Rohit Sharma: ಇತಿಹಾಸ ರಚಿಸಿದ ರೋಹಿತ್ ಶರ್ಮಾ: ಟಿ20 ಕ್ರಿಕೆಟ್​ನಲ್ಲಿ ಭಾರತ ಈಗ ನಂಬರ್ ಒನ್ ತಂಡ

IND vs WI T20: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಕದನದಲ್ಲೂ ಟೀಮ್ ಇಂಡಿಯಾ 17 ರನ್​ಗಳ ಗೆಲುವು ಸಾಧಿಸಿತು. ಈ ಮೂಲಕ ಚುಟುಕು ಕ್ರಿಕೆಟ್​ನ ಸರಣಿಯಲ್ಲೂ ಕೆರಿಬಿಯನ್ನರನ್ನು ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಇದೀಗ ಐಸಿಸಿ ರ್ಯಾಂಕಿಂಗ್​ನ ಟಿ20 ಕ್ರಿಕೆಟ್​​​ನಲ್ಲಿ ಭಾರತ ಇಂಗ್ಲೆಂಡ್ ಅನ್ನು ಹಿಂದಕ್ಕಿ ನಂಬರ್ ಒನ್ ತಂಡವಾಗಿ ಹೊರಹೊಮ್ಮಿದೆ.

Rohit Sharma: ಇತಿಹಾಸ ರಚಿಸಿದ ರೋಹಿತ್ ಶರ್ಮಾ: ಟಿ20 ಕ್ರಿಕೆಟ್​ನಲ್ಲಿ ಭಾರತ ಈಗ ನಂಬರ್ ಒನ್ ತಂಡ
Rohit Sharma IND vs WI 3rd T20I
Follow us
| Updated By: Vinay Bhat

Updated on: Feb 21, 2022 | 7:27 AM

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್​ನಲ್ಲಿ ವೈಟ್​ವಾಷ್ ಮಾಡಿ ಮೆರೆದಾಡಿದ್ದ ಭಾರತ (India vs West Indies) ಇದೀಗ ಟಿ20 ಕ್ರಿಕೆಟ್​ನಲ್ಲೂ ಪರಾಕ್ರಮ ಮೆರೆದಿದೆ. ಭಾನುವಾರ ನಡೆದ ಅಂತಿಮ ಮೂರನೇ ಟಿ20 ಕದನದಲ್ಲೂ ಟೀಮ್ ಇಂಡಿಯಾ 17 ರನ್​ಗಳ ಗೆಲುವು ಸಾಧಿಸಿತು. ಈ ಮೂಲಕ ಚುಟುಕು ಕ್ರಿಕೆಟ್​ನ ಸರಣಿಯಲ್ಲೂ ಕೆರಿಬಿಯನ್ನರನ್ನು ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಬ್ಯಾಟಿಂಗ್ ಒಂದುಕಡೆಯಾದರೆ, ಬೌಲರ್​ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ರೋಹಿತ್ ಶರ್ಮಾ (Rohit Sharma) ಪಡೆ ಜಯ ಸಾಧಿಸಿ ನೂತನ ದಾಖಲೆ ಕೂಡ ಬರೆದಿದೆ. ಇದೀಗ ಐಸಿಸಿ ರ್ಯಾಂಕಿಂಗ್​ನ ಟಿ20 ಕ್ರಿಕೆಟ್​​​ನಲ್ಲಿ ಭಾರತ ಇಂಗ್ಲೆಂಡ್ ಅನ್ನು ಹಿಂದಕ್ಕಿ ನಂಬರ್ ಒನ್ ತಂಡವಾಗಿ ಹೊರಹೊಮ್ಮಿದೆ. ಇತ್ತ ರೋಹಿತ್ ಶರ್ಮಾ ನಾಯಕನಾಗಿ ಇತಿಹಾಸ ರಚಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿದ ಮೊದಲ ಭಾರತೀಯ ನಾಯಕ ರೋಹಿತ್ ಶರ್ಮಾ ಆಗಿದ್ದಾರೆ. ಜೊತೆಗೆ ನಾಯಕನಾಗಿ ಟಿ20 ಕ್ರಿಕೆಟ್​​ನಲ್ಲಿ ತಂಡವನ್ನು ಮುನ್ನಡೆಸಿದ ಮೊದಲ ಮೂರು ಸರಣಿಯಲ್ಲೂ ಕ್ಲೀನ್​ಸ್ವೀಪ್ ಸಾಧನೆ ಮಾಡಿದ ಮೊದಲ ಪ್ಲೇಯರ್ ಆಗಿದ್ದಾರೆ. ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ 4 ಬದಲಾವಣೆ ಮಾಡಲಾಗಿತ್ತು. ಕೊಹ್ಲಿ, ಪಂತ್ ಬಯೋಬಬಲ್ ತೊರೆದಿದ್ದರೆ, ಚಹಲ್ ಮತ್ತು ಭುನೇಶ್ವರ್​​ಗೆ ವಿಶ್ರಾಂತಿ ನೀಡಲಾಗಿತ್ತು. ರುತುರಾಜ್, ಆವೇಶ್ ಖಾನ್, ಶ್ರೇಯಸ್ ಮತ್ತು ಠಾಕೂರ್​ಗೆ ಅವಕಾಶ ನೀಡಲಾಗಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಬಳಗದ ಬೌಲರ್‌ಗಳು ಆರಂಭವದಲ್ಲಿ ಯಶಸ್ಸು ಕಂಡರು. ಪವರ್‌ ಪ್ಲೇಯಲ್ಲಿ ಒಂದಕ್ಕೆ 43 ರನ್‌, 15 ಓವರ್‌ಗಳಲ್ಲಿ 4ಕ್ಕೆ ಕೇವಲ 98 ರನ್‌ ಗಳಿಸಿದ್ದ ಭಾರತ 184ರ ತನಕ ಸಾಗುತ್ತದೆಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದರೆ ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಸೂರ್ಯಕುಮಾರ್‌ ಯಾದವ್‌ ಮತ್ತು ವೆಂಕಟೇಶ್‌ ಅಯ್ಯರ್‌ ರನ್‌ ಪ್ರವಾಹವನ್ನೇ ಹರಿಸಿದರು. 5ನೇ ವಿಕೆಟಿಗೆ ಕೇವಲ 37 ಎಸೆತಗಳಿಂದ 91 ರನ್‌ ರಾಶಿ ಹಾಕಿದರು. ಕೊನೆಯ 5 ಓವರ್‌ಗಳಲ್ಲಿ ಒಟ್ಟುಗೂಡಿದ ರನ್‌ ಬರೋಬ್ಬರಿ 86. ಔಟಾದ ಸೂರ್ಯಕುಮಾರ್‌ ಯಾದವ್‌ 31 ಎಸೆತಗಳಿಂದ 65 ರನ್‌ ಸಿಡಿಸಿದರು. ಅಯ್ಯರ್‌ 19 ಎಸೆತಗಳಿಂದ 35 ರನ್‌ ಮಾಡಿ ಅಜೇಯರಾಗಿ ಉಳಿದರು. ಪರಿಣಾಮ ಭಾರತ 20 ಓವರ್​ಗಳಲ್ಲಿ 184 ರನ್ ಸಿಡಿಸಿತು.

ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಆರಂಭದಲ್ಲಿ ದೊಡ್ಡ ಆಘಾತ ನೀಡಿದ ದೀಪಕ್ ಎರಡನೇ ಓವರ್‌ನ ಕೊನೆಯ ಎಸೆತವನ್ನು ಬೌಲಿಂಗ್ ಮಾಡುವಾಗ ಸ್ನಾಯುಸೆಳೆತದಿಂದ ಬಳಲಿದರು. ನಂತರ ಅವರಿಗೆ ವಿಶ್ರಾಂತಿ ನೀಡಲಾಯಿತು. ಕೈಲ್​ ಮೇಯರ್​, ಶಾಯ್​ಹೋಪ್​, ಪೊಲಾರ್ಡ್​, ಜೇಸನ್​ ಹೋಲ್ಡರ್​​​ ಒಂದಂಕಿಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರೆ, ರಾವ್​ಮನ್​ ಪೊವೆಲ್​ ಸ್ವಲ್ಪ ಹೊತ್ತು ಘರ್ಜಿಸಿ 25 ರನ್​​ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ರಸ್ಟನ್​ ಚೇಸ್​ ಕೂಡ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು. ಈ ಹಿನ್ನೆಲೆ ಪಂದ್ಯದ ಮೇಲೆ ಟೀಮ್​ ಇಂಡಿಯಾ ಹಿಡಿತ ಸಾಧಿಸಿತ್ತು.

ಒಂದೆಡೆ ವಿಕೆಟ್​ ಉರುಳುತ್ತಿದ್ದರೂ, ನಿಕೋಲಸ್​ ಪೂರನ್​ ಭರ್ಜರಿ ಆಟವಾಡಿ ಸರಣಿಯಲ್ಲಿ ಹ್ಯಾಟ್ರಿಕ್​ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ 61 ರನ್​ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾಗಿ ಪಂದ್ಯವನ್ನ ಜಯದತ್ತ ಕೊಂಡೊಯುವಲ್ಲಿ ಫೇಲ್​ ಆದರು. ಅಂತಿಮವಾಗಿ ವಿಂಡೀಸ್ 20 ಓವರ್​ಗಳಲ್ಲಿ 167 ರನ್​ಗಳನ್ನಷ್ಟೆ ಕಲೆಹಾಕಿತು. ಟೀಮ್​ ಇಂಡಿಯಾ ಪರ ಶಾರ್ದೂಲ್​, ದೀಪಕ್ ಚಹರ್, ವೆಂಕಟೇಶ್​ ಅಯ್ಯರ್ ತಲಾ 2 ವಿಕೆಟ್​ ಪಡೆದರೆ, ಹರ್ಷಲ್​ ಪಟೇಲ್​ 3 ವಿಕೆಟ್​ ಕಬಳಿಸಿ ಮಿಂಚಿದರು. ಪದಾರ್ಪಣೆ ಪಂದ್ಯವಾಡಿದ ಆವೇಶ್ ಖಾನ್​​ಗೆ ಒಂದೂ ವಿಕೆಟ್ ಸಿಗದೆ ದುಬಾರಿಯಾದರು.

IND vs WI: ಈಡನ್ ಗಾರ್ಡನ್‌ನಲ್ಲಿ ಸೂರ್ಯ ಸ್ಫೋಟ; ವಿಂಡೀಸ್​ಗೆ ವೈಟ್​ ವಾಶ್ ಮುಖಭಂಗ! ಭಾರತಕ್ಕೆ ಸರಣಿ

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ