
ಕ್ರಿಕೆಟ್ನಿಂದ ವಿರಾಮ ಪಡೆದುಕೊಂಡಿರುವ ಟೀಮ್ ಇಂಡಿಯಾದ (Team India) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಈಗೀಗ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗರುವು ಶಾಸ್ತ್ರಿ ಟ್ವಿಟರ್ನಲ್ಲಿ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ. ಮೊನ್ನೆಯಷ್ಟೆ ತಮ್ಮ ಟ್ವಿಟರ್ನಲ್ಲಿ (Twitter) ವಿಶೇಷ ಗೆಟಪ್ನಲ್ಲಿ 3 ಫೋಟೋಗಳನ್ನ ಶೇರ್ ಮಾಡಿ ಕಾಣಿಸಿಕೊಂಡಿದ್ದರು. ನಿನ್ನೆ #AskRavi ಎಂದು ಟ್ವಿಟರ್ನಲ್ಲಿ ಬರೆದುಕೊಂಡು ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದಾರೆ. ಇದಕ್ಕೆ ಫ್ಯಾನ್ಸ್ ಕೂಡ ಭರ್ಜರಿ ಕಮೆಂಟ್ ಮಾಡಿದ್ದಾರೆ.
ಅನೇಕ ಅಭಿಮಾನಿಗಳು ರವಿ ಶಾಸ್ತ್ರಿ ಅವರ ಈ ಟ್ವೀಟ್ಗೆ ತಮಾಷೆಯಾಗಿ ರಿಪ್ಲೇ ಕೊಟ್ಟಿದ್ದಾರೆ. ವಿಶೇಷ ಎಂದರೆ ಕೆಲ ಕಮೆಂಟ್ಗೆ ಶಾಸ್ತ್ರಿ ಅವರು ಕೂಡ ಉತ್ತರ ನೀಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಫ್ಯಾನ್ ಒಬ್ಬರು, ಟೀಮ್ ಇಂಡಿಯಾ ಹಾಲಿ ನಾಯಕ ರೋಹಿತ್ ಶರ್ಮಾ ಅಥವಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪೈಕಿ ಒಬ್ಬರನ್ನು ಆಯ್ಕೆ ಮಾಡಿ ಎಂದು ಕೇಳಿ ಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಶಾಸ್ತ್ರಿ, ಯಾರ ಜೊತೆ ನಾನು ಹೆಚ್ಚು ಎಂಜಾಯ್ ಮಾಡುತ್ತೇನೋ ಅವರು ಎಂದು ಫನ್ನಿ ಆಗಿ ಹೇಳಿದ್ದಾರೆ.
ಇನ್ನೊಬ್ಬರು, ರವಿಶಾಸ್ತ್ರಿ ಅವರೆ ನಿಮ್ಮ ಚಿತ್ರವನ್ನು ಡ್ರಾಯಿಂಗ್ ಮಾಡಿದ್ದೇನೆ, ಹೇಗಿದೆ ಎಂದು ಕೇಳಿದ್ದಾರೆ. ಇದಕ್ಕೆ ಶಾಸ್ತ್ರಿ ರಿಪ್ಲೇ ದಯವಿಟ್ಟು ಅಳಿಸಿ ಹಾಕು ಎಂದಿತ್ತು. ಹೀಗೆ ಅನೇಕರು ಫನ್ನಿ ಆಗಿ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಶಾಸ್ತ್ರಿ ಕೂಡ ಕೋಪಗೊಳ್ಳದೆ ಖುಷಿಯಿಂದ ಉತ್ತರಿಸಿದ್ದಾರೆ.
ರವಿ ಶಾಸ್ತ್ರಿ ಎರಡು ದಿನಗಳ ಹಿಂದೆಯಷ್ಟೆ ತಮ್ಮ ಟ್ವಿಟರ್ನಲ್ಲಿ 3 ಫೋಟೋಗಳನ್ನ ಶೇರ್ ಮಾಡಿದ್ದರು. ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಶಾಸ್ತ್ರಿ, ಒಂದು ಫೋಟೋದಲ್ಲಿ Flashy jacket ಧರಿಸಿದ್ದಾರೆ. ಕಪ್ಪು ಕನ್ನಡಕ, ಕುತ್ತಿಗೆಗೆ ಚೈನ್ ಧರಿಸಿ ವಿಭಿನ್ನವಾಗಿ ಪೋಸ್ ನೀಡಿರುವ ಫೋಟೋವನ್ನ ಶೇರ್ ಮಾಡಿ, ‘ನೀವು ನಿದ್ರೆ ಮಾಡದಿದ್ದಾಗ Good Morning ಆಪ್ಸನಲ್’ ಎಂದು ಶೀರ್ಷಿಕೆ ನೀಡಿದ್ದಾರೆ. ಅದೇ ರೀತಿ ಮತ್ತೊಂದು ಫೋಟೋದಲ್ಲಿ, ‘ನನ್ನ ಕುಟುಂಬ ಮುಂಬೈನಲ್ಲಿದೆ. ನಾನೂ ಕೂಡ ಅಲ್ಲಿದ್ದೇನೆ’ ಎಂದಿದ್ದಾರೆ.
ಇನ್ನೊಂದು ಫೋಟೋದಲ್ಲಿ ಶಾಸ್ತ್ರಿ ಗುಲಾಬಿ ಬಣ್ಣದ ಕೋಟ್ ಧರಿಸಿದ್ದಾರೆ. ರವಿ ಶಾಸ್ತ್ರಿಯ ಈ ಪೋಸ್ಟ್ಗಳ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಫ್ಯಾನ್ಸ್ ಮಾತ್ರ ಫುಲ್ ಖುಷ್ ಆಗಿದ್ದಾರೆ. ಕೆಲವರಿ ಇವರನ್ನು ಹಾರ್ದಿಕ್ ಪಾಂಡ್ಯಗೆ ಹೋಲಿಕೆ ಮಾಡಿದರೆ, ಇನ್ನೂ ಕೆಲವರು ರಣವೀರ್ ಸಿಂಗ್ ಜೊತೆ ಲಿಂಕ್ ಮಾಡಿದ್ದಾರೆ. ಕಳೆದ ನವೆಂಬರ್ವರೆಗೆ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಸದ್ಯ ಐಪಿಎಲ್ನಲ್ಲಿ ಕಾಮೆಂಟರಿ ಮಾಡುವುದರಲ್ಲಿ ಬ್ಯುಸಿ ಇದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:37 am, Sat, 21 May 22