ಚೊಚ್ಚಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದ ಪಂಜಾಬ್: ಹೀರೋ ಆದ ಅನ್ಮೋಲ್‌ಪ್ರೀತ್

|

Updated on: Nov 07, 2023 | 10:07 AM

Punjab vs Baroda Final, Syed Mushtaq Ali Trophy 2023-24: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್​ನಲ್ಲಿ ಬರೋಡಾವನ್ನು ಸೋಲಿಸಿ ಪಂಜಾಬ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅರ್ಶ್​ದೀಪ್ ಸಿಂಗ್ ಡೆತ್ ಓವರ್‌ಗಳಲ್ಲಿ ರನ್ ಕಡಿವಾಣ ಹಾಕಿ ತಂಡದ ಜಯದಲ್ಲಿ ಮುಖ್ಯ ಪಾತ್ರವಹಿಸಿದರು. ಅನ್ಮೋಲ್‌ಪ್ರೀತ್ ಸಿಂಗ್ ದಾಖಲೆಯ ಶತಕ ಕೂಡ ಸಿಡಿಸಿದರು.

ಚೊಚ್ಚಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದ ಪಂಜಾಬ್: ಹೀರೋ ಆದ ಅನ್ಮೋಲ್‌ಪ್ರೀತ್
Punjab Team SMAT
Follow us on

2023ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು (SMAT) ಪಂಜಾಬ್ ತಂಡ ಎತ್ತಿ ಹಿಡಿದಿದೆ. ಈ ಹಿಂದೆ ನಾಲ್ಕು ಬಾರಿ ಫೈನಲ್​ಗೆ ತಲುಪಿದ್ದ ಪಂಜಾಬ್ ಒಂದು ಬಾರಿಯೂ ಚಾಂಪಿಯನ್ ಆಗಿರಲಿಲ್ಲ. ಆದರೆ, ಈ ಬಾರಿ ಅನ್ಮೋಲ್​ಪ್ರೀತ್ ಸಿಂಗ್ ಅವರ ಮನಮೋಹಕ ಶತಕ ಹಾಗೂ ಅರ್ಶ್​ದೀಪ್ ಬೌಲಿಂಗ್ ನೆರವಿನಿಂದ ಫೈನಲ್​ನಲ್ಲಿ ಬರೋಡಾವನ್ನು ಸೋಲಿಸಿ ಪಂಜಾಬ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅರ್ಶ್​ದೀಪ್ ಸಿಂಗ್ ಡೆತ್ ಓವರ್‌ಗಳಲ್ಲಿ ರನ್ ಕಡಿವಾಣ ಹಾಕಿ ತಂಡದ ಜಯದಲ್ಲಿ ಮುಖ್ಯ ಪಾತ್ರವಹಿಸಿದರು. ಅನ್ಮೋಲ್‌ಪ್ರೀತ್ ಸಿಂಗ್ ದಾಖಲೆಯ ಶತಕ ಕೂಡ ಸಿಡಿಸಿದರು.

ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ SMAT 2023 ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪಂದ್ಯದ ಮೊದಲ ಎಸೆತದಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಮತ್ತೋರ್ವ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್ ಸಿಂಗ್ 9 ರನ್​ಗೆ ನಿರ್ಗಮಿಸಿದರು. ಆದರೆ ಅನ್ಮೋಲ್‌ಪ್ರೀತ್ ಸಿಂಗ್ ಕೆಚ್ಚೆದೆಯಿಂದ ಬ್ಯಾಟ್ ಬೀಸಿದರು. ಮೂರನೇ ವಿಕೆಟ್‌ಗೆ ನಾಯಕ ಮಂದೀಪ್ ಸಿಂಗ್ (32) ಜೊತೆಗೂಡಿ 62 ರನ್‌ಗಳ ಜೊತೆಯಾಟ ಆಡಿದರು.

ಇದನ್ನೂ ಓದಿ
ಬೆಂಗಳೂರಿಗೆ ಆಗಮಿಸಿದ ಟೀಮ್ ಇಂಡಿಯಾ: ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ
ಬಾಂಗ್ಲಾ ಆಟಗಾರರನ್ನು ಮನಬಂದಂತೆ ಬೈದ ಏಂಜೆಲೊ ಮ್ಯಾಥ್ಯೂಸ್
ವಿಶ್ವಕಪ್​ನಲ್ಲಿಂದು ಆಸ್ಟ್ರೇಲಿಯಾ-ಅಫ್ಘಾನಿಸ್ತಾನ ಮುಖಾಮುಖಿ
‘ಹೌದು.. ಕೊಹ್ಲಿ ಸ್ವಾರ್ಥಿ’; ಟೀಕಾಕಾರರಿಗೆ ವೆಂಕಟೇಶ್ ಪ್ರಸಾದ್ ಉತ್ತರ

ಟ್ರೋಫಿ ಪಡೆದುಕೊಳ್ಳುತ್ತಿರುವ ಪಂಜಾಬ್ ನಾಯಕ ಮಂದೀಪ್ ಸಿಂಗ್:

 

 

ಬಳಿಕ ಅನ್ಮೋಲ್‌ಪ್ರೀತ್ ಹಾಗೂ ನೆಹಾಲ್ ವಧೇರಾ ಮನಬಂದಂತೆ ಬ್ಯಾಟ್ ಬೀಸಿದರು. ನೆಹಾಲ್ ಕೇವಲ 27 ಎಸೆತಗಳಲ್ಲಿ ಅಜೇಯ 61 ರನ್ ಸಿಡಿಸಿದರು. ಅನ್ಮೋಲ್‌ಪ್ರೀತ್ 61 ಎಸೆತಗಳಲ್ಲಿ 10 ಫೋರ್, 6 ಸಿಕ್ಸರ್​ನೊಂದಿಗೆ 113 ರನ್ ಚಚ್ಚಿದರು. ಪರಿಣಾಮ ಪಂಜಾಬ್ 20 ಓವರ್‌ಗಳಲ್ಲಿ 223/4 ಕ್ಕೆ ಕೊನೆಗೊಂಡಿತು.

ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಔಟಾದ ಮೊದಲ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್!

ಟಾರ್ಗೆಟ್ ಬೆನ್ನಟ್ಟಿದ ಬರೋಡ ಕೂಡ ಕಠಿಣ ಪೈಪೋಟಿ ನೀಡಿತು. ನಿನದ್ ರಥ್ವಾ 47, ಅಭಿಮನ್ಯು ಸಿಂಗ್ 61 ಹಾಗೂ ನಾಯಕ ಕ್ರುನಾಲ್ ಪಾಂಡ್ಯ 45 ರನ್ ಸಿಡಿಸಿದರು. ಆದರಎ, ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಸೋಲುಂಡಿತು. ಪಂಜಾಬ್ ಪರ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಅವರು ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸ್ಟಾರ್ ಆದರು. ಮುಖ್ಯವಾಗಿ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ ಪಂಜಾಬ್‌ಗೆ ತವರು ನೆಲದಲ್ಲಿ ಸ್ಮರಣೀಯ ಜಯವನ್ನು ತಂದುಕೊಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ