India vs Hong Kong Live Streaming: ಭಾರತ-ಹಾಂಗ್ ಕಾಂಗ್ ಮುಖಾಮುಖಿ: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಸಂಪೂರ್ಣ ಮಾಹಿತಿ

Asia Cup 2022, IND vs HK LIVE Streaming: ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ಹಾಂಗ್ ಕಾಂಗ್ ತಂಡವು ಭಾರತವನ್ನು ಎದುರಿಸುತ್ತಿದೆ. ಇಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಟೀಮ್ ಇಂಡಿಯಾಗೆ ಹಾಂಗ್ ಕಾಂಗ್ ಪಡೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಕಾದು ನೋಡಬೇಕಿದೆ.

India vs Hong Kong Live Streaming: ಭಾರತ-ಹಾಂಗ್ ಕಾಂಗ್ ಮುಖಾಮುಖಿ: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಸಂಪೂರ್ಣ ಮಾಹಿತಿ
India Vs Hong Kong
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 30, 2022 | 1:55 PM

India vs Hong Kong T20, Asia Cup 2022 Live Streaming: ಬುಧವಾರ ನಡೆಯಲಿರುವ ಏಷ್ಯಾಕಪ್​ನ 4ನೇ ಪಂದ್ಯದಲ್ಲಿ ಭಾರತ ತಂಡವು ಹಾಂಗ್ ಕಾಂಗ್ (India Vs Hong Kong)  ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿರುವ ಟೀಮ್ ಇಂಡಿಯಾಗೆ ಹಾಂಗ್​ ಕಾಂಗ್ ಸುಲಭ ತುತ್ತಾಗುವ ಸಾಧ್ಯತೆಯಿದೆ. ಏಕೆಂದರೆ ಉಭಯ ತಂಡಗಳು ಇದುವರೆಗೆ ಏಕೈಕ ಏಕದಿನ ಪಂದ್ಯವಾಡಿದೆ. 2008 ರಲ್ಲಿ ನಡೆದ ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 374 ರನ್​ ಕಲೆಹಾಕಿತ್ತು. ಅಲ್ಲದೆ ಹಾಂಗ್ ಕಾಂಗ್ ಅನ್ನು ಕೇವಲ 118 ರನ್​ಗಳಿಗೆ ಆಲೌಟ್ ಮಾಡಿ 256 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

ಇದೀಗ ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ಹಾಂಗ್ ಕಾಂಗ್ ತಂಡವು ಭಾರತವನ್ನು ಎದುರಿಸುತ್ತಿದೆ. ಇಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಟೀಮ್ ಇಂಡಿಯಾಗೆ ಹಾಂಗ್ ಕಾಂಗ್ ಪಡೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಕಾದು ನೋಡಬೇಕಿದೆ. ಈ ಪಂದ್ಯದ ನೇರ ಪ್ರಸಾರ ಹಾಗೂ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ…

– ಏಷ್ಯಾಕಪ್ ಟೂರ್ನಿಯನ್ನು ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು?

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಷ್ಯಾ ಕಪ್-2022 ರ ಎಲ್ಲಾ ಪಂದ್ಯಗಳ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನಲ್‌ಗಳಲ್ಲಿ ಇರಲಿದೆ. ಹಾಗೆಯೇ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ಲೈವ್ ಪ್ರಸಾರವಾಗಲಿದೆ.

– ಭಾರತ ಮತ್ತು ಹಾಂಗ್​ ಕಾಂಗ್ ನಡುವಿನ ಪಂದ್ಯ ಯಾವಾಗ ನಡೆಯಲಿದೆ?

ಆಗಸ್ಟ್ 31, ಬುಧವಾರದಂದು ಭಾರತ-ಹಾಂಗ್ ಕಾಂಗ್​ಮುಖಾಮುಖಿಯಾಗಲಿದೆ.

– ಭಾರತ ಮತ್ತು ಹಾಂಗ್ ಕಾಂಗ್ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?

ಈ ಪಂದ್ಯವು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

– ಭಾರತ ಮತ್ತು ಹಾಂಗ್ ಕಾಂಗ್ ನಡುವಣ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಈ ಪಂದ್ಯವು ರಾತ್ರಿ 7:30 ಕ್ಕೆ ಆರಂಭವಾಗಲಿದ್ದು, ಟಾಸ್ 7 ಗಂಟೆಗೆ ನಡೆಯಲಿದೆ.

– ಭಾರತ ಮತ್ತು ಹಾಂಗ್ ಕಾಂಗ್ ನಡುವಿನ ಪಂದ್ಯದ ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?

ಸ್ಟಾರ್ ಸ್ಪೋರ್ಟ್ಸ್​ ಕನ್ನಡ ಸೇರಿದಂತೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಈ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

– ಭಾರತ ಮತ್ತು ಹಾಂಗ್ ಕಾಂಗ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ನೋಡಬಹುದು?

ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಹಾಂಗ್ ಕಾಂಗ್ ತಂಡ ಹೀಗಿದೆ: ಯಾಸಿಮ್ ಮುರ್ತಾಜಾ, ನಿಜಾಕತ್ ಖಾನ್, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ, ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ

ಟೀಮ್ ಇಂಡಿಯಾ ಹೀಗಿದೆ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌. ಮೀಸಲು ಆಟಗಾರರು: ಅಕ್ಷರ್‌ ಪಟೇಲ್‌, ದೀಪಕ್‌ ಚಹರ್‌ ಮತ್ತು ಶ್ರೇಯಸ್‌ ಅಯ್ಯರ್‌.

Published On - 1:54 pm, Tue, 30 August 22