‌ಗಳು ತುಂಬಾ ಕಷ್ಟಪಡಬೇಕಾಗುತ್ತದೆ ಎಂಬುದು ಡೊನಾಲ್ಡ್ ಮಾತು.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಇಬ್ಬರು ಬ್ಯಾಟ್ಸ್‌ಮನ್‌ಗಳಲ್ಲಿ ಸಚಿನ್ ಕೂಡ ಒಬ್ಬರು. ಸಚಿನ್ ಆಫ್ರಿಕಾದಲ್ಲಿ 15 ಟೆಸ್ಟ್ ಪಂದ್ಯಗಳಲ್ಲಿ 1161 ರನ್ ಗಳಿಸಿದ್ದಾರೆ. ಇವರನ್ನು ಹೊರತುಪಡಿಸಿ ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸಚಿನ್ ಆಫ್ರಿಕಾದಲ್ಲಿ ಐದು ಶತಕ ಮತ್ತು ಮೂರು ಅರ್ಧ ಶತಕ ಸಿಡಿಸಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ