ಅನಿಲ್ ಕುಂಬ್ಳೆ ಲವ್ ಸ್ಟೋರಿ ಅವರ ಬೌಲಿಂಗ್ನಷ್ಟೆ ನಿಖರ, ಸುಂದರ, ವೈವಿಧ್ಯಮಯ
Chethana Ramatheertha: ತಾವು ಇಷ್ಟಪಡುವ ಕ್ರಿಕೆಟ್ಗಾಗಿ ಯಾವುದನ್ನೂ ಲೆಕ್ಕಿಸದೆ ಹೋರಾಟಕ್ಕೆ ನಿಂತುಬಿಡುವ ವ್ಯಕ್ತಿತ್ವ ಅನಿಲ್ ಕುಂಬ್ಳೆ ಅವರದ್ದು. ಕುಂಬ್ಳೆಯ ಸಮರ್ಪಣೆ, ಹೋರಾಟದ ಮನೋಭಾವದ ಬಗ್ಗೆ ಅವರ ಸಹ ಆಟಗಾರರು ಹಲವು ಬಾರಿ ಮಾತನಾಡಿದ್ದಿದೆ. ಕ್ರಿಕೆಟ್ ಪಿಚ್ನಲ್ಲಿ ಮಾತ್ರವಲ್ಲ ಖಾಸಗಿ ಜೀವನದಲ್ಲಿಯೂ ಕುಂಬ್ಳೆ ಹಾಗೆಯೇ ಇದ್ದರು. ಇದಕ್ಕೆ ಪ್ರಥಮ ಸಾಕ್ಷಿ, ಕುಂಬ್ಳೆ ಅವರ ಲವ್ ಸ್ಟೋರಿ.

ಗಲ್ಲಕ್ಕೆ ಬ್ಯಾಂಡೇಜ್ ಸುತ್ತಿಕೊಂಡು, ರಕ್ತ ಒಸರುತ್ತಿದ್ದರು, ವೆಸ್ಟ್ ಇಂಡೀಸ್ನ ಬಿರು ಬಿಸಿಲನ್ನೂ ಲೆಕ್ಕಿಸದೆ ಬೌಲಿಂಗ್ ಮಾಡಿ, ದಿಗ್ಗಜ ಬ್ಯಾಟ್ಸ್ಮನ್ ಬ್ರಿಯಲ್ ಲಾರಾ ವಿಕೆಟ್ ತೆಗೆದಿದ್ದರು ಅನಿಲ್ ಕುಂಬ್ಳೆ (Anil Kumble). ಎಂಥಹದ್ದೇ ಸನ್ನಿವೇಶವಿರಲಿ, ತಾವು ಇಷ್ಟಪಡುವ ಕ್ರಿಕೆಟ್ಗಾಗಿ ಯಾವುದನ್ನೂ ಲೆಕ್ಕಿಸದೆ ಹೋರಾಟಕ್ಕೆ ನಿಂತುಬಿಡುವ ವ್ಯಕ್ತಿತ್ವ ಅನಿಲ್ ಕುಂಬ್ಳೆ ಅವರದ್ದು. ಕುಂಬ್ಳೆಯ ಈ ಸಮರ್ಪಣೆ, ಹೋರಾಟದ ಮನೋಭಾವದ ಬಗ್ಗೆ ಅವರ ಸಹ ಆಟಗಾರರು ಹಲವು ಬಾರಿ ಮಾತನಾಡಿದ್ದಿದೆ. ಕ್ರಿಕೆಟ್ ಪಿಚ್ನಲ್ಲಿ ಮಾತ್ರವಲ್ಲ ಖಾಸಗಿ ಜೀವನದಲ್ಲಿಯೂ ಕುಂಬ್ಳೆ ಹಾಗೆಯೇ ಇದ್ದರು. ಇದಕ್ಕೆ ಪ್ರಥಮ ಸಾಕ್ಷಿ, ಕುಂಬ್ಳೆ ಅವರ ಲವ್ ಸ್ಟೋರಿ.
ಅನಿಲ್ ಕುಂಬ್ಳೆ 1999 ರಲ್ಲಿ ವಿವಾಹವಾದಾಗ ಸಾಕಷ್ಟು ಟೀಕೆಗಳನ್ನು, ಕುಟುಂಬದ ಆಂತರಿಕ ವಿರೋಧಗಳನ್ನು ಎದುರಿಸಬೇಕಾಯ್ತು. ಅದಕ್ಕೆ ಕಾರಣ, ಅನಿಲ್ ವಿವಾಹವಾದ ಚೇತನಾ ರಾಮತೀರ್ಥ ಅವರಿಗೆ ಅದು ಎರಡನೇ ಮದುವೆ ಆಗಿತ್ತು. ಮೊದಲ ಮದುವೆಯಿಂದ ಅದಾಗಲೇ ಅವರಿಗೆ ಒಂದು ಹೆಣ್ಣು ಮಗು ಸಹ ಇತ್ತು. ಆದರೆ ಅನಿಲ್ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ, ಅವರಿಗೆ ಚೇತನಾ ರಾಮತೀರ್ಥ ಅವರೊಟ್ಟಿಗೆ ಪ್ರೀತಿಯಿತ್ತು, ಮದುವೆಗೆ ಪ್ರೀತಿಯ ಹೊರತಾಗಿ ಇನ್ಯಾವುದೂ ಬೇಕಾಗಿಲ್ಲ ಎಂಬುದು ಅನಿಲ್ ಅವರಿಗೆ ಗೊತ್ತಿತ್ತು. ಇದೇ ಕಾರಣಕ್ಕೆ ಯಾವ ವಿರೋಧ, ಟೀಕೆಗಳಿಗೂ ಲೆಕ್ಕಿಸದೆ ಚೇತನಾ ಅವರೊಟ್ಟಿಗೆ ವಿವಾಹವಾದರು ಅನಿಲ್.
ಚೇತನಾ ರಾಮತೀರ್ಥ ಅವರು ಟ್ರಾವೆಲ್ ಏಜೆನ್ಸಿ ಫರ್ಮ್ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಅಲ್ಲೇ ಅನಿಲ್ ಅವರು, ಚೇತನಾ ಅವರನ್ನು ಮೊದಲ ಬಾರಿ ನೋಡಿದರು. ಅದಾಗಲೇ ಮದುವೆ ಆಗಿದ್ದ ಚೇತನಾಗೆ ಒಂದು ಹೆಣ್ಣು ಮಗುವಿತ್ತು. ಆದರೆ ಚೇತನಾ ಅವರು ಮೊದಲ ಮದುವೆಯಿಂದ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದರು. ಉಸಿರುಗಟ್ಟುವ ದಾಂಪತ್ಯ ಆಗ ಅವರದ್ದಾಗಿತ್ತು. ಅನಿಲ್ ಅವರ ಪರಿಚಯದ ಬಳಿಕ ಚೇತನಾ ಅವರು ಮೊದಲ ಪತಿಯಿಂದ ವಿಚ್ಛೇದನ ಪಡೆದು, ಅನಿಲ್ ಅವರನ್ನು 1999 ಜುಲೈ 1 ರಂದು ವಿವಾಹವಾದರು.
ಇದನ್ನೂ ಓದಿ:ಆರ್ಸಿಬಿ ಗೆಲ್ಲುತ್ತೆ ಅಂತ ಈಗ್ಲೇ ಹೇಳ್ಬೇಡಿ! ಅನಿಲ್ ಕುಂಬ್ಳೆ ಹೀಗೆಂದಿದ್ದೇಕೆ ನೋಡಿ
ಮದುವೆಯ ಬಳಿಕವೂ ಅನಿಲ್ ಹಾಗೂ ಚೇತನಾ ಸಾಕಷ್ಟು ಹೋರಾಟ ಮಾಡಬೇಕಾಯ್ತು. ಚೇತನಾ ರಾಮತೀರ್ಥ ಅವರ ಮೊದಲ ಮಗಳು ಅರುಣಿಯನ್ನು ತಮ್ಮ ಕಸ್ಟಡಿಗೆ ಪಡೆಯಲು ಕುಂಬ್ಳೆ ಹಾಗೂ ಚೇತನಾ ಅವರು ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ಮಾಡಿದರು. ಅಲ್ಲಿಯೂ ಸಹ ಛಲ ಬಿಡದ ಕುಂಬ್ಳೆ ಮತ್ತು ಅವರ ಪತ್ನಿ ಸುದೀರ್ಘ ಹೋರಾಟದ ಬಳಿಕ ಅರುಣಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡರು. ಅನಿಲ್ ಅವರಿಗೆ ಒಟ್ಟು ಮೂರು ಮಕ್ಕಳು, ಅರುಣಿ, ಸ್ವಸ್ತಿ ಮತ್ತು ಪುತ್ರ ಮಯಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
