Rohit Sharma: ಪಂದ್ಯ ಮುಗಿದ ಬಳಿಕ ಖುಷಿಯಲ್ಲಿ ರೋಹಿತ್ ಶರ್ಮಾ ಆಡಿದ ಮಾತು ನೀವೇ ಕೇಳಿ

IND vs WI T20: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಮಾತನಾಡಿದ ಭಾರತದ ನಾಯಕ ರೋಹಿತ್ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ನೋಡೋಣ.

Rohit Sharma: ಪಂದ್ಯ ಮುಗಿದ ಬಳಿಕ ಖುಷಿಯಲ್ಲಿ ರೋಹಿತ್ ಶರ್ಮಾ ಆಡಿದ ಮಾತು ನೀವೇ ಕೇಳಿ
Rohit Sharma post-match presentation IND vs WI 3rd T20
Follow us
TV9 Web
| Updated By: Vinay Bhat

Updated on: Feb 21, 2022 | 8:39 AM

ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೆರಿಬಿಯನ್ನರ ಮೇಲೆ ಸವಾರಿ ಮಾಡಿದ ಭಾರತ ತಂಡ ಏಕದಿನದ ಜೊತೆಗೆ ಇದೀಗ ಟಿ20 ಸರಣಿಯನ್ನೂ ಕ್ಲೀನ್​ಸ್ವೀಪ್ ಮಾಡಿದೆ. ನಿನ್ನೆ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಬ್ಯಾಟಿಂಗ್  – ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ತೋರಿತು. ಎದುರಾಳಿ ಬೌಲರ್​ಗಳನ್ನು ಅಟ್ಟಾಡಿಸಿದ ಸೂರ್ಯಕುಮಾರ್ (Suryakumar Yadav) ಯಾದವ್ ಕೇವಲ 31 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ 65 ರನ್ ಚಚ್ಚಿದರು. ಇವರಿಗೆ ಸಾಥ್ ನೀಡಿದ ವೆಂಕಟೇಶ್ ಅಯ್ಯರ್ (Venkatesh Iyer) 19 ಎಸೆತಗಳಲ್ಲಿ 35 ರನ್ ಬಾರಿಸಿದರು. ಬೌಲಿಂಗ್​ನಲ್ಲೂ ಸಂಘಟಿತ ಪ್ರದರ್ಶನ ತೋರಿತು. ಈ ಮೂಲಕ ಭಾರತ 17 ರನ್​ಗಳ ಗೆಲುವು ತನ್ನದಾಗಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ನೋಡೋಣ.

“ಈ ಪಂದ್ಯಕ್ಕೆ ನಮ್ಮ ತಂಡದಲ್ಲಿ ಹೆಚ್ಚಿನ ಆಟಗಾರರು ಇರಲಿಲ್ಲ, ಅಲ್ಲದೆ ನಮ್ಮ ಮಧ್ಯಮ ಕ್ರಮಾಂಕ ಹೊಸಬರಿಂದ ಕೂಡಿತ್ತು. ಹೀಗಾಗಿ ಮೊದಲು ಬ್ಯಾಟ್ ಮಾಡುವ ಆಯ್ಕೆ ನಮ್ಮದಾಗಿತ್ತು. ಈ ಸರಣಿಯಿಂದ ತುಂಬಾ ಸಂತಸವಾಗಿದೆ. ನಮಗೆ ಏನು ಬೇಕಾಗಿತ್ತೋ ಅದು ಈ ಸರಣಿಯಿಂದ ದಕ್ಕಿದೆ. ನಮ್ಮದು ಯುವಕರಿಂದ ಕೂಡಿರುವ ತಂಡ. ಈಗ ತಂಡದಲ್ಲಿ ಕೆಲ ಆಟಗಾರರ ಅಲಭ್ಯತೆ ಇರಬಹುದು ಆದರೆ, ಇದು ಉತ್ತಮ ಚೇಸಿಂಗ್ ತಂಡವಾಗಿದೆ. ಒತ್ತಡದ ಸಂದರ್ಭದಲ್ಲಿ ಆಟಗಾರರು ಯಾವರೀತಿ ಬ್ಯಾಟಿಂಗ್ ನಡೆಸಬೇಕು ಎಂಬುದು ಅವರಿಗೆ ತಿಳಿಯಬೇಕು. ಕಠಿಣ ಸಂದರ್ಭದಲ್ಲಿ ಉತ್ತಮ ಆಟ ಆಡಿರುವುದನ್ನು ಮೆಚ್ಚಲೇ ಬೇಕು. ಒಂದು ಗುಂಪಾಗಿ ಮುನ್ನಡೆಯುತ್ತಿರುವುದು ಉತ್ತಮ ಸೂಚನೆಯಾಗಿದೆ. ಇದರ ಬಗ್ಗೆ ಹೆಮ್ಮೆ ಇದೆ,” ಎಂದು ರೋಹಿತ್ ಹೇಳಿದ್ದಾರೆ.

“ಏಕದಿನ ಕ್ರಿಕೆಟ್​ನಲ್ಲಿ ವೇಗಿಗಳು ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಅದು ಇಲ್ಲಿಕೂಡ ಮುಂದುವರೆದಿದ್ದು ಖುಷಿ ನೀಡಿದೆ. ಹರ್ಷಲ್ ಪಟೇಲ್ ಹೊಸ ಆಟಗಾರ, ಆವೇಶ್ ಖಾನ್​ಗೆ ಮೊದಲ ಪಂದ್ಯ, ಶಾರ್ದೂಲ್ ಕೆಲ ಪಂದ್ಯ ಆಡಿದರೆ ಇನ್ನೂ ಕೆಲ ಪಂದ್ಯ ಆಡಿಲ್ಲ. ಹೀಗಿರುವಾಗ ಅವರಿಗೆ ಬೌಲಿಂಗ್ ಮಾಡಲು ಕೊಟ್ಟು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ನಮಗೆ ದೊಡ್ಡ ಸವಾಲಾಗಿತ್ತು.”

ವೆಸ್ಟ್ ಇಂಡೀಸ್​ನಂತಹ ತಂಡದ ಎದುರು ನಾವು ಆಡುವಾಗ ನಮಗೆ ಬ್ಯಾಟಿಂಗ್-ಬೌಲಿಂಗ್​ನಲ್ಲಿ ದೊಡ್ಡ ಪರೀಕ್ಷೆಯಾಗಿರುತ್ತದೆ. ಅವರ ಬ್ಯಾಟಿಂಗ್ ಪಡೆ ದೊಡ್ಡದಾಗಿದೆ. ಇಂಥಹ ತಂಡವನ್ನು ಸೋಲಿಸುವುದು ಸವಾಲಾಗಿದೆ. ಕೆಲ ಆಟಗಾರರು ಶ್ರೀಲಂಕಾ ವಿರುದ್ಧದ ಸರಣಿಗೂ ಅಲಭ್ಯರಾಗಿದ್ದಾರೆ. ಯಾಕಂದ್ರೆ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ನಮ್ಮ ತಲೆಯಲ್ಲಿ ವಿಶ್ವಕಪ್ ಬಗ್ಗೆಯೂ ಇದೆ. ಹೀಗಾಗಿ ಪ್ರತಿಯೊಬ್ಬರಿಗೂ ಸಮಯ ಕೊಡುವುದು ಅವಶ್ಯಕ. ಶ್ರೀಲಂಕಾ ಸರಣಿ ನಮಗೆ ಹೊಸ ಚಾಲೆಂಜ್. ಆದರೆ, ಎದುರಾಳಿ ಬಗ್ಗೆ ನಾವು ಯೋಚಿಸದೆ ನಮ್ಮ ತಂಡದಿಂದ ಹೇಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬ ಬಗ್ಗೆ ಯೋಚಿಸುತ್ತೇವೆ. ಫೀಲ್ಡಿಂಗ್, ಕ್ಯಾಚಿಂಗ್​ನಲ್ಲಿ ನಾವಿನ್ನೂ ಸರಿಪಡಿಸಬೇಕಿದೆ,” ಎಂದು ರೋಹಿತ್ ಹೇಳಿದರು.

ಇನ್ನು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಸೂರ್ಯಕುಮಾರ್ ಯಾದವ್ ಮಾತನಾಡಿ, ಮೊದಲ ಪಂದ್ಯದಲ್ಲಿ ಏನು ಮಾಡಿದೆನೋ ಅದನ್ನೇ ಇಲ್ಲೂ ಮುಂದುವರೆಸಲು ತೀರ್ಮಾನಿಸಿದೆ. ರೋಹಿತ್ ಔಟಾದ ಬಳಿಕ ಸವಾಲಿನ ಮೊತ್ತ ಕಲೆಹಾಕಲು ಕ್ರೀಸ್​ನಲ್ಲಿ ನಿಂತುಕೊಳ್ಳುವ ಒಬ್ಬ ಆಟಗಾರನ ಅವಶ್ಯತೆಯಿತ್ತು. ಟೀಮ್ ಮೀಟಿಂಗ್​ನಲ್ಲೂ ಇದರ ಬಗ್ಗೆ ಚರ್ಚಿಸಿದ್ದೆವು, ಅದಿಲ್ಲ ಸಹಕಾರ ಆಯಿತು,” ಎಂದು ಹೇಳಿದ್ದಾರೆ.

Rohit Sharma: ಇತಿಹಾಸ ರಚಿಸಿದ ರೋಹಿತ್ ಶರ್ಮಾ: ಟಿ20 ಕ್ರಿಕೆಟ್​ನಲ್ಲಿ ಭಾರತ ಈಗ ನಂಬರ್ ಒನ್ ತಂಡ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ