Sign In

By signing in or creating an account, you agree with Associated Broadcasting Company's Terms & Conditions and Privacy Policy.

BAN vs SL, ICC World Cup: ಬಾಂಗ್ಲಾ ಆಟಗಾರರನ್ನು ಮನಬಂದಂತೆ ಬೈದ ಏಂಜೆಲೊ ಮ್ಯಾಥ್ಯೂಸ್: ವಿವಾದಕ್ಕೆ ಕಾರಣವಾದ BAN vs SL ಪಂದ್ಯ

Angelo Mathews on 'time out' drama: ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಏಂಜೆಲೊ ಮ್ಯಾಥ್ಯೂಸ್, ಟೈಮ್ ಔಟ್ ಬಗ್ಗೆ ಶಕೀಬ್ ಅಲ್ ಹಸನ್ ಮತ್ತು ಬಾಂಗ್ಲಾದ ನಡೆಯನ್ನು ಖಂಡಿಸಿದ್ದಾರೆ. ಇವರಿಗೆ ಕಾಮನ್ಸೆನ್ಸ್ ಎಂಬುದು ಇಲ್ಲ ಎಂದು ಹೇಳಿದ್ದಾರೆ.

BAN vs SL, ICC World Cup: ಬಾಂಗ್ಲಾ ಆಟಗಾರರನ್ನು ಮನಬಂದಂತೆ ಬೈದ ಏಂಜೆಲೊ ಮ್ಯಾಥ್ಯೂಸ್: ವಿವಾದಕ್ಕೆ ಕಾರಣವಾದ BAN vs SL ಪಂದ್ಯ
Angelo mathews and Shakib Al Hasan
Follow us
Vinay Bhat
|

Updated on: Nov 07, 2023 | 8:17 AM

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಸೋಮವಾರ ನಡೆದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ (Bangladesh vs Sri Lanka) ನಡುವಣ ಪಂದ್ಯ ಕ್ರಿಕೆಟ್ ಲೋಕದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 279 ರನ್​ಗೆ ಆಲೌಟಾದರೆ, ಬಾಂಗ್ಲಾ 41.1 ಓವರ್​ನಲ್ಲಿ 282 ಗಳಿಸಿ 3 ವಿಕೆಟ್​ಗಳ ಜಯ ಸಾಧಿಸಿತು. ಈ ಪಂದ್ಯದ ಮಧ್ಯೆ ದೊಡ್ಡ ಡ್ರಾಮವೇ ನಡೆದು ಹೋಯಿತು. ಲಂಕಾ ಬ್ಯಾಟಿಂಗ್ ಇನ್ನಿಂಗ್ಸ್​ನ 25ನೇ ಓವರ್‌ನ ಎರಡನೇ ಎಸೆತದಲ್ಲಿ ಸಮರವಿಕ್ರಮ ಔಟಾದರು. ಆ ಬಳಿಕ ಕ್ರೀಸ್​ಗಿಳಿದ ಮ್ಯಾಥ್ಯೂಸ್ ಚೆಂಡನ್ನು ಎದುರಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಇದನ್ನು ಗಮನಿಸಿದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್, ಮ್ಯಾಥ್ಯೂಸ್ ವಿರುದ್ಧ ಅಂಪೈರ್ ಬಳಿ ಟೈಮ್ ಔಟ್ ಮನವಿ ಮಾಡಿದರು. ಬಾಂಗ್ಲಾ ನಾಯಕನ ಮನವಿ ಪುರಸ್ಕರಿಸಿದ ಆನ್​ಪೀಲ್ಡ್ ಅಂಪೈರ್, ಮ್ಯಾಥ್ಯೂಸ್ ಔಟೆಂದು ತೀರ್ಪು ನೀಡಿದರು.

ನಿಯಮಗಳ ಪ್ರಕಾರ, ಒಬ್ಬ ಬ್ಯಾಟರ್ ಔಟಾದ ಬಳಿಕ ಹೊಸ ಬ್ಯಾಟ್ಸ್‌ಮನ್ ಎರಡು ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಆದರೆ ಮ್ಯಾಥ್ಯೂಸ್‌ಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್ ಔಟ್ ನೀಡಬೇಕಾಯಿತು. ಒಂದು ವೇಳೆ ಬಾಂಗ್ಲಾದೇಶದ ನಾಯಕ ಹಸನ್, ಇಲ್ಲಿ ಮ್ಯಾಥ್ಯೂಸ್ ಔಟ್​ಗೆ ಮನವಿ ಮಾಡದಿದ್ದರೆ ಮ್ಯಾಥ್ಯೂಸ್ ಔಟಾಗುತ್ತಿರಲಿಲ್ಲ. ಇದಾದ ಬಳಿಕ ಬಾಂಗ್ಲಾ-ಲಂಕಾ ನಡುವಣ ಪಂದ್ಯ ಮತ್ತಷ್ಟು ಕಾವೇರಿತು.

ಬಾಂಗ್ಲಾ ಬ್ಯಾಟಿಂಗ್ ಮಾಡುವ ವೇಳೆ ಶಕಿಬ್ ಅವರು ಮ್ಯಾಥ್ಯೂಸ್ ಬೌಲಿಂಗ್​ನಲ್ಲೇ ಔಟ್ ಆದರು. ಈ ಸಂದರ್ಭ ಮ್ಯಾಥ್ಯೂಸ್ ‘ನಿನ್ ಟೈಮ್ ಆಯ್ತು’ ಎಂಬಂತೆ ಸನ್ನೆ ಮಾಡಿ ಪೆವಿಲಿಯನ್​​ಗೆ ಹೋಗು ಎಂದರು. ಪಂದ್ಯ ಮುಗಿದ ಬಳಿಕ ಲಂಕಾ ಆಟಗಾರರು ಬಾಂಗ್ಲಾ ಆಟಗಾರರ ಜೊತೆ ಹಸ್ತಲಾಘವ ಕೂಡ ಮಾಡಲಿಲ್ಲ.

2 ಸ್ಥಾನಗಳಿಗಾಗಿ 6 ತಂಡಗಳ ನಡುವೆ ಫೈಟ್; ಇಲ್ಲಿದೆ ಸೆಮಿಫೈನಲ್‌ ಲೆಕ್ಕಾಚಾರ

ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಮ್ಯಾಥ್ಯೂಸ್ ಬಾಂಗ್ಲಾದ ನಡೆಯನ್ನು ಖಂಡಿಸಿದ್ದಾರೆ. ”ನಾನೇನೂ ತಪ್ಪು ಮಾಡಿಲ್ಲ. ನಾನು ತಯಾರಾಗಲು ಎರಡು ನಿಮಿಷಗಳ ಕಾಲಾವಕಾಶವಿತ್ತು, ಆದರೆ ಹೆಲ್ಮೆಟ್​ನಲ್ಲಿ ತೊಂದರೆಯಾಗಿತ್ತು. ಇವರಿಗೆ ಕಾಮನ್ಸೆನ್ಸ್ ಎಂಬುದು ಇಲ್ಲ. ಇದು ಶಕೀಬ್ ಮತ್ತು ಬಾಂಗ್ಲಾದೇಶದಿಂದ ಅವಮಾನಕರವಾಗಿದೆ” ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.

”ಇಷ್ಟು ಕೆಳ ಮಟ್ಟಕ್ಕೆ ಇಳಿದು ಕ್ರಿಕೆಟ್ ಆಡುವುದು ತಪ್ಪು. ನಿಯಮಗಳ ಪ್ರಕಾರ, ನಾನು ಎರಡು ನಿಮಿಷಗಳಲ್ಲಿ ತಯಾರಾಗಬೇಕು, ನನಗೆ ಅಲ್ಲಿ ಇನ್ನೂ ಐದು ಸೆಕೆಂಡುಗಳು ಕಾಲಾವಕಾಶವಿತ್ತು. ಈರೀತಿಯ ಘಟನೆ ಅವಮಾನಕರವಾಗಿದೆ. ನಮ್ಮನ್ನು ಗೌರವಿಸುವ ಜನರನ್ನಷ್ಟೆ ನಾವೂ ಗೌರವಿಸುತ್ತೇವೆ. ನಾವೆಲ್ಲರೂ ಉತ್ತಮವಾಗಿ ಕ್ರಿಕೆಟ್ ಆಡಲು ಬಂದಿದ್ದೇವೆ. ನೀವು ಇದಕ್ಕೆ ಗೌರವ ಕೊಡದಿದ್ದರೆ ಇನ್ನೇನು ಹೇಳಲು ಸಾಧ್ಯ,” ಎಂದು ಎಂದು ಹೇಳಿದ್ದಾರೆ.

“ಇಂದಿನವರೆಗೂ ನಾನು ಶಕೀಬ್ ಮತ್ತು ಬಾಂಗ್ಲಾದೇಶ ತಂಡದ ಬಗ್ಗೆ ಗೌರವವನ್ನು ಹೊಂದಿದ್ದೆ. ಆದರೀಗ ಆ ಗೌರವವೆಲ್ಲ ಹೋಗಿದೆ. ನಾವೆಲ್ಲರೂ ಗೆಲ್ಲಲು ಆಡುತ್ತೇವೆ, ಅದು ನಿಯಮದೊಳಗೆ ಇದ್ದರೆ ಉತ್ತಮ. ಆದರೆ ಎರಡು ನಿಮಿಷಗಳಲ್ಲಿ ನಾನು ಅಲ್ಲಿದ್ದೆ… ನಮ್ಮ ಬಳಿ ವಿಡಿಯೋ ಸಾಕ್ಷ್ಯವಿದೆ. ಇದನ್ನು ನಾವು ಹೊರಗಡೆ ತರುತ್ತೇವೆ. ನಾನು ಸಾಕ್ಷಿಯೊಂದಿಗೆ ಮಾತನಾಡುತ್ತಿದ್ದೇನೆ,” – ಮ್ಯಾಥ್ಯೂಸ್.

“ನಾವು ಆಟಗಾರರ ಸುರಕ್ಷತೆಯ ಬಗ್ಗೆ ಮಾತನಾಡುತ್ತೇವೆ. ಹೀಗಾದಾಗ, ನಾನು ಹೆಲ್ಮೆಟ್ ಇಲ್ಲದೆ ಆಡಬೇಕೇ? ಅನುಮಾನವಿದ್ದರೆ ಸ್ವತಃ ಅಂಪೈರ್ ಇದನ್ನು ಪರೀಕ್ಷಿಸಬಹುದಿತ್ತು. ನನ್ನ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ, ಈ ಮಟ್ಟಕ್ಕೆ ಇಳಿದ ತಂಡವನ್ನು ನಾನು ನೋಡಿಲ್ಲ. ನಾನು ಬ್ಯಾಟಿಂಗ್ ಮಾಡಿದರೆ ಪಂದ್ಯ ಗೆಲ್ಲುತ್ತಿತ್ತು ಎಂದು ಹೇಳುತ್ತಿಲ್ಲ. ಆದರೆ, ನಾವು ಕಾಮನ್ಸೆನ್ಸ್ ಹೊಂದಿರಬೇಕು, ಇದು ತೀರಾ ಕಳಪೆಯಾಗಿದೆ. ಬಾಂಗ್ಲಾದೇಶ ಬಿಟ್ಟು ಬೇರೆ ಯಾವುದೇ ತಂಡವು ಈರೀತಿ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ.”

“ನಾನು ಅಲ್ಲಿ ಬೇಕೆಂದು ಸಮಯ ವ್ಯರ್ಥ ಮಾಡಲಿಲ್ಲ ಎಂಬುದು ಶಕೀಬ್‌ ಅವರಿಗೆ ಕೂಡ ತಿಳಿದಿತ್ತು. ಇದು ಸಾಮಾನ್ಯ ವಿಷಯ ಆಗಿರುವುದರಿಂದ ಅಂಪೈರ್ ಬಳಿ ಹೋಗದೆ ಮಾನವೀಯತೆ ಮೆರೆಯಬಹುದಿತ್ತು. ಆದರೆ ಅವರು ಬೇರೆ ದಾರಿ ಹಿಡಿದರು”, ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ