AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮ್ ಗಂಭೀರ್ ಅವರ ತಾಯಿಗೆ ಹೃದಯಾಘಾತ; ಇಂಗ್ಲೆಂಡ್‌ನಿಂದ ಭಾರತಕ್ಕೆ ಹೆಡ್ ಕೋಚ್ ವಾಪಸ್

Gautam Gambhir Returns to India: ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಾಯಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದಾಗಿ ಶುಭ್ಮನ್ ಗಿಲ್ ನೇತೃತ್ವದ ಯುವ ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಮಧ್ಯೆ ಗಂಭೀರ್ ಭಾರತಕ್ಕೆ ಮರಳಿದ್ದಾರೆ. ಅವರು ಯಾವಾಗ ಇಂಗ್ಲೆಂಡ್‌ಗೆ ಹಿಂತಿರುಗುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ.

ಗೌತಮ್ ಗಂಭೀರ್ ಅವರ ತಾಯಿಗೆ ಹೃದಯಾಘಾತ; ಇಂಗ್ಲೆಂಡ್‌ನಿಂದ ಭಾರತಕ್ಕೆ ಹೆಡ್ ಕೋಚ್ ವಾಪಸ್
Gautam Gambhir
ಪೃಥ್ವಿಶಂಕರ
|

Updated on:Jun 13, 2025 | 2:52 PM

Share

ಶುಭ್​ಮನ್ ಗಿಲ್ (Shubman Gill) ಅವರ ನಾಯಕತ್ವದಲ್ಲಿ ಯುವ ಭಾರತ ತಂಡವನ್ನು ಕಟ್ಟಿಕೊಂಡು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​ಗೆ ಹಾರಿದ್ದ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ತಂಡವನ್ನು ತೊರೆದು ಭಾರತಕ್ಕೆ ಮರಳುತ್ತಿದ್ದಾರೆ. ಇದಕ್ಕೆ ಕಾರಣ ಅವರ ತಾಯಿಯವರು ಅನಾರೋಗ್ಯಕ್ಕೆ ತುತ್ತಾಗಿರುವುದು. ಗಂಭೀರ್ ಅವರ ತಾಯಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದ್ದು ಪ್ರಸ್ತುತ ಅವರು ಐಸಿಯುನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಇಂಗ್ಲೆಂಡ್​ನಿಂದ ತಾಯ್ನಾಡಿಗೆ ಮರಳುತ್ತಿರುವ ಗೌತಮ್ ಗಂಭೀರ್, ಯಾವಾಗ ಇಂಗ್ಲೆಂಡ್‌ಗೆ ಹಿಂತಿರುಗುತ್ತಾರೆ ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದಾಗ್ಯೂ ಅವರ ನಿರ್ಧಾರವು ತಾಯಿಯವರ ಆರೋಗ್ಯ ಹೇಗಿದೆ ಎಂಬುದರ ಮೇಲೆ ಅವಲಂಬಿತವಾಗಿರಬಹುದು.

ಭಾರತದ ಇಂಗ್ಲೆಂಡ್ ಪ್ರವಾಸ

ವಾಸ್ತವವಾಗಿ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಭಾರತ ಎ ಹಾಗೂ ಇಂಗ್ಲೆಂಡ್‌ ಲಯನ್ಸ್ ನಡುವೆ 2 ಅನಧಿಕೃತ ಟೆಸ್ಟ್ ಪಂದ್ಯಗಳು ನಡೆದಿದ್ದವು. ಈ ಪಂದ್ಯಗಳ ನಡುವೆ ಭಾರತ ತಂಡ ಗಂಭೀರ್ ಅವರ ನೇತೃತ್ವದಲ್ಲಿ ಜೂನ್ 7 ರಂದು ಇಂಗ್ಲೆಂಡ್​ಗೆ ಹಾರಿತ್ತು. ಆ ಬಳಿಕ ಅಭ್ಯಾಸ ಕೂಡ ಆರಂಭಿಸಿತ್ತು. ಪೂರ್ವ ನಿಗದಿಯಂತೆ ಜೂನ್ 13 ರಿಂದ ಜೂನ್ 16 ರವರೆಗೆ ಟೀಂ ಇಂಡಿಯಾ ಇಂಟ್ರಾ-ಸ್ಕ್ವಾಡ್ ಪಂದ್ಯಗಳನ್ನು ಆಡಬೇಕಿತ್ತು. ಈ ಪಂದ್ಯವನ್ನು ವೀಕ್ಷಿಸಿದ ಬಳಿಕ ಬಲಿಷ್ಠ ಪ್ಲೇಯಿಂಗ್ 11 ಕಟ್ಟುವ ಕೆಲಸವನ್ನು ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಅವರು ಮಾಡಬೇಕಿತ್ತು. ಆದರೆ ಈಗ ಅವರ ಅನುಪಸ್ಥಿತಿಯಲ್ಲಿ, ಈ ಕೆಲಸವನ್ನು ಉಳಿದ ಸಹಾಯಕ ಸಿಬ್ಬಂದಿ ಮಾಡಬೇಕಾಗಬಹುದು.

ಗಂಭೀರ್ ಅವಶ್ಯಕತೆ ತಂಡಕ್ಕೆ ಅತ್ಯವಶ್ಯಕ

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಅವರ ಅವಶ್ಯಕತೆ ತುಂಬಾ ಇದೆ. ಏಕೆಂದರೆ ಈ ಬಾರಿ ಯುವ ನಾಯಕನ ನೇತೃತ್ವದಲ್ಲಿ ಯುವ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಗಂಭೀರ್ ಅವರಂತಹ ಕೋಚ್ ಅವರ ಬೆಂಬಲವು ಯುವ ಪಡೆಯ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಈ ದೃಷ್ಟಿಕೋನದಿಂದಲೂ, ಗೌತಮ್ ಗಂಭೀರ್ ಅವರ ಮರಳುವಿಕೆ ಮುಖ್ಯವಾಗುತ್ತದೆ.

IND vs ENG: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ರೋಹಿತ್, ಕೊಹ್ಲಿಯನ್ನು ನೆನಪಿಸಿಕೊಂಡ ಗಂಭೀರ್

ಗಂಭೀರ್ ತಂಡವನ್ನು ಯಾವಾಗ ಸೇರುತ್ತಾರೆ?

ಗೌತಮ್ ಗಂಭೀರ್ ಅವರ ತಾಯಿ ಸೀಮಾ ಗಂಭೀರ್ ಅವರಿಗೆ ಜೂನ್ 11 ರಂದು ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ. ಹೀಗಾಗಿ ಗಂಭೀರ್ ಇಂಗ್ಲೆಂಡ್ ಪ್ರವಾಸವನ್ನು ಅರ್ಧದಲ್ಲೇ ತೊರೆದು ಭಾರತಕ್ಕೆ ಮರಳಿದ್ದಾರೆ. ಆದಾಗ್ಯೂ, ಇಂಡಿಯಾ ಟುಡೇ ವರದಿಯ ಪ್ರಕಾರ, ಗೌತಮ್ ಗಂಭೀರ್ ಜೂನ್ 17 ರೊಳಗೆ ಮೊದಲ ಟೆಸ್ಟ್ ಪಂದ್ಯ ಪ್ರಾರಂಭವಾಗುವ 3 ದಿನಗಳ ಮೊದಲು ಮತ್ತೆ ಟೀಂ ಇಂಡಿಯಾವನ್ನು ಸೇರಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Fri, 13 June 25