Ipl 2022 All Team Retained Players: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
Ipl 2022 all team retained players: ಸನ್ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಡೇವಿಡ್ ವಾರ್ನರ್ ಹಾಗೂ ರಶೀದ್ ಖಾನ್ ಅವರು ಹೊರಬಂದಿದ್ದಾರೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ರಿಲೀಸ್ ಮಾಡಿದೆ.
Ipl 2022 All Team Retained Players: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಮೆಗಾ ಹರಾಜಿಗೂ ಮುನ್ನ 8 ಫ್ರಾಂಚೈಸಿಗಳು ತಮ್ಮ ರಿಟೈನ್ ಪಟ್ಟಿಯನ್ನು ಪ್ರಕಟಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೂವರು ಆಟಗಾರರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್ (Punjab Kings) ತಂಡದಿಂದ ಕೆಎಲ್ ರಾಹುಲ್ (KL Rahul), ಕ್ರಿಸ್ ಗೇಲ್ ರಿಲೀಸ್ ಆಗಿದ್ದರೆ, ಸನ್ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಡೇವಿಡ್ ವಾರ್ನರ್ ಹಾಗೂ ರಶೀದ್ ಖಾನ್ ಅವರು ಹೊರಬಂದಿದ್ದಾರೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ರಿಲೀಸ್ ಮಾಡಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಫಾಫ್ ಡುಪ್ಲೆಸಿಸ್ ಹಾಗೂ ಶಾರ್ದೂಲ್ ಠಾಕೂರ್ ರಿಲೀಸ್ ಆಗಿದ್ದಾರೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ಇಂಗ್ಲೆಂಡ್ ಆಟಗಾರರಾದ ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ರನ್ನು ರಿಲೀಸ್ ಮಾಡಿ ಅಚ್ಚರಿ ಮೂಡಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ಪ್ರಮುಖ ಆಟಗಾರರಾದ ಸುನಿಲ್ ನರೈನ್ ಹಾಗೂ ಆಂಡ್ರೆ ರಸೆಲ್ ರನ್ನು ಈ ಬಾರಿ ಕೂಡ ಉಳಿಸಿಕೊಂಡಿದೆ. ಹಾಗಿದ್ರೆ ಯಾವ ತಂಡ ಯಾರನ್ನು ಉಳಿಸಿಕೊಂಡಿದೆ ನೋಡೋಣ….
ಸನ್ರೈಸರ್ಸ್ ಹೈದರಾಬಾದ್:
1- ಕೇನ್ ವಿಲಿಯಮ್ಸನ್- 14 ಕೋಟಿ 2- ಉಮ್ರಾನ್ ಮಲಿಕ್- 4 ಕೋಟಿ 3- ಅಬ್ದುಲ್ ಸಮದ್- 4 ಕೋಟಿ
ರಾಜಸ್ಥಾನ್ ರಾಯಲ್ಸ್:
1- ಸಂಜು ಸ್ಯಾಮ್ಸನ್- 14 ಕೋಟಿ 2- ಜೋಸ್ ಬಟ್ಲರ್- 10 ಕೋಟಿ 3- ಯಶಸ್ವಿ ಜೈಸ್ವಾಲ್- 4 ಕೋಟಿ
ಮುಂಬೈ ಇಂಡಿಯನ್ಸ್:
1- ರೋಹಿತ್ ಶರ್ಮಾ- 16 ಕೋಟಿ 2- ಜಸ್ಪ್ರೀತ್ ಬುಮ್ರಾ- 12 ಕೋಟಿ 3- ಸೂರ್ಯಕುಮಾರ್ ಯಾದವ್- 8 ಕೋಟಿ 4- ಕೀರನ್ ಪೊಲಾರ್ಡ್- 6 ಕೋಟಿ
ಕೊಲ್ಕತ್ತಾ ನೈಟ್ ರೈಡರ್ಸ್:
1- ಆಂಡ್ರೆ ರಸೆಲ್- 12 ಕೋಟಿ 2- ವರುಣ್ ಚಕ್ರವರ್ತಿ- 8 ಕೋಟಿ 3- ವೆಂಕಟೇಶ್ ಅಯ್ಯರ್- 8 ಕೋಟಿ 4- ಸುನಿಲ್ ನರೈನ್- 6 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್:
1- ರವೀಂದ್ರ ಜಡೇಜಾ- 16 ಕೋಟಿ 2- ಮಹೇಂದ್ರ ಸಿಂಗ್ ಧೋನಿ- 12 ಕೋಟಿ 3- ಮೊಯೀನ್ ಅಲಿ- 8 ಕೋಟಿ 4- ರುತುರಾಜ್ ಗಾಯಕ್ವಾಡ್- 6 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್:
1- ರಿಷಭ್ ಪಂತ್- 16 ಕೋಟಿ 2- ಪೃಥ್ವಿ ಶಾ- 12 ಕೋಟಿ 3- ಅಕ್ಷರ್ ಪಟೇಲ್- 7.5 ಕೋಟಿ 4- ಅನ್ರಿಕ್ ನೋಕಿಯಾ- 6.5 ಕೋಟಿ
ಪಂಜಾಬ್ ಕಿಂಗ್
1- ಮಯಾಂಕ್ ಅಗರ್ವಾಲ್ – 14 ಕೋಟಿ 2- ಅರ್ಷದೀಪ್ ಸಿಂಗ್ – 4 ಕೋಟಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು:
1- ವಿರಾಟ್ ಕೊಹ್ಲಿ – 15 ಕೋಟಿ 2- ಗ್ಲೆನ್ ಮ್ಯಾಕ್ಸ್ವೆಲ್- 11 ಕೋಟಿ 3- ಮೊಹಮ್ಮದ್ ಸಿರಾಜ್ – 7 ಕೋಟಿ.
Published On - 10:21 pm, Tue, 30 November 21