AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡೊ-ಪಾಕ್ ಕ್ರಿಕೆಟ್ ಕದನಕ್ಕೆ ದಿನಗಣನೆ ಶುರು: ಉಭಯ ತಂಡಗಳು ಹೀಗಿವೆ

Asia Cup 2023: ಟೀಮ್ ಇಂಡಿಯಾದಲ್ಲಿ ಕಳೆದ ಬಾರಿಯ ಟಿ20 ವಿಶ್ವಕಪ್​ ತಂಡದಲ್ಲಿ ಕಾಣಿಸಿಕೊಂಡಿದ್ದ ಕೆಲ ಆಟಗಾರರು ಈ ಬಾರಿ ಸ್ಥಾನ ಪಡೆದಿಲ್ಲ. ಇದಾಗ್ಯೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಇದ್ದು, ಹೀಗಾಗಿ ಈ ಹಿಂದಿಗಿಂತಲೂ ಭಾರತ ತಂಡ ಮತ್ತಷ್ಟು ಬಲಿಷ್ಠವಾಗಿದೆ ಎನ್ನಬಹುದು.

ಇಂಡೊ-ಪಾಕ್ ಕ್ರಿಕೆಟ್ ಕದನಕ್ಕೆ ದಿನಗಣನೆ ಶುರು: ಉಭಯ ತಂಡಗಳು ಹೀಗಿವೆ
IND vs PAK
TV9 Web
| Updated By: ಝಾಹಿರ್ ಯೂಸುಫ್|

Updated on: Aug 22, 2023 | 2:46 PM

Share

ಏಷ್ಯಾಕಪ್​ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದೆ. ಈ ಟೂರ್ನಿಗಾಗಿ ಈಗಾಗಲೇ ಭಾರತ, ಪಾಕಿಸ್ತಾನ್, ನೇಪಾಳ ಹಾಗೂ ಬಾಂಗ್ಲಾದೇಶ್ ತಂಡಗಳನ್ನು ಪ್ರಕಟಿಸಲಾಗಿದೆ. ಇನ್ನು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್​ ತಂಡಗಳ ಘೋಷಣೆಯಾಗಬೇಕಿದೆ. ಇತ್ತ ಟೀಮ್ ಇಂಡಿಯಾ 17 ಸದಸ್ಯರ ಬಳಗವನ್ನು ಘೋಷಿಸಿದ ಬೆನ್ನಲ್ಲೇ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದ ಕುತೂಹಲ ಹೆಚ್ಚಾಗಿದೆ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ. ಸೆಪ್ಟೆಂಬರ್ 2 ರಂದು ನಡೆಯುವ ಪಾಕ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸುತ್ತಿದ್ದು, ಹೀಗಾಗಿ ಶುಭಾರಂಭವನ್ನು ನಿರೀಕ್ಷಿಸಬಹುದು.

ಆದರೆ ಈ ಹೈವೋಲ್ಟೇಜ್ ಕದನಕ್ಕೂ ಮುನ್ನ ಟೀಮ್ ಇಂಡಿಯಾ ಯಾವುದೇ ಏಕದಿನ ಪಂದ್ಯವಾಡುತ್ತಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಪ್ರಸ್ತುತ 17 ಸದಸ್ಯರ ಬಳಗದಿಂದ ನೇರವಾಗಿ ಪ್ಲೇಯಿಂಗ್ ಇಲೆವೆನ್​ ಅನ್ನು ಆಯ್ಕೆ ಮಾಡಬೇಕಿದೆ. ಮತ್ತೊಂದೆಡೆ ಈಗಾಗಲೇ ಬಲಿಷ್ಠ ಬಳಗವನ್ನು ಘೋಷಿಸಿರುವ ಪಾಕಿಸ್ತಾನ್ ತಂಡವು ಏಷ್ಯಾಕಪ್​​ಗೂ ಮುನ್ನ ಶ್ರೀಲಂಕಾದಲ್ಲಿ ಅಫ್ಘಾನಿಸ್ತಾನ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಕ್ಯಾಂಡಿಯಲ್ಲಿ ಮೊದಲ ಫೈಟ್​:

ಈ ಬಾರಿಯ ಏಷ್ಯಾಕಪ್​ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಇಲ್ಲಿ ಭಾರತದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ. ಅದರಂತೆ ಸೆಪ್ಟೆಂಬರ್ 2 ರಂದು ಭಾರತ-ಪಾಕಿಸ್ತಾನ್ ಕ್ಯಾಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ್ ತಂಡ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದ್ದು, ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ ಇತ್ತ ಟೀಮ್ ಇಂಡಿಯಾ ನೇರವಾಗಿ ಏಷ್ಯಾಕಪ್​​ನಲ್ಲಿ ಕಣಕ್ಕಿಳಿಯಲಿದೆ.

ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು:

ಏಷ್ಯಾಕಪ್​​ಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಅತ್ತ ಪಾಕಿಸ್ತಾನ್ ತಂಡದಲ್ಲಿ ಈಗಾಗಲೇ ಟೀಮ್ ಇಂಡಿಯಾ ವಿರುದ್ಧ ಆಡಿದ ಆಟಗಾರರನ್ನೇ ಉಳಿಸಿಕೊಳ್ಳಲಾಗಿದೆ. ಅಂದರೆ ಈ ಹಿಂದೆ ಟಿ20 ವಿಶ್ವಕಪ್​ನಲ್ಲಿ ಭಾರತಕ್ಕೆ ಸೋಲುಣಿಸಿದ ಟೀಮ್​ನಲ್ಲಿದ್ದ ಪ್ರಮುಖ ಆಟಗಾರರು ಪಾಕ್ ತಂಡದಲ್ಲಿದ್ದಾರೆ.

ಇತ್ತ ಟೀಮ್ ಇಂಡಿಯಾದಲ್ಲಿ ಕಳೆದ ಬಾರಿಯ ಟಿ20 ವಿಶ್ವಕಪ್​ ತಂಡದಲ್ಲಿ ಕಾಣಿಸಿಕೊಂಡಿದ್ದ ಕೆಲ ಆಟಗಾರರು ಈ ಬಾರಿ ಸ್ಥಾನ ಪಡೆದಿಲ್ಲ. ಇದಾಗ್ಯೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಇದ್ದು, ಹೀಗಾಗಿ ಈ ಹಿಂದಿಗಿಂತಲೂ ಭಾರತ ತಂಡ ಮತ್ತಷ್ಟು ಬಲಿಷ್ಠವಾಗಿದೆ ಎನ್ನಬಹುದು.

ಏಷ್ಯಾಕಪ್​ಗೆ ಉಭಯ ತಂಡಗಳು:

ಪಾಕಿಸ್ತಾನ್ ತಂಡ: ಅಬ್ದುಲ್ಲಾ ಶಫೀಕ್, ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಆಝಂ (ನಾಯಕ), ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್, ಸೌದ್ ಶಕೀಲ್, ಮೊಹಮ್ಮದ್ ರಿಝ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಹರಿಸ್ ಅಶ್ರಫ್ ರೌಫ್, ಮೊಹಮ್ಮದ್ ವಾಸಿಂ, ನಸೀಮ್ ಶಾ ಮತ್ತು ಶಾಹೀನ್ ಅಫ್ರಿದಿ.

ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).