- Kannada News Photo gallery Cricket photos Glenn maxwell created history with double hundred and creats many records against afghanistan
Glenn Maxwell Records: ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ದ್ವಿಶತಕಕ್ಕೆ ಹಳೆಯ ದಾಖಲೆಗಳೆಲ್ಲ ಉಡೀಸ್..!
Glenn Maxwell Records: ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 2023 ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 128 ಎಸೆತಗಳಲ್ಲಿ ಅಜೇಯ 201 ರನ್ ಸಿಡಿಸಿದರು. ಈ ಇನ್ನಿಂಗ್ಸ್‌ನಲ್ಲಿ ಗ್ಲೆನ್ 21 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದ ಮ್ಯಾಕ್ಸ್‌ವೆಲ್ ಈ ದ್ವಿಶತಕದೊಂದಿಗೆ ಗ್ಲೆನ್ ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು.
Updated on:Nov 08, 2023 | 10:42 AM

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 2023 ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 128 ಎಸೆತಗಳಲ್ಲಿ ಅಜೇಯ 201 ರನ್ ಸಿಡಿಸುವುದರೊಂದಿಗೆ ಹಲವು ದಾಖಲೆಗಳನ್ನೂ ಸಹ ನಿರ್ಮಿಸಿದ್ದಾರೆ.

ಈ ಇನ್ನಿಂಗ್ಸ್‌ನಲ್ಲಿ ಗ್ಲೆನ್ 21 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದ ಮ್ಯಾಕ್ಸ್‌ವೆಲ್ ಈ ದ್ವಿಶತಕದೊಂದಿಗೆ ಗ್ಲೆನ್ ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಆಸ್ಟ್ರೇಲಿಯಾದ ಮೊದಲ ಬ್ಯಾಟ್ಸ್‌ಮನ್ ಮತ್ತು ಒಟ್ಟಾರೆ ಒಂಬತ್ತನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಹಾಗೆಯೇ ಮಾರ್ಟಿನ್ ಗಪ್ಟಿಲ್ ಮತ್ತು ಕ್ರಿಸ್ ಗೇಲ್ ನಂತರ ವಿಶ್ವಕಪ್‌ನಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್‌ನಲ್ಲಿ ಚೇಸಿಂಗ್ ಮಾಡುವಾಗ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಗ್ಲೆನ್, 12 ವರ್ಷಗಳ ಹಿಂದೆ ವಿಶ್ವಕಪ್ ಚೇಸ್‌ನಲ್ಲಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನೂ ಮುರಿದಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸ್ಟ್ರಾಸ್ 158 ರನ್ ಗಳಿಸಿದ್ದರು. ಇದೀಗ ಈ ದಾಖಲೆ ಮ್ಯಾಕ್ಸ್‌ವೆಲ್ ಪಾಲಾಗಿದೆ.

ವಿಶ್ವಕಪ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಮ್ಯಾಕ್ಸ್‌ವೆಲ್ ಮುರಿದಿದ್ದಾರೆ. ಈ ಹಿಂದೆ 2015 ರ ವಿಶ್ವಕಪ್‌ನಲ್ಲಿ ಇದೇ ಅಫ್ಘಾನಿಸ್ತಾನ ವಿರುದ್ಧ ಡೇವಿಡ್ ವಾರ್ನರ್ 178 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಆ ದಾಖಲೆಯನ್ನು ಗ್ಲೆನ್ ಮುರಿದಿದ್ದಾರೆ.

ಹಾಗೆಯೇ ಏಕದಿನ ವಿಶ್ವಕಪ್‌ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ ಎನಿಸಿಕೊಂಡಿರುವ ಗ್ಲೆನ್, 1983 ರ ವಿಶ್ವಕಪ್‌ನಲ್ಲಿ 6ನೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 175 ರನ್ ಸಿಡಿಸಿದ್ದ ಕಪಿಲ್ ದೇವ್ ಅವರ ದಾಖಲೆಯನ್ನೂ ಮುರಿದಿದ್ದಾರೆ.
Published On - 7:26 am, Wed, 8 November 23



















