Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ (Team India) ಆಟಗಾರರು ಮಸ್ತ್ ಮಜಾದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲ ಸುತ್ತಿನಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್-4 ಹಂತಕ್ಕೇರಿದ ಟೀಮ್ ಇಂಡಿಯಾ ಆ ಬಳಿಕ ರಿಲ್ಯಾಕ್ಸ್ ಮೂಡ್ಗೆ ಜಾರಿತು. ಅಲ್ಲದೆ ದುಬೈ ಬೀಚ್ನಲ್ಲಿ ಸಖತ್ ಎಂಜಾಯ್ ಮಾಡಿದರು. ಟೀಮ್ ಮ್ಯಾನೇಜ್ಮೆಂಟ್ ನೀಡಿದ್ದ ಒಂದು ದಿನದ ರಜೆಯ ಅವಧಿಯಲ್ಲಿ ಟೀಮ್ ಟೀಮ್ ಇಂಡಿಯಾ ಆಟಗಾರು ದುಬೈ ಸಮುದ್ರ ತೀರದಲ್ಲಿ ಬೀಚ್ ಸರ್ಫಿಂಗ್, ಬೀಚ್ ವಾಲಿಬಾಲ್, ರೈಡಿಂಗ್, ಬೋಟಿಂಗ್, ಆಕ್ವಾ ಸೈಕಲಿಂಗ್ ಮಾಡುವ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡರು.
ವಿರಾಟ್ ಕೊಹ್ಲಿ ಸರ್ಫಿಂಗ್ ಮಾಡಿದರೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೋಟಿಂಗ್ನಲ್ಲಿ ಹೆಚ್ಚಿನ ಸಮಯ ಕಳೆದರು. ಹಾಗೆಯೇ ಅರ್ಷದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯ್ ಕೂಡ ಸರ್ಫಿಂಗ್ ಮಾಡುತ್ತಾ ಎಂಜಾಯ್ ಮಾಡಿದರು.
ಇನ್ನು ಯುಜ್ವೇಂದ್ರ ಚಹಾಲ್ ಹಾಗೂ ಅಶ್ವಿನ್ ಆಕ್ವಾ ಸೈಕಲಿಂಗ್ ಮೂಲಕ ಸಮುದ್ರ ತೀರದಲ್ಲಿ ಸುತ್ತಾಡಿದರು. ಮತ್ತೊಂದೆಡೆ ಕೆಲ ಆಟಗಾರರು ಬೀಚ್ ವಾಲಿಬಾಲ್ ಆಡುವ ಮೂಲಕ ಪರಸ್ಪರ ಸೆಣಸಾಡಿಸಿದರು. ಹೀಗೆ ಒಂದು ದಿನದ ಫುಲ್ ಎಂಜಾಯ್ ಬಳಿಕ ಇದೀಗ ಟೀಮ್ ಇಂಡಿಯಾ ಆಟಗಾರರು ಅಭ್ಯಾಸಕ್ಕೆ ಮರಳಿದ್ದಾರೆ.
ಇನ್ನು ಟೀಮ್ ಇಂಡಿಯಾದ ಈ ಜಾಲಿ ಮೂಡ್ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಫನ್ ಟೈಮ್ ವಿಡಿಯೋಗೆ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.
ಭಾರತ ತಂಡವು ಸೂಪರ್-4 ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಆಡಲಿದೆ. ಈ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ ಫೈನಲ್ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಬಹುದು. ಹೀಗಾಗಿ ಮುಂದಿನ 3 ಪಂದ್ಯಗಳು ಭಾರತ ತಂಡದ ಪಾಲಿಗೆ ತುಂಬಾ ಮಹತ್ವದ ಪಂದ್ಯಗಳಾಗಿವೆ.
ಸೂಪರ್-4 ವೇಳಾಪಟ್ಟಿ ಹೀಗಿದೆ:
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.
Published On - 10:59 am, Sat, 3 September 22