IND vs PAK: ಭಾರತ- ಪಾಕ್ ಪಂದ್ಯ ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ಆರಂಭ? ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

Asia cup 2023 IND vs PAK Live Streaming: ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಶನಿವಾರ ಮಧ್ಯಾಹ್ನ ಏಷ್ಯಾಕಪ್ ವೇದಿಕೆಯಲ್ಲಿ ಮುಖಾಮುಖಿಯಾಗಲಿದ್ದಾರೆ . ಶನಿವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಮೆಗಾ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ . 2022ರಲ್ಲಿ ಏಷ್ಯಾಕಪ್‌ನ ಗುಂಪು ಹಂತದಲ್ಲಿ ಉಭಯ ತಂಡಗಳ ನಡುವಿನ ಕದನದಲ್ಲಿ ಭಾರತ ಜಯಗಳಿಸಿತ್ತು. ನಂತರ ಸೂಪರ್ ಫೋರ್‌ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿತ್ತು.

IND vs PAK: ಭಾರತ- ಪಾಕ್ ಪಂದ್ಯ ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ಆರಂಭ? ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಭಾರತ- ಪಾಕಿಸ್ತಾನ

Updated on: Sep 01, 2023 | 10:05 PM

ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಶನಿವಾರ ಮಧ್ಯಾಹ್ನ ಏಷ್ಯಾಕಪ್ (Asia Cup 2023) ವೇದಿಕೆಯಲ್ಲಿ ಮುಖಾಮುಖಿಯಾಗಲಿದ್ದಾರೆ . ಶನಿವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಮೆಗಾ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ . 2022ರಲ್ಲಿ ಏಷ್ಯಾಕಪ್‌ನ ಗುಂಪು ಹಂತದಲ್ಲಿ ಉಭಯ ತಂಡಗಳ ನಡುವಿನ ಕದನದಲ್ಲಿ ಭಾರತ ಜಯಗಳಿಸಿತ್ತು. ನಂತರ ಸೂಪರ್ ಫೋರ್‌ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿತ್ತು. ಆದರೆ, ಈಗ ಸ್ವರೂಪ ಬದಲಾಗಿದ್ದು, ಈ ಏಕದಿನ ಮಾದರಿಯಲ್ಲಿ ಯಾರು ಯಾರನ್ನು ಸೋಲಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಏಳು ಬಾರಿ ಏಷ್ಯಾಕಪ್ ಗೆದ್ದ ದಾಖಲೆ ಬರೆದಿರುವ ಟೀಂ ಇಂಡಿಯಾ (Team India) ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಮತ್ತೊಂದೆಡೆ ಪಾಕಿಸ್ತಾನ ಈ ಟೂರ್ನಿಯಲ್ಲಿ ಕೇವಲ 2 ಬಾರಿ ಗೆದ್ದಿದೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಏಷ್ಯಾಕಪ್​ನಲ್ಲಿ ಈ ಉಭಯ ತಂಡಗಳ ಮುಖಾಮುಖಿಯನ್ನು ನೋಡಿದರೆ ಏಷ್ಯಾಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ 17 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ 9 ಬಾರಿ ಗೆದ್ದಿದ್ದರೆ ಪಾಕಿಸ್ತಾನ 6 ಬಾರಿ ಗೆದ್ದಿದೆ. 1 ಪಂದ್ಯ ಇತ್ಯರ್ಥವಾಗಿಲ್ಲ.

IND vs PAK: ಪಾಕ್ ವಿರುದ್ಧ ಯಾವ ತಂಡದೊಂದಿಗೆ ಕಣಕ್ಕಿಳಿಯಲ್ಲಿದ್ದಾರೆ ರೋಹಿತ್? ಇಲ್ಲಿದೆ ಭಾರತ ಸಂಭಾವ್ಯ ತಂಡ

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗ ನಡೆಯಲ್ಲಿದೆ?

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಾಳೆ ಶನಿವಾರ (ಸೆಪ್ಟೆಂಬರ್ 2) ನಡೆಯಲಿದೆ.

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಲ್ಲಿ ನಡೆಯಲ್ಲಿದೆ?

ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ ಪಂದ್ಯ ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗ ಆರಂಭವಾಗಲಿದೆ?

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೆ ಅರ್ಧಗಂಟೆ ಮೊದಲು ಟಾಸ್ ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?

ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೋಡಬಹುದು (ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ ಎಚ್‌ಡಿ). ಇದಲ್ಲದೆ, ಇದನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಮೊಬೈಲ್‌ನಲ್ಲಿಯೂ ನೋಡಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ