Steve Smith Video: ‘ನೀವು ಅಳುವುದನ್ನು ನಾವು ಟಿವಿಯಲ್ಲಿ ನೋಡಿದ್ದೇವೆ’! ಸ್ಟೀವ್ ಸ್ಮಿತ್ ಕಾಲೆಳೆದ ಇಂಗ್ಲೆಂಡ್ ಫ್ಯಾನ್ಸ್; ವಿಡಿಯೋ
Ashes 2023, ENG VS AUS: ಸ್ಟೀವ್ ಸ್ಮಿತ್ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಸ್ಟೀವ್ ಸ್ಮಿತ್ ಬದುಕಲ್ಲಿ 2018ರಲ್ಲಿ ನಡೆದ ಅದೊಂದು ಕಹಿ ಘಟನೆಯನ್ನು ಹಾಡಿನ ಮೂಲಕ ನೆನಪಿಸಲು ಇಂಗ್ಲೆಂಡ್ ಅಭಿಮಾನಿಗಳು ಪ್ರಾರಂಭಿಸಿದರು.
ಕ್ರಿಕೆಟ್ ಮೈದಾನದಲ್ಲಿ ಆಟಗಾರರ ವಿರುದ್ಧ ಆಗಾಗ್ಗೆ ಸ್ಲೆಡ್ಜಿಂಗ್ ನಡೆಯುವುದು ಸರ್ವೆ ಸಾಮಾನ್ಯ. ನಾವು ಇದನ್ನು ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಪಂದ್ಯಗಳಲ್ಲಿ ಸಾಕಷ್ಟು ಭಾರಿ ನೋಡಿದ್ದೇವೆ. ಆದರೆ ಬರೋಬ್ಬರಿ 5 ವರ್ಷಗಳ ಹಿಂದೆ ಮಾಡಿದ ಒಂದೇ ಒಂದು ತಪ್ಪನ್ನು ಹಿಡಿದು ಪದೇ ಪದೇ ಒಬ್ಬ ಆಟಗಾರನನ್ನು ನಿಂದಿಸುವುದು ಎಷ್ಟು ಸರಿ ಎಂಬುದು ಕ್ರಿಕೆಟ್ ಲೋಕದಲ್ಲಿ ಈಗ ಕೇಳಿಬರುತ್ತಿರುವ ಮಾತಾಗಿದೆ. ವಾಸ್ತವವಾಗಿ 2018 ರಲ್ಲಿ ಸ್ಟೀವ್ ಸ್ಮಿತ್ ಮಾಡಿದ ಅದೊಂದು ತಪ್ಪಿನ ಪರಿಣಾಮ ಆ್ಯಶಸ್ ಸರಣಿಯ (Ashes 2023) ಎಡ್ಜ್‌ಬಾಸ್ಟನ್ ಟೆಸ್ಟ್‌ನ ನಾಲ್ಕನೇ ದಿನದಂದು ಗೋಚರಿಸಿತು. ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ (Steve Smith) ಅವರನ್ನು ಇಂಗ್ಲೆಂಡ್ ಅಭಿಮಾನಿಗಳು ಗೇಲಿ ಮಾಡಿದ್ದಲ್ಲದೆ, ಹಾಡು ಹಾಡುವ ಮೂಲಕ ಕೀಟಲೆ ಮಾಡಿದರು.
ವಾಸ್ತವವಾಗಿ ಎಡ್ಜ್‌ಬಾಸ್ಟನ್ ಟೆಸ್ಟ್‌ನ ನಾಲ್ಕನೇ ದಿನ ಆಗಿದ್ದೇನೆಂದರೆ, ಸ್ಟೀವ್ ಸ್ಮಿತ್ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಸ್ಟೀವ್ ಸ್ಮಿತ್ ಬದುಕಲ್ಲಿ 2018ರಲ್ಲಿ ನಡೆದ ಅದೊಂದು ಕಹಿ ಘಟನೆಯನ್ನು ಹಾಡಿನ ಮೂಲಕ ನೆನಪಿಸಲು ಇಂಗ್ಲೆಂಡ್ ಅಭಿಮಾನಿಗಳು ಪ್ರಾರಂಭಿಸಿದರು. ‘ನೀವು ಅಳುವುದನ್ನು ನಾವು ಟಿವಿಯಲ್ಲಿ ನೋಡಿದ್ದೇವೆ’ ಎಂದು ಹಾಡುವ ಮೂಲಕ ಅಪಹಾಸ್ಯ ಮಾಡಿದರು. ಇಂಗ್ಲೆಂಡ್ ಅಭಿಮಾನಿಗಳ ಈ ವರ್ತನೆಗೆ ಸ್ಮಿತ್ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Steve Smith heads over to the Hollies for the first time this series….#Ashes pic.twitter.com/Hs1cRB56Lb
— England’s Barmy Army ???????? (@TheBarmyArmy) June 19, 2023
Ashes 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1100 ವಿಕೆಟ್..! ವಿಶೇಷ ದಾಖಲೆ ಬರೆದ ಜೇಮ್ಸ್ ಆಂಡರ್ಸನ್
ಚೆಂಡನ್ನು ವಿರೂಪಗೊಳಿಸಿದ ಆರೋಪ
ಇಂಗ್ಲೆಂಡ್ ಅಭಿಮಾನಿಗಳು ಈ ರೀತಯಾಗಿ ತನ್ನನ್ನು ನಿಂದಿಸುತ್ತಿರುವುದನ್ನು ಗಮನಿಸಿದ ಸ್ಮಿತ್, ನಗುವ ಮೂಲಕ ಪ್ರತಿಕ್ರಿಸಿದರು. ಅಷ್ಟಕ್ಕೂ ಇಂಗ್ಲೆಂಡ್ ಅಭಿಮಾನಿಗಳು ಈ ರೀತಿಯಾಗಿ ಸ್ಮಿತ್ ಕಾಲೆಳೆಯಲು ಕಾರಣವೂ ಇದೆ. ವಾಸ್ತವವಾಗಿ, 2018 ರಲ್ಲಿ ಆಸೀಸ್ ತಂಡ, ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಟೆಸ್ಟ್ ಪಂದ್ಯದ ವೇಳೆ ಆಸೀಸ್ ವೇಗಿ ಚೆಂಡನ್ನು ವಿರೂಪಗೊಳಿಸಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದರು. ಆಸ್ಟ್ರೇಲಿಯನ್ ಆಟಗಾರರಾದ ಬ್ಯಾಂಕ್ರಾಫ್ಟ್ ಅವರು ಸ್ಯಾಂಡ್ ಪೇಪರ್ ಮೂಲಕ ಚೆಂಡನ್ನು ವಿರೂಪಗೊಳಿಸುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಿಖೆಯ ನಂತರ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಸಾಭೀತಾಗಿತ್ತು.
Heartbreaking. Steve Smith has broken down delivering a message to young Aussie cricket fans. pic.twitter.com/l14AsvAhXz
— cricket.com.au (@cricketcomau) March 29, 2018
ಈ ಘಟನೆಯ ನಂತರ, ಆಸ್ಟ್ರೇಲಿಯನ್ ಕ್ರಿಕೆಟ್ ವಿಶ್ವ ಕ್ರಿಕೆಟ್ನ ಮುಂದೆ ತಲೆಬಾಗುವಂತ್ತಾಗಿತ್ತು. ಹೀಗಾಗಿ ಆಸೀಸ್ ಮಂಡಳಿ ಸ್ಮಿತ್, ವಾರ್ನರ್ ಮತ್ತು ಬ್ಯಾಂಕ್ರಾಫ್ಟ್ ಅವರನ್ನು ಕ್ರಿಕೆಟ್ನಿಂದ 1 ವರ್ಷ ನಿಷೇಧಗೊಳಿಸಿತ್ತು. ಇದರಿಂದ ತೀರ ಆಘಾತಕ್ಕೊಳಗಾಗಿದ್ದ ಸ್ಮಿತ್ ಹಾಗೂ ವಾರ್ನರ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದಲ್ಲದೆ, ಕಣ್ಣೀರು ಹಾಕಿದ್ದರು. ಈಗ ಅದೇ ಘಟನೆಯನ್ನು ಗಾಳವಾಗಿ ಬಳಸಿಕೊಂಡಿರುವ ಇಂಗ್ಲಿಷ್ ಅಭಿಮಾನಿಗಳು ಸ್ಮಿತ್ ಕಾಲೆಳೆದಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ವಿಫಲ
ಇದೆಲ್ಲದರ ಹೊರತಾಗಿ ಮೊದಲ ಟೆಸ್ಟ್‌ನಲ್ಲಿ ಸ್ಮಿತ್ ಆಟವನ್ನು ನೋಡುವುದಾದರೆ, ಆಸ್ಟ್ರೇಲಿಯಾದ ಈ ದಿಗ್ಗಜ ಬ್ಯಾಟ್ಸ್‌ಮನ್ ಆಶಸ್ ಸರಣಿಯ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾದರು. ಸ್ಮಿತ್ ಮೊದಲ ಇನ್ನಿಂಗ್ಸ್‌ನಲ್ಲಿ 16 ರನ್‌ಗಳಿಗೆ ಸುಸ್ತಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್‌ಗಳಿಗೆ ಔಟಾದರು. ಆದರೆ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ 44 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಧಾರದ ಮೇಲೆ ಆಸ್ಟ್ರೇಲಿಯಾ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಬೀಗಿದೆ. ಆ್ಯಶಸ್‌ನ ಮೊದಲ ಟೆಸ್ಟ್‌ನಲ್ಲಿ 2 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ನೀಡಿದ್ದ 281 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ ಸಾಧಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Wed, 21 June 23