ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಹಲವು ರೋಚಕತೆಗಳಿಗೆ ಸಾಕ್ಷಿಯಾಗಿತ್ತು. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾವನ್ನು 325 ರನ್ಗೆ ಆಲೌಟ್ ಮಾಡಿದ ಎಜಾಝ್ ಪಟೇಲ್ 10 ವಿಕೆಟ್ ಉರುಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಕೇವಲ 62 ರನ್ಗಳಿಗೆ ನ್ಯೂಜಿಲೆಂಡ್ ಅನ್ನು ಆಲೌಟ್ ಮಾಡಿ ದಾಖಲೆ ಬರೆದರು. ಇನ್ನು ಈ ಪಂದ್ಯದಲ್ಲಿ ಕೈಲ್ ಜೇಮಿಸನ್ ಅವರ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಶ್ರೇಯಸ್ ಅಯ್ಯರ್ ಗಮನ ಸೆಳೆದರು. ಇನ್ನೊಂದೆಡೆ ಮೊದಲ ಇನಿಂಗ್ಸ್ನಲ್ಲಿ ರಿವ್ಯೂ ಪಡೆದು ರವಿಚಂದ್ರನ್ ಅಶ್ವಿನ್ ನಗೆಪಾಟಲಿಗೀಡಾದರು.
ಎಜಾಝ್ ಪಟೇಲ್ ಎಸೆತದ 72ನೇ ಓವರ್ನಲ್ಲಿ ಅಶ್ವಿನ್ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಇತ್ತ ಅಶ್ವಿನ್ ಬೇಲ್ಸ್ ಬಿದ್ದಿರುವುದು ಗಮನಿಸದೇ ನೇರವಾಗಿ ಅಂಪೈರ್ಗೆ ರಿವ್ಯೂ ಮನವಿ ಸಲ್ಲಿಸಿದರು. ಅತ್ತ ನ್ಯೂಜಿಲೆಂಡ್ ಕ್ರಿಕೆಟಿಗರಿಗೂ ಶಾಕ್. ಏಕೆಂದರೆ ಬೌಲ್ಡ್ ಆದರೆ ಮೂರನೇ ಅಂಪೈರ್ಗೆ ಮನವಿ ಸಲ್ಲಿಸುವಂತಿಲ್ಲ. ಅಷ್ಟರಲ್ಲಾಗಲೇ ನಾನ್ ಸ್ಟ್ರೈಕ್ನಲ್ಲಿದ್ದ ಮಯಾಂಕ್ ಅಗರ್ವಾಲ್ ಅಶ್ವಿನ್ಗೆ ಕ್ಲೀನ್ ಬೌಲ್ಡ್ ಆಗಿದ್ದೀರಿ ಎಂಬುದನ್ನು ತಿಳಿಸಿದರು. ಆ ಬಳಿಕವಷ್ಟೇ ಅಶ್ವಿನ್ಗೆ ತಾನು ಬೌಲ್ಡ್ ಆಗಿರುವುದು ಗೊತ್ತಾಗಿದ್ದದು. ಇದೀಗ ಅಶ್ವಿನ್ ಅವರ ರಿವ್ಯೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Who reviews a clean bowled.
Ravi Ashwin ? pic.twitter.com/KbxJBVOyIk
— Mirchi RJ Vijdan (@rj_vijdan) December 4, 2021
ಇನ್ನು ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 325 ರನ್ಗಳನ್ನು ಕಲೆಹಾಕಿದೆ. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ ಕೇವಲ 62 ರನ್ಗಳಿಗೆ ಆಲೌಟ್ ಮಾಡಿ ಎರಡನೇ ಇನಿಂಗ್ಸ್ ಆರಂಭಿಸಿದೆ. 2ನೇ ದಿನದಾಟದ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 69 ರನ್ಗಳಿಸಿದೆ. ಕ್ರೀಸ್ನಲ್ಲಿ 332 ರನ್ಗಳ ಮುನ್ನಡೆಯೊಂದಿಗೆ ಮಯಾಂಕ್ ಅರ್ಗವಾಲ್ ಹಾಗೂ ಚೇತೇಶ್ವರ ಪೂಜಾರಾ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್
ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(Ashwin comically reviews after being bowled)