IND vs SA 2nd Test: ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ?: ಹೆಚ್ಚು ರನ್ ಗಳಿಸಿದ್ದು ಯಾರು?

Cape Town Newlands Stadium: ನ್ಯೂಲ್ಯಾಂಡ್ಸ್‌ನಲ್ಲಿ ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ, ಭಾರತ ನಾಲ್ಕು ಬಾರಿ ಸೋಲು ಅನುಭವಿಸಿದೆ ಮತ್ತು ಎರಡು ಬಾರಿ ಮಾತ್ರ ಡ್ರಾ ಸಾಧಿಸಲು ಸಾಧ್ಯವಾಯಿತು. ಇದೀಗ ಸರಣಿ ಸೋಲು ತಪ್ಪಿಸಲು ಭಾರತ ಈ ಬಾರಿ ಇತಿಹಾಸ ಸೃಷ್ಟಿಸಬೇಕಿದೆ.

IND vs SA 2nd Test: ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ?: ಹೆಚ್ಚು ರನ್ ಗಳಿಸಿದ್ದು ಯಾರು?
Team India in Cape Town
Follow us
Vinay Bhat
|

Updated on: Jan 01, 2024 | 10:44 AM

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಅವಮಾನಕರ ಸೋಲನ್ನು ಅನುಭವಿಸಿದ ನಂತರ, ಭಾರತ ಕ್ರಿಕೆಟ್ ತಂಡವು ಇದೀಗ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು (India vs South Africa) ಎದುರಿಸಲು ಸಜ್ಜಾಗುತ್ತಿದೆ. ಎರಡು ಟೆಸ್ಟ್‌ಗಳ ಸರಣಿಯಲ್ಲಿ ರೋಹಿತ್ ಶರ್ಮಾ ಪಡೆ 0-1 ಹಿನ್ನಡೆಯಲ್ಲಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಮೊದಲ ಟೆಸ್ಟ್ ಸೋತ ನಂತರ, ಈ ಬಾರಿಯೂ ಇತಿಹಾಸ ಸೃಷ್ಟಿಸುವ ಅವಕಾಶ ಕೈಚೆಲ್ಲಿತು. ಇದುವರೆಗೆ ಭಾರತ ಒಮ್ಮೆ ಮಾತ್ರ ಅವರ ನಾಡಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಆ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ. ಆದರೆ ಇದು ಸುಲಭದ ಕೆಲಸವಲ್ಲ, ಏಕೆಂದರೆ ಕೇಪ್ ಟೌನ್‌ನಲ್ಲಿ ಭಾರತ ಎಂದಿಗೂ ಟೆಸ್ಟ್ ಪಂದ್ಯವನ್ನು ಸಹ ಗೆದ್ದಿಲ್ಲ.

IND vs SA 2nd Test: ಅಭ್ಯಾಸಕ್ಕೆ ಮರಳಿದ ಟೀಮ್ ಇಂಡಿಯಾ ಪ್ಲೇಯರ್ಸ್: ಕೇಪ್ ಟೌನ್​ನಲ್ಲಿ ಕಠಿಣ ಪ್ರ್ಯಾಕ್ಟೀಸ್

ಇದನ್ನೂ ಓದಿ
Image
ಹೊಸ ವರ್ಷದಂದು ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ
Image
ದಕ್ಷಿಣ ಆಫ್ರಿಕಾದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಭಾರತಕ್ಕೆ ಟಿಪ್ಸ್ ಕೊಟ
Image
ಹೊಸ ವರ್ಷದಂದು ಶಾಕ್ ನೀಡಿದ ವಾರ್ನರ್: ಏಕದಿನ ಕ್ರಿಕೆಟ್​ನಿಂದ ನಿವೃತ್ತಿ
Image
2024 ರಲ್ಲಿ ಭಾರತ ಯಾರ ವಿರುದ್ಧ ಸರಣಿಯನ್ನು ಆಡಲಿದೆ?: ಇಲ್ಲಿದೆ ವೇಳಾಪಟ್ಟಿ

ನ್ಯೂಲ್ಯಾಂಡ್ಸ್‌ನಲ್ಲಿ ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ, ಭಾರತ ನಾಲ್ಕು ಬಾರಿ ಸೋಲು ಅನುಭವಿಸಿದೆ ಮತ್ತು ಎರಡು ಬಾರಿ ಮಾತ್ರ ಡ್ರಾ ಸಾಧಿಸಲು ಸಾಧ್ಯವಾಯಿತು. ಇದೀಗ ಸರಣಿ ಸೋಲು ತಪ್ಪಿಸಲು ಭಾರತ ಈ ಬಾರಿ ಇತಿಹಾಸ ಸೃಷ್ಟಿಸಬೇಕಿದೆ. ಪ್ರೋಟೀಸ್ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌ನ ಆರಂಭದ ಮೊದಲು, ಕೇಪ್‌ಟೌನ್‌ನಲ್ಲಿ ಇದುವರೆಗೆ ಆಡಿದ ಆರು ಟೆಸ್ಟ್‌ಗಳಲ್ಲಿ ಭಾರತೀಯ ಆಟಗಾರರ ಪ್ರದರ್ಶನದ ನೋಟ ಇಲ್ಲಿದೆ.

ಫಲಿತಾಂಶದ ಸಾರಾಂಶ: ಭಾರತ ಆಡಿರುವ 6 ಟೆಸ್ಟ್‌ಗಳಲ್ಲಿ 4 ಸೋಲು ಮತ್ತು 2 ಡ್ರಾ.

ಗರಿಷ್ಠ ಮೊತ್ತ: ಜನವರಿ 2, 2007 ರಂದು ದಕ್ಷಿಣ ಆಫ್ರಿಕಾ ವಿರುದ್ಧ 131.1 ಓವರ್‌ಗಳಲ್ಲಿ 414 ರನ್​ಗಳಿಗೆ ಆಲೌಟ್.

ಕನಿಷ್ಠ ಮೊತ್ತ: ಜನವರಿ 8, 2018 ರಂದು ದಕ್ಷಿಣ ಆಫ್ರಿಕಾ ವಿರುದ್ಧ 42.4 ಓವರ್‌ಗಳಲ್ಲಿ 135 ರನ್​ಗಳಿಗೆ ಆಲೌಟ್.

ಹೆಚ್ಚು ರನ್: ಸಚಿನ್ ತೆಂಡೂಲ್ಕರ್- ನಾಲ್ಕು ಟೆಸ್ಟ್‌ಗಳ ಏಳು ಇನ್ನಿಂಗ್ಸ್‌ಗಳಲ್ಲಿ 489 ರನ್.

ಗರಿಷ್ಠ ವೈಯಕ್ತಿಕ ಸ್ಕೋರ್: ಜನವರಿ 4, 1997 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಅವರು 254 ಎಸೆತಗಳಲ್ಲಿ 169 ರನ್ ಗಳಿಸಿದರು.

ಹೆಚ್ಚು 100: ಸಚಿನ್ ತೆಂಡೂಲ್ಕರ್ ಅವರಿಂದ ನಾಲ್ಕು ಟೆಸ್ಟ್‌ಗಳಲ್ಲಿ 2 ಶತಕ ಬಂದಿದೆ.

50ರ ಹೆಚ್ಚು: ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಿಂದ ತಲಾ 2 ಅರ್ಧಶತಕ ಬಂದಿದೆ.

ಅತಿ ಹೆಚ್ಚು ಸಿಕ್ಸರ್‌ಗಳು: ರಿಷಬ್ ಪಂತ್ ಅವರಿಂದ 4 ಸಿಕ್ಸರ್.

ಅತಿ ಹೆಚ್ಚು ವಿಕೆಟ್: ಜಾವಗಲ್ ಶ್ರೀನಾಥ್ ಎರಡು ಟೆಸ್ಟ್‌ಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 12 ವಿಕೆಟ್ ಪಡೆದಿದ್ದಾರೆ.

ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಇನಿಂಗ್ಸ್): ಜನವರಿ 5, 2011 ರಂದು ಹರ್ಭಜನ್ ಸಿಂಗ್ ಅವರಿಂದ 38 ಓವರ್‌ಗಳಲ್ಲಿ 120 ರನ್‌ಗಳಿಗೆ 7 ವಿಕೆಟ್.

ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಪಂದ್ಯ): ಜನವರಿ 2011 ರಲ್ಲಿ ಹರ್ಭಜನ್ ಸಿಂಗ್ ಅವರಿಂದ 65 ಓವರ್‌ಗಳಲ್ಲಿ 195 ರನ್‌ಗಳಿಗೆ 7 ವಿಕೆಟ್.

ಅತಿ ಹೆಚ್ಚು ಐದು ವಿಕೆಟ್ ಗಳಿಕೆ: ಹರ್ಭಜನ್ ಸಿಂಗ್, ಶ್ರೀಶಾಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಂದ ಒಂದು ಬಾರಿ.

ಅತಿ ಹೆಚ್ಚು ಕ್ಯಾಚ್‌ಗಳು: ಚೇತೇಶ್ವರ ಪೂಜಾರ ಮೂರು ಟೆಸ್ಟ್‌ಗಳಲ್ಲಿ 5 ಕ್ಯಾಚ್.

ಗರಿಷ್ಠ ಜೊತೆಯಾಟ: ಜನವರಿ 4, 1997 ರಂದು ಸಚಿನ್ ತೆಂಡೂಲ್ಕರ್ ಮತ್ತು ಮೊಹಮ್ಮದ್ ಅಜರುದ್ದೀನ್ ನಡುವೆ ಆರನೇ ವಿಕೆಟ್‌ಗೆ 222 ರನ್.

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಆಡಿದ ಆರು ಟೆಸ್ಟ್‌ಗಳಲ್ಲಿ ಭಾರತದ ಫಲಿತಾಂಶ

  • ಭಾರತವು ಜನವರಿ 1993 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಅನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
  • ಜನವರಿ 2-6, 1997 ರಂದು ದಕ್ಷಿಣ ಆಫ್ರಿಕಾ ಭಾರತವನ್ನು 282 ರನ್‌ಗಳಿಂದ ಸೋಲಿಸಿತು.
  • ಜನವರಿ 2-6, 2007 ರಂದು ನಡೆದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಐದು ವಿಕೆಟ್‌ಗಳಿಂದ ಗೆದ್ದಿತು.
  • ಜನವರಿ 2011 ರಲ್ಲಿ ಭಾರತ-ಆಫ್ರಿಕಾ ಟೆಸ್ಟ್ ಪಂದ್ಯವು ಡ್ರಾನಲ್ಲಿ ಮುಕ್ತಾಯಗೊಂಡಿತು.
  • ಜನವರಿ 5-8, 2018 ರಂದು ದಕ್ಷಿಣ ಆಫ್ರಿಕಾ ಭಾರತವನ್ನು 72 ರನ್‌ಗಳಿಂದ ಸೋಲಿಸಿತು.
  • ಜನವರಿ 11-14, 2022, ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಗೆದ್ದಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ