IPL 2021: ಐಪಿಎಲ್ ಪ್ರಸಾರ ಹಕ್ಕುಗಳಿಗಾಗಿ ಎರಡು ದೈತ್ಯ ಕಂಪನಿಗಳ ನಡುವೆ ಪೈಪೋಟಿ! ಯಾರಿಗೆ ಒಲಿಯಲಿದೆ ಅದೃಷ್ಟ

IPL Broadcasting Rights: ಐಪಿಎಲ್ ಪ್ರಸಾರ ಹಕ್ಕುಗಳಿಗಾಗಿ ಅಮೆಜಾನ್ ಮತ್ತು ರಿಲಯನ್ಸ್ ನಡುವೆ ಪೈಪೋಟಿ ಜೋರಾಗಿದೆ. ಮುಂದಿನ ಐದು ವರ್ಷಗಳಲ್ಲಿ ಐಪಿಎಲ್ ಪ್ರಸಾರ ಹಕ್ಕುಗಳು 40,000 ಕೋಟಿಯಿಂದ 50,000 ಕೋಟಿ ರೂ. ತಲುಪುವ ನಿರೀಕ್ಷೆ ಇದೆ.

IPL 2021: ಐಪಿಎಲ್ ಪ್ರಸಾರ ಹಕ್ಕುಗಳಿಗಾಗಿ ಎರಡು ದೈತ್ಯ ಕಂಪನಿಗಳ ನಡುವೆ ಪೈಪೋಟಿ! ಯಾರಿಗೆ ಒಲಿಯಲಿದೆ ಅದೃಷ್ಟ
ಐಪಿಎಲ್ ಸೀಸನ್ 15 ಗಾಗಿ ಆರ್​ಸಿಬಿ ತಂಡದ ನಾಯಕನನ್ನು ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ಅನುಭವಿ ಆಟಗಾರ ಫಾಫ್ ಡುಪ್ಲೆಸಿಸ್​ಗೆ ನಾಯಕನ ಪಟ್ಟ ಒಲಿದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಫಾಫ್ ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಫಾಫ್ ಆಯ್ಕೆಯ ಮೂಲಕ ಎಲ್ಲಾ 10 ಐಪಿಎಲ್ ತಂಡಗಳ ನಾಯಕರ ಆಯ್ಕೆ ಮುಗಿದಂತ್ತಾಗಿದೆ. ಎಲ್ಲಾ ತಂಡಗಳ ನಾಯಕರನ್ನು ನೋಡಿದರೆ, ಇದರಲ್ಲಿ 4 ಜನ ವಿಕೆಟ್ ಕೀಪರ್​ಗಳಿದ್ದರೆ, ಇಬ್ಬರು ವಿದೇಶಿಗರಿದ್ದಾರೆ. ಉಳಿದಂತೆ ನಾಯಕರ ಪಟ್ಟಿ ಹೀಗಿದೆ.
Follow us
TV9 Web
| Updated By: Vinay Bhat

Updated on: Feb 21, 2022 | 9:44 AM

ಐಪಿಎಲ್ ಪ್ರಸಾರ ಹಕ್ಕುಗಳಿಗಾಗಿ ಅಮೆಜಾನ್ (Amazon)ಮತ್ತು ರಿಲಯನ್ಸ್ (Reliance) ನಡುವೆ ಪೈಪೋಟಿ ಜೋರಾಗಿದೆ. ಮುಂದಿನ ಐದು ವರ್ಷಗಳಲ್ಲಿ ಐಪಿಎಲ್ ಪ್ರಸಾರ ಹಕ್ಕುಗಳು 40,000 ಕೋಟಿಯಿಂದ 50,000 ಕೋಟಿ ರೂ. ತಲುಪುವ ನಿರೀಕ್ಷೆ ಇದೆ. ಇದಕ್ಕಾಗಿ ಎಲ್ಲಾ ಕಂಪನಿಗಳು ಐಪಿಎಲ್‌ ಪ್ರಸಾರ ಹಕ್ಕುಗಳಿಗಾಗಿ (IPL broadcasting rights) ಶ್ರಮಿಸುತ್ತಿವೆ. ಸ್ಟಾರ್ ಇಂಡಿಯಾ 2018 ರಿಂದ 2022 ರವರೆಗಿನ ಹಕ್ಕನ್ನು 16,347 ಕೋಟಿಗೆ ಪಡೆದುಕೊಂಡಿತ್ತು. ಈಗ ಎರಡು ಪ್ರಮುಖ ಕಂಪನಿಗಳಾದ Amazon, Reliance ಮತ್ತು Sony ನಡುವೆ ಪೈಪೋಟಿ ಹೆಚ್ಚಾಗಿದೆ.

ಸಾಂಪ್ರದಾಯಿಕ ಮಾಧ್ಯಮ ಕಂಪನಿಗಳು ಈಗ ಭಾರತದ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ರಿಲಯನ್ಸ್ ಮತ್ತು ಅಮೆಜಾನ್‌ನಂತಹ ದೈತ್ಯರಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ. ವಿಶ್ವದ ಶ್ರೀಮಂತ ಲೀಗ್ ಐಪಿಎಲ್ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಸೋನಿ ಪಿಕ್ಚರ್ಸ್ ಜೊತೆ ಅಮೆಜಾನ್ ಬಿಡ್ ಮಾಡಲು ವಲಯ ತಯಾರಿ ನಡೆಸಿದೆ. 21,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿದ್ದು, ಪ್ರೈಮ್ ವಿಡಿಯೋಗಳು, ಸೋನಿ ಪಿಕ್ಚರ್ಸ್ ಮತ್ತು ಸೋನಿ ಪಿಕ್ಚರ್ಸ್ ಜಂಟಿಯಾಗಿ ಸ್ಯಾಟ್​ಲೈಟ್ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ $ 3 ರಿಂದ $ 4 ಶತಕೋಟಿ ಖರ್ಚು ಮಾಡುತ್ತವೆ ಎಂದು ಅಂದಾಜಿಸಲಾಗಿದೆ.

ಐಪಿಎಲ್ ಪ್ರಸಾರದ ಹಕ್ಕುಗಳು 2012 ರಿಂದ 2017 ರವರೆಗೆ ಸೋನಿ ಗ್ರೂಪ್ ಕೈಯಲ್ಲಿತ್ತು. ನಂತರದ ಹರಾಜಿನಲ್ಲಿ ಸೋನಿ ಗ್ರೂಪ್ ಐದು ವರ್ಷಗಳ ಅವಧಿಗೆ ರೂ. 11 ಸಾವಿರದ 50 ಕೋಟಿ ಬಿಡ್ ಸಲ್ಲಿಕೆಯಾಗಿದ್ದು, ಸ್ಟಾರ್ ಮತ್ತು ಹಾಟ್‌ಸ್ಟಾರ್‌ಗಳು ಒಟ್ಟಾಗಿ ರೂ. 16 ಸಾವಿರದ 348 ಕೋಟಿ ಸಲ್ಲಿಕೆ ಮಾಡಿತ್ತು. ಹಾಗಾಗಿ ಸೋನಿಯ ಪ್ರಸಾರದ ಹಕ್ಕು ಸ್ಟಾರ್ ಗ್ರೂಪ್ ಪಾಲಾಯಿತು. ರಿಲಯನ್ಸ್ ತನ್ನ ಪ್ರಸಾರ ಜಂಟಿ ಉದ್ಯಮವಾದ Viacom 18 ಗಾಗಿ $ 1.6 ಬಿಲಿಯನ್ ಸಂಗ್ರಹಿಸಲು ವಿದೇಶಿಯರನ್ನು ಒಳಗೊಂಡಂತೆ ಇತರ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. IPL ಹಕ್ಕುಗಳು ಅಂತಿಮವಾಗಿ ಯಾವ ಕಂಪನಿಗೆ ಹೋಗುತ್ತವೆ ಎಂಬುದನ್ನು ನೋಡಬೇಕಾಗಿದೆ.

ಇದನ್ನೂ ಓದಿ: Ranji Trophy: ಐಪಿಎಲ್ ಹರಾಜಿನಲ್ಲಿ ಕೇವಲ 20 ಲಕ್ಷಕ್ಕೆ ಬಿಕರಿ; ರಣಜಿಯಲ್ಲಿ ಶತಕ ಸಿಡಿಸಿ ಮಿಂಚಿದ ಮುಂಬೈ ಬ್ಯಾಟರ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ