Asia Cup 2022: ‘ವಿರಾಟ್​ಗೆ ಸರಿಸಾಟಿ ಯಾರಿಲ್ಲ’; ಕೊಹ್ಲಿಯನ್ನು ಹಾಡಿಹೊಗಳಿದ ಪಾಕ್ ತಂಡದ 11 ಆಟಗಾರರು..!

Asia Cup 2022: ಕೊಹ್ಲಿಯ ಐತಿಹಾಸಿಕ ಶತಕಕ್ಕೆ ಕ್ರಿಕೆಟ್ ದುನಿಯಾದ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಪಾಕ್ ಕ್ರಿಕೆಟಿಗರು ಕೂಡ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ.

Asia Cup 2022: ‘ವಿರಾಟ್​ಗೆ ಸರಿಸಾಟಿ ಯಾರಿಲ್ಲ’; ಕೊಹ್ಲಿಯನ್ನು ಹಾಡಿಹೊಗಳಿದ ಪಾಕ್ ತಂಡದ 11 ಆಟಗಾರರು..!
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ಸಿಗುವುದು ಖಚಿತ. ಒಂದು ವೇಳೆ ಕೊಹ್ಲಿ ಈ ಮೂರು ಪಂದ್ಯಗಳಿಂದ ಕೇವಲ 98 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ 11,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ.
Edited By:

Updated on: Sep 09, 2022 | 3:35 PM

ದುಬೈ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರ 71 ನೇ ಶತಕವನ್ನು ಇಡೀ ವಿಶ್ವವೇ ಕಣ್ತುಂಬಿಕೊಂಡಿದೆ. ವಿರಾಟ್ ತನ್ನ ಹಳೆಯ ಫಾರ್ಮ್​ಗೆ ಮರಳಿದ್ದನ್ನು ಇಡೀ ವಿಶ್ವ ಕ್ರಿಕೆಟ್ ನೋಡಿದೆ. ಇದರೊಂದಿಗೆ ಪಾಕಿಸ್ತಾನಿ ಕ್ರಿಕೆಟಿಗರೂ ಈ ಕ್ಷಣವನ್ನು ನೋಡುವುದರಲ್ಲಿ ಹಿಂದೆ ಬಿದ್ದಿಲ್ಲ. ಕೊಹ್ಲಿಯ 1021 ದಿನಗಳ ಬಳಿಕದ ಶತಕವನ್ನು ಕಣ್ತುಂಬಿಕೊಂಡ 11 ಪಾಕಿಸ್ತಾನಿ ಕ್ರಿಕೆಟಿಗರು ಸಹ ವಿರಾಟ್ ಕೊಹ್ಲಿಯನ್ನು ಅಭಿನಂದಿಸಿದ್ದಾರೆ. 1021 ದಿನಗಳ ಸುದೀರ್ಘ ಕಾಯುವಿಕೆಯ ನಂತರ ಭಾರತದ ಬ್ಯಾಟ್ಸ್‌ಮನ್ ತಮ್ಮ 71 ನೇ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದ್ದನ್ನು ನೋಡಿದ ಪಾಕಿಸ್ತಾನಿ ಆಟಗಾರರು ಎರಡು ವಿಷಯಗಳನ್ನು ಹೇಳಿದ್ದಾರೆ. ಅದರಲ್ಲಿ ಮೊದಲನೆಯದ್ದು, ಇದು ವಿನೋದಮಯವಾಗಿತ್ತು ಎಂಬುದಾಗಿದ್ದರೆ, ಎರಡನೆಯದು ವಿರಾಟ್‌ಗೆ ಯಾರು ಸಾರಿಸಾಟಿ ಇಲ್ಲ ಎಂಬುದಾಗಿತ್ತು.

ಕೊಹ್ಲಿಯೇ ಬೆಸ್ಟ್

ಅಫ್ಘಾನಿಸ್ತಾನ ವಿರುದ್ಧ ಏಷ್ಯಾಕಪ್‌ನ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಭಾರತದ ಪರ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಅವರು 61 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 12 ಬೌಂಡರಿಗಳೊಂದಿಗೆ 200 ಸ್ಟ್ರೈಕ್ ರೇಟ್‌ನಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ಟಿ20ಯಲ್ಲಿ ವಿರಾಟ್ ಕೊಹ್ಲಿ ಅವರ ಮೊದಲ ಶತಕವಾಗಿದೆ. ಆದರೆ ಈ ಶತಕವು ಟೀಮ್ ಇಂಡಿಯಾದ ಭವಿಷ್ಯ ಮತ್ತು ಟಿ 20 ವಿಶ್ವಕಪ್‌ಗೆ ಸಿದ್ಧತೆಗೆ ಸಂಬಂಧಿಸಿದಂತೆ ಬಹಳ ದೊಡ್ಡದಾಗಿದೆ. ಈ ಶತಕದ ಅವಧಿಯಲ್ಲಿ ವಿರಾಟ್ ಕೊಹ್ಲಿ ಮೈದಾನದ ಮೂಲೆ ಮೂಲೆಯಿಂದ ರನ್ ಗಳಿಸಿದರು. ಅಫ್ಘಾನ್ ತಂಡದ ಪ್ರತಿ ಬೌಲರ್ ವಿರುದ್ಧ ಅವರ ಸ್ಟ್ರೈಕ್ ರೇಟ್ 150 ಕ್ಕಿಂತ ಹೆಚ್ಚಿತ್ತು. ಈಗ ಈ ಹಳೆಯ ಅವತಾರವನ್ನು ನೋಡಿದ ಪಾಕಿಸ್ತಾನಿ ಆಟಗಾರರು ವಿರಾಟ್ ಕೊಹ್ಲಿಗಿಂತ ಯಾರೂ ಬೆಸ್ಟ್ ಇಲ್ಲ ಎನ್ನುತ್ತಿದ್ದಾರೆ.

ಕೊಹ್ಲಿಯನ್ನು ಅಭಿನಂದಿಸಿದ 11 ಪಾಕ್ ಕ್ರಿಕೆಟಿಗರು

ಕೊಹ್ಲಿಯ ಐತಿಹಾಸಿಕ ಶತಕಕ್ಕೆ ಕ್ರಿಕೆಟ್ ದುನಿಯಾದ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಪಾಕ್ ಕ್ರಿಕೆಟಿಗರು ಕೂಡ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ. ವಿರಾಟ್ ಅವರ 71ನೇ ಶತಕವನ್ನು ಅಭಿನಂದಿಸಿದ ಪಾಕಿಸ್ತಾನಿ ಕ್ರಿಕೆಟಿಗರಲ್ಲಿ, ಏಷ್ಯಾಕಪ್ ಆಡುತ್ತಿರುವ ಪ್ರಸ್ತುತ ಪಾಕ್ ತಂಡದ ಕೆಲವು ಆಟಗಾರರಿದ್ದರೆ, ಇನ್ನೂ ಕೆಲವು ನಿವೃತ್ತ ಕ್ರಿಕೆಟಿಗರೂ ಇದ್ದಾರೆ. ವಿರಾಟ್ ಕೊಹ್ಲಿಗೆ ತಮ್ಮದೇ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿರುವ ಪಾಕಿಸ್ತಾನ ಕ್ರಿಕೆಟ್‌ನ 11 ಆಟಗಾರರು ಯಾರು ಎಂಬುದನ್ನು ಈಗ ನೋಡೋಣ.

83 ಇನ್ನಿಂಗ್ಸ್ ನಂತರ ಶತಕ

ವಿರಾಟ್ ಕೊಹ್ಲಿ ತಮ್ಮ 71ನೇ ಶತಕಕ್ಕಾಗಿ 83 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನು ಆಡಬೇಕಾಯಿತು. ಈ ಸಮಯದಲ್ಲಿ ಅವರು 2700 ಕ್ಕೂ ಹೆಚ್ಚು ರನ್ ಗಳಿಸಿದರೆ, 26 ಅರ್ಧ ಶತಕಗಳನ್ನು ಬಾರಿಸಿದ್ದಾರೆ ಆದರೆ ಶತಕ ಬಂದಿರಲಿಲ್ಲ. ಕೊಹ್ಲಿ ಕೊನೆಯದಾಗಿ ತಮ್ಮ ಶತಕವನ್ನು 23 ನವೆಂಬರ್ 2019 ರಂದು ಬಾರಿಸಿದ್ದರು.

Published On - 3:22 pm, Fri, 9 September 22