Asia Cup 2022: ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ 2022 ರ ತಮ್ಮ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಟೀಮ್ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ. ಈ ವಿಶೇಷ ಪಂದ್ಯವನ್ನು ಭಾರತ-ಪಾಕಿಸ್ತಾನ್ ಅಭಿಮಾನಿಗಳಲ್ಲದೇ ಶ್ರೀಲಂಕಾ ಫ್ಯಾನ್ಸ್ ಕೂಡ ಕಣ್ತುಂಬಿಕೊಂಡಿದ್ದರು. ಅದರಲ್ಲೂ ಭಾರತೀಯ ಕ್ರಿಕೆಟಿಗರನ್ನು ಇಷ್ಟಪಡುವ ಶ್ರೀಲಂಕಾದ ಅಭಿಮಾನಿ ಗಯಾನ್ ಸೇನಾನಾಯಕ ಇಂಡೋ-ಪಾಕ್ ಪಂದ್ಯವನ್ನು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಇಬ್ಬರು ದಿಗ್ಗಜರನ್ನು ಭೇಟಿ ಮಾಡುವ ಅವಕಾಶವನ್ನೂ ಸಹ ಪಡೆದರು.
ವಿಕಲಚೇತನರಾಗಿರುವ ಗಯಾನ್ ಸೇನಾನಾಯಕ ಅಪ್ಪಟ ಕ್ರಿಕೆಟ್ ಅಭಿಮಾನಿ. ಶ್ರೀಲಂಕಾ ಪಂದ್ಯಗಳ ವೇಳೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಯಾನ್ ಇದೀಗ ಏಷ್ಯಾಕಪ್ ವೀಕ್ಷಿಸಲು ದುಬೈಗೆ ಬಂದಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ತಮ್ಮ ನೆಚ್ಚಿನ ಇಬ್ಬರು ಆಟಗಾರರನ್ನು ಜೊತೆಯಾಗಿ ಭೇಟಿ ಮಾಡುವ ಅವಕಾಶ ಪಡೆದರು.
ಈ ವೇಳೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸೇನಾನಾಯಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅಪರೂಪದ ಫೋಟೋ ಎನಿಸಿಕೊಂಡಿರುವ ಈ ಚಿತ್ರದಲ್ಲಿ ಸೇನಾನಾಯಕನ ಎರಡು ಬದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂತು ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಿಂಗ್ ಕೊಹ್ಲಿ-ಹಿಟ್ಮ್ಯಾನ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Met Rohit & Virat today?❤️@ImRo45 | @imVkohli pic.twitter.com/GVVvmxihut
— Gayan Senanayake (@GayanSenanayke) August 29, 2022
ವಿಶೇಷ ಎಂದರೆ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿರುವ ಸೇನಾನಾಯಕ ಅವರ ಫೋಟೋ ಈ ಹಿಂದೊಮ್ಮೆ ಕೂಡ ವೈರಲ್ ಆಗಿತ್ತು. 2017 ರಲ್ಲಿ ಮುಂಬೈನಲ್ಲಿ ವಿರಾಟ್ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರ ವಿವಾಹ ಆರತಕ್ಷತೆಯಲ್ಲಿ ಸೇನಾನಾಯಕ ಭಾಗವಹಿಸಿದ್ದರು. ಆ ಫೋಟೋ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಗಯಾನ್ ಸೇನಾನಾಯಕ ಪರಿಚಿತರಾಗಿದ್ದರು.
ಇದೀಗ ಟೀಮ್ ಇಂಡಿಯಾದ ಇಬ್ಬರು ದಿಗ್ಗಜರೊಂದಿಗೆ ಕೂತು ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಗಯಾನ್ ಸೇನಾನಾಯಕ ಹೊಸ ಅಲೆ ಎಬ್ಬಿಸಿದ್ದಾರೆ.
Gayan Senanayake, a fan of Sri Lankan cricket team seen at Virat Kohli and Anushka Sharma’s wedding reception in Mumbai pic.twitter.com/gzh3dvkR2K
— Darshana Sanjeewa Balasuriya?️ (@sanjeewadara) December 27, 2017
ಇನ್ನು ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ ತಂಡವು ಗೆಲುವಿನೊಂದಿಗೆ ಶುಭಾರಂಭ ಮಾಡಿದರೆ, ಶ್ರೀಲಂಕಾ ತಂಡವು ಅಫ್ಘಾನಿಸ್ತಾನ್ ವಿರುದ್ದ ಹೀನಾಯವಾಗಿ ಸೋತಿದೆ. ಇನ್ನು ಮುಂದಿನ ಪಂದ್ಯದಲ್ಲಿ ಲಂಕಾ ಬಾಂಗ್ಲಾದೇಶ್ ವಿರುದ್ದ ಗೆದ್ದರೆ ಮಾತ್ರ ಮುಂದಿನ ಹಂತಕ್ಕೇರುವ ಅವಕಾಶ ಪಡೆಯಲಿದೆ. ಅಂದರೆ ಗಯಾನ್ ಸೇನಾನಾಯಕ ಅವರ ನಿರೀಕ್ಷೆಯಂತೆ ಭಾರತ-ಶ್ರೀಲಂಕಾ ಮುಖಾಮುಖಿಯಾಗಬೇಕಿದ್ದರೆ, ಸೂಪರ್- 4 ಹಂತಕ್ಕೆ ಲಂಕಾ ತಂಡ ಪ್ರವೇಶಿಸಬೇಕು. ಹೀಗಾಗಿ ಶ್ರೀಲಂಕಾ ತಂಡಕ್ಕೆ ಮುಂದಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.