Asghar Afghan: ಯುವ ಆಟಗಾರರಿಗೆ ಚಾನ್ಸ್ ಸಿಗಲು ಕಣ್ಣೀರಿನೊಂದಿಗೆ ನಿವೃತ್ತಿ ಘೋಷಿಸಿದ ಅಫ್ಘಾನ್ ಆಟಗಾರ
ಅಫ್ಘಾನಿಸ್ತಾನ್ ತಂಡವು ಮಾರ್ಚ್‌ನಲ್ಲಿ ಅಬುಧಾಬಿಯಲ್ಲಿ ಜಿಂಬಾಬ್ವೆ ವಿರುದ್ದ 41 ರನ್‌ಗಳಿಂದ ಗೆಲುವು ದಾಖಲಿಸಿತು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿ ಅಸ್ಗರ್ ಅಫ್ಘಾನ್ ಅವರ 42ನೇ ಗೆಲುವು.
ಅಫ್ಘಾನಿಸ್ತಾನದ ಅನುಭವಿ ಆಟಗಾರ ಅಸ್ಗರ್ ಅಫ್ಘಾನ್ (Asghar Afghan) ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ನಮೀಬಿಯಾ ವಿರುದ್ದದ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಅಫ್ಘಾನಿಸ್ತಾನ್ ತಂಡದ ಮಾಜಿ ನಾಯಕ ತಿಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅಫ್ಘಾನ್ ತಂಡದ ಖಾಯಂ ಸದಸ್ಯರಾಗಿರುವ 33 ವರ್ಷದ ಅಸ್ಗರ್ ಅವರು ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಅಸ್ಗರ್, ತಂಡದಲ್ಲಿ ಯುವ ಆಟಗಾರರಿದ್ದಾರೆ. ಅವರಿಗೆ ಅವಕಾಶ ಸಿಗಬೇಕೆಂದು ನಿವೃತ್ತಿ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ನಮೀಬಿಯಾ ವಿರುದ್ದ ಮೊದಲ ಇನಿಂಗ್ಸ್ ಬಳಿಕ ಮಾತನಾಡಿದ ಅಸ್ಗರ್ ಅವರಿಗೆ ಟಿ20 ವಿಶ್ವಕಪ್ ಮುಗಿದ ಬಳಿಕ ನಿವೃತ್ತಿ ಘೋಷಿಸಬಹುದಿತ್ತಲ್ವಾ ಎಂಬ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಸ್ಪಷ್ಟನೆ ನೀಡಿದ ಅಸ್ಗರ್, ನನಗೆ ಅಫ್ಘಾನಿಸ್ತಾನ್ ತಂಡವನ್ನು ಪ್ರತಿನಿಧಿಸಿದ ಬಗ್ಗೆ ಹೆಮ್ಮೆ ಇದೆ. ಇದೀಗ ತಂಡದಲ್ಲಿ ಅನೇಕ ಯುವ ಆಟಗಾರರಿದ್ದಾರೆ. ಅವರಿಗೆ ಅವಕಾಶ ಸಿಗಬೇಕು. ಹೀಗಾಗಿ ನಾನು ನಿವೃತ್ತಿ ಘೋಷಿಸಲು ನಿರ್ಧರಿಸಿದೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು. ಅಲ್ಲದೆ ನನ್ನನ್ನು ಇದುವರೆಗೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞರಾಗಿರುವುದಾಗಿ ತಿಳಿಸಿದರು.
33 ವರ್ಷದ ಅಸ್ಗರ್ ಅಫ್ಘಾನ್ ಇದುವರೆಗೆ 6 ಟೆಸ್ಟ್ ಮತ್ತು 114 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ 75 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 4215 ರನ್ ಕಲೆಹಾಕಿದ್ದಾರೆ. ಇನ್ನು ಅಫ್ಘಾನಿಸ್ತಾನ್ ತಂಡವನ್ನು 115 ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆ ಹಾಗೂ ಅಫ್ಘಾನ್ ನಾಯಕನಾಗಿ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ದಾಖಲೆಯೂ ಅಸ್ಗರ್ ಅಫ್ಘಾನ್ ಹೆಸರಿನಲ್ಲಿದೆ.
Atal Asghar Afghan cried after leaving cricket forever you are the real hero of afghan team Thank you for your service to Afghanistan Proud of you! pic.twitter.com/wWklaHI9Qh
— Nisar Afghan (@NisarAfghan47) October 31, 2021
ಅಫ್ಘಾನಿಸ್ತಾನ್ ತಂಡವು ಮಾರ್ಚ್‌ನಲ್ಲಿ ಅಬುಧಾಬಿಯಲ್ಲಿ ಜಿಂಬಾಬ್ವೆ ವಿರುದ್ದ 41 ರನ್‌ಗಳಿಂದ ಗೆಲುವು ದಾಖಲಿಸಿತು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿ ಅಸ್ಗರ್ ಅಫ್ಘಾನ್ ಅವರ 42ನೇ ಗೆಲುವು. ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಅಸ್ಗರ್ ಅಫ್ಘಾನ್ ತಮ್ಮದಾಗಿಸಿಕೊಂಡಿದ್ದರು. ಇನ್ನು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ದಾಖಲೆಯನ್ನೂ ಅಸ್ಗರ್ ಅಫ್ಘಾನ್ ಹೊಂದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಸತತ 46 ಪಂದ್ಯಗಳಲ್ಲಿ ಅಫ್ಘಾನಿಸ್ತಾನ ತಂಡವನ್ನು ಮುನ್ನಡೆಸಿದ್ದಾರೆ.
Alan Wilkins interviewed Asghar Afghan at the end of the innings and directly asked him why he was retiring in the middle of the tournament instead of waiting till the end.
In the beginning, Asghar said that he wanted to
leave his place for youngsters , Good think great Man pic.twitter.com/4sV02055h1
— Nawaz khan (@NawazSharifkha9) October 31, 2021
2018 ರಲ್ಲಿ ಅಫ್ಘಾನಿಸ್ತಾನ್ ಭಾರತದ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ ಅಸ್ಗರ್ ಅಫ್ಘಾನ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಅಫ್ಘಾನಿಸ್ತಾನ್ ತಂಡವು ಎರಡು ಟೆಸ್ಟ್‌ಗಳನ್ನು ಗೆದ್ದಿದೆ. ಹಾಗೆಯೇ 59 ಏಕದಿನ ಪಂದ್ಯಗಳಲ್ಲಿ 34 ರಲ್ಲಿ ಜಯ ಸಾಧಿಸಿದೆ.
2015 ರ ವಿಶ್ವಕಪ್ ನಂತರ ಮೊಹಮ್ಮದ್ ನಬಿ ಬದಲಿಗೆ ಅಸ್ಗರ್ ಅಫ್ಘಾನ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಅವರು ನಾಲ್ಕುವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದರು. 2019 ರ ವಿಶ್ವಕಪ್‌ನಲ್ಲಿ ಗುಲ್ಬದಿನ್ ನೈಬ್ ಅವರನ್ನು ಅಫ್ಘಾನಿಸ್ತಾನ ತಂಡದ ನಾಯಕರನ್ನಾಗಿ ಮಾಡಲಾಯಿತು. ಇದಾದ ಬಳಿಕ ಮತ್ತೊಮ್ಮೆ ಅವರನ್ನು ನಾಯಕನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಮೇ 2021 ರಲ್ಲಿ ಮತ್ತೆ ಸ್ಥಾನದಿಂದ ತೆಗೆದುಹಾಕಲಾಯಿತು. ಇದಾಗ್ಯೂ ಈ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಅಸ್ಗರ್ ಅಫ್ಘಾನ್ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಯುವ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(Asghar Afghan to retire after Namibia clash)