ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಇಂಗ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ (Ashish Nehra) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ವಿಶೇಷ. ಅಂದರೆ ನೆಹ್ರಾ ಹಾಗೂ ರಿಷಿ ಸುನಕ್ ಮುಖಚರ್ಯೆಯಲ್ಲಿ ಸಾಮ್ಯತೆ ಇರುವುದರಿಂದ ಇದೀಗ ನಾನಾ ರೀತಿಯ ಮೀಮ್ಸ್ ಹುಟ್ಟಿಕೊಂಡಿದೆ.
ನೆಹ್ರಾ ಅವರ ಫೋಟೋಗಳೊಂದಿಗೆ ಇದೀಗ ರಿಷಿ ಸುನಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇಬ್ಬರೂ ನಡುವೆ ಹೋಲಿಕೆ ಇರುವುದರಿಂದ ನೆಹ್ರಾ ಅವರ ಸ್ಟ್ರಾಟಜಿಯನ್ನು ಬಳಸಿ ನಾನಾ ರೀತಿಯ ಹಾಸ್ಯಚಟಾಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಅವುಗಳಲ್ಲಿ ಪ್ರಮುಖ ಮೀಮ್ಸ್ಗಳ ಕೆಲ ಸ್ಯಾಂಪಲ್ಗಳು ಇಲ್ಲಿವೆ.
ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಕುಂಭಮೇಳದಲ್ಲಿ ಕಳೆದು ಹೋಗಿರುವ ಸಹೋದರಂತೆ ಕಾಣುತ್ತಾರೆ ಎಂದು ವ್ಯಕ್ತಿಯೊಬ್ಬರು ಇಬ್ಬರ ಫೋಟೋ ಟ್ವೀಟ್ ಮಾಡಿದ್ದಾರೆ.
Rishi Sunak and Ashish Nehra seem to be brothers who were estranged in Kumbh Ka Mela.#Rumor
?? pic.twitter.com/rMSrFOZb3r— SOCRATES (@DJSingh85016049) October 24, 2022
ರಿಷಿ ಸುನಕ್ ಹಿಂದೂ ಆಗಿರುವುದರಿಂದ ಅವರು ಭಗವದ್ಗೀತೆಯ ಶ್ಲೋಕಗಳನ್ನು ಉಲ್ಲೇಖಿಸುತ್ತಾರೆ. ಹಾಗೆಯೇ ದೀಪಾವಳಿಯಂದು ದೀಪಗಳನ್ನು ಬೆಳಗಿಸುತ್ತಾರೆ. ಅವರ ಪೋಷಕರು ಭಾರತೀಯ ಮೂಲದವರು. ಈ ಹಿಂದೆ ಭಗವದ್ಗೀತೆಯನ್ನು ಪ್ರಮಾಣ ಮಾಡಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಶೀಘ್ರದಲ್ಲೇ ಬ್ರಿಟನ್ ಪ್ರಧಾನಿಯಾಗಲಿರುವುದರಿಂದ ಇನ್ನು ಕೊಹಿನೂರ್ ವಜ್ರವನ್ನು ಕೇಳುವುದು ನ್ಯಾಯಯುತವಾಗಿದೆ…ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.
#RishiSunak with #ViratKohli ❣️ pic.twitter.com/6IICYVwuxK
— Professor ngl राजा बाबू ?? (@GaurangBhardwa1) October 24, 2022
Well done Ashish Nehra on becoming the next UK Prime Minister. Bring ‘IT’ home. #Kohinoor #RishiSunak pic.twitter.com/iUceugMdBG
— Kaustav Dasgupta ?? (@KDasgupta_18) October 24, 2022
ಅದರಲ್ಲೂ ನೆಹ್ರಾ ಅವರು ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಬಳಸಿಕೊಂಡಿದ್ದ ಸ್ಟ್ರಾಟಜಿಯನ್ನೇ ಬಳಸಿ ಕೊಹಿನೂರ್ ವಜ್ರವನ್ನು ತರಲು ಪ್ಲ್ಯಾನ್ ಮಾಡಬಹುದು ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
#RishiSunak planning how to bring back Kohinoor to India pic.twitter.com/3L3uSksvR5
— A? (@inevitable__31) October 24, 2022
ಮತ್ತೊಬ್ಬರು ರಿಷಿ ಸುನಕ್ ಅವರನ್ನು ಭಾರತಕ್ಕೆ ಆಹ್ವಾನಿಸಿ…ಆ ಬಳಿಕ ಅವರು ತಮ್ಮ ಹೆಂಡತಿಯ ಮನೆಗೆ ಹೋಗುವಾಗ ಬೆಂಗಳೂರು ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈ ವೇಳೆ ಕಿಡ್ನಾಪ್ ಮಾಡಿ, ಅವರ ಬದಲಿಗೆ ಆಶಿಶ್ ನೆಹ್ರಾ ಅವರನ್ನು ಇಂಗ್ಲೆಂಡ್ ಕಳುಹಿಸಿ. ಆ ನಂತರ ಕೊಹಿನೂರ್ ವಜ್ರವನ್ನು ಹಿಂತಿರುಗಿಸಲು ಬಿಲ್ ಪಾಸ್ ಮಾಡಿಸಬಹುದು ಎಂದು ಟ್ವಿಟಿಸಿದ್ದಾರೆ.
My foolproof plan to get back Kohinoor once Rishi Sunak becomes PM.
– Invite him to visit India.
– Kidnap him when he goes to his in laws house and got stuck in Bangalore traffic
– Send Ashish Nehra as UK PM.
– Get a bill passed to return KohinoorThis don’t require plan B
— ? (@DriverRamudu) October 20, 2022
ಕೊಹಿನೂರ್ ವಜ್ರದ ಇತಿಹಾಸ:
105.6 ಕ್ಯಾರೆಟ್ ಹೊಂದಿರುವ ಕೊಹಿನೂರ್ ವಜ್ರವು 14ನೇ ಶತಮಾನದಲ್ಲಿ ಭಾರತದಲ್ಲಿತ್ತು. 1849 ರಲ್ಲಿ, ಪಂಜಾಬ್ ಅನ್ನು ಬ್ರಿಟಿಷ್ ಸ್ವಾಧೀನಪಡಿಸಿಕೊಂಡ ನಂತರ, ವಜ್ರವನ್ನು ರಾಣಿ ವಿಕ್ಟೋರಿಯಾಗೆ ನೀಡಲಾಯಿತು. ಅಂದಿನಿಂದ ಇದು ಬ್ರಿಟಿಷ್ ರಾಣಿಯ ಕಿರೀಟದ ಭಾಗವಾಗಿದೆ. ಈ ಐತಿಹಾಸಿಕ ವಜ್ರವನ್ನು ಮರಳಿ ತರಬೇಕೆಂಬುದು ಭಾರತೀಯರ ಆಶಯ. ಇದೀಗ ರಿಷಿ ಸುನಕ್ ಇಂಗ್ಲೆಂಡ್ನ ಪ್ರಧಾನಿಯಾಗಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಕೊಹಿನೂರ್ ವಜ್ರ ಕೂಡ ಚರ್ಚಾ ವಿಷಯವಾಗಿದೆ.
Published On - 1:55 pm, Tue, 25 October 22