Asia cup 2023 PAK vs BAN Live Score: ಬಾಂಗ್ಲಾ ವಿರುದ್ಧ ಪಾಕಿಸ್ತಾನ್ ತಂಡಕ್ಕೆ ಜಯ
Asia cup 2023 Pakistan vs Bangladesh Live Score in Kannada: ಏಷ್ಯಾಕಪ್ನ ಸೂಪರ್ ಫೋರ್ ಪಂದ್ಯಗಳು ಇಂದಿನಿಂದ ಶುರುವಾಗಿದೆ. ಈ ಸುತ್ತಿನಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ್ ತಂಡಗಳು ಸೆಣಸಲಿದೆ. ಲಾಹೋರ್ನ ಗಡ್ಢಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದೆ.
ಏಷ್ಯಾಕಪ್ ಸೂಪರ್-4 ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ದ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಲಾಹೋರ್ನ ಗಡ್ಡಾಫಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ 193 ರನ್ಗಳಿಗೆ ಆಲೌಟ್ ಆಯಿತು. ಸುಲಭ ಗುರಿ ಪಡೆದ ಪಾಕಿಸ್ತಾನ್ ತಂಡವು 3 ವಿಕೆಟ್ ನಷ್ಟದೊಂದಿಗೆ 194 ರನ್ಗಳ ಗುರಿ ಮುಟ್ಟುವ ಮೂಲಕ 7 ವಿಕೆಟ್ಗಳ ಜಯ ಸಾಧಿಸಿದೆ.
ಬಾಂಗ್ಲಾದೇಶ್- 193 (38.4)
ಪಾಕಿಸ್ತಾನ್- 194/3 (39.3)
ಪಾಕಿಸ್ತಾನ್ (ಪ್ಲೇಯಿಂಗ್ XI): ಫಖರ್ ಝಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ತೌಹಿದ್ ಹೃದೋಜ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಮೀಮ್ ಹೊಸೈನ್, ಅಫೀಫ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.
LIVE Cricket Score & Updates
-
PAK vs BAN Live Score: ಬಾಂಗ್ಲಾ ವಿರುದ್ಧ ಪಾಕಿಸ್ತಾನ್ ತಂಡಕ್ಕೆ ಜಯ
ಬಾಂಗ್ಲಾದೇಶ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದ ಪಾಕಿಸ್ತಾನ್.
39.3 ಓವರ್ಗಳಲ್ಲಿ 193 ರನ್ಗಳ ಗುರಿ ಮುಟ್ವುವ ಮೂಲಕ ಅಮೋಘ ಗೆಲುವು ದಾಖಲಿಸಿದ ಬಾಬರ್ ಪಡೆ.
ಬಾಂಗ್ಲಾದೇಶ್- 193 (38.4)
ಪಾಕಿಸ್ತಾನ್- 194/3 (39.3
ಈ ಗೆಲುವಿನೊಂದಿಗೆ ಸೂಪರ್-4 ಹಂತದಲ್ಲಿ ಪಾಕ್ ತಂಡದ ಶುಭಾರಂಭ.
ಮುಂದಿನ ಮುಖಾಮುಖಿ ಶ್ರೀಲಂಕಾ vs ಬಾಂಗ್ಲಾದೇಶ್ (ಸೆ.9) ಹಾಗೂ ಭಾರತ vs ಪಾಕಿಸ್ತಾನ್ (ಸೆ.10).
-
Asia cup 2023 PAK vs BAN Live Score: ಅರ್ಧಶತಕ ಪೂರೈಸಿದ ರಿಝ್ವಾನ್
71 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೊಹಮ್ಮದ್ ರಿಝ್ವಾನ್.
ಏಕದಿನ ಕ್ರಿಕೆಟ್ನಲ್ಲಿ 11ನೇ ಹಾಫ್ ಸೆಂಚುರಿ ಬಾರಿಸಿದ ರಿಝ್ವಾನ್.
PAK 173/3 (37)
ಕ್ರೀಸ್ನಲ್ಲಿ ಸಲ್ಮಾನ್ ಆಘಾ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು ಕೇವಲ 21 ರನ್ಗಳ ಅವಶ್ಯಕತೆ.
-
Asia cup 2023 PAK vs BAN Live Score: 35 ಓವರ್ ಮುಕ್ತಾಯ: ಗೆಲುವಿನತ್ತ ಪಾಕ್
35 ಓವರ್ಗಳ ಮುಕ್ತಾಯದ ವೇಳೆಗೆ 167 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಸಲ್ಮಾನ್ ಆಘಾ ಬ್ಯಾಟಿಂಗ್.
ಕೊನೆಯ 15 ಓವರ್ಗಳಲ್ಲಿ ಪಾಕ್ ತಂಡಕ್ಕೆ ಕೇವಲ 27 ರನ್ಗಳ ಅವಶ್ಯಕತೆ.
PAK 167/3 (35)
ಫಖರ್ ಝಮಾನ್ (20), ಬಾಬರ್ ಆಝಂ (17) ಹಾಗೂ ಇಮಾಮ್ ಉಲ್ ಹಕ್ (78) ಔಟ್.
Asia cup 2023 PAK vs BAN Live Score: ಪಾಕಿಸ್ತಾನ್ ತಂಡದ 3ನೇ ವಿಕೆಟ್ ಪತನ
ಮೆಹದಿ ಹಸನ್ ಮಿರಾಝ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಇಮಾಮ್ ಉಲ್ ಹಕ್.
84 ಎಸೆತಗಳಲ್ಲಿ 78 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪಾಕ್ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್.
ಬಾಂಗ್ಲಾದೇಶ್ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟ ಮೆಹದಿ ಹಸನ್ ಮಿರಾಝ್.
PAK 159/3 (32.5)
Asia cup 2023 PAK vs BAN Live Score: ಭರ್ಜರಿ ಸಿಕ್ಸ್ ಸಿಡಿಸಿದ ಇಮಾಮ್
ಶಕೀಬ್ ಅಲ್ ಹಸನ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಮಾಮ್ ಉಲ್ ಹಕ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
PAK 130/2 (27.3)
ಫಖರ್ ಝಮಾನ್ (20) ಹಾಗೂ ಬಾಬರ್ ಆಝಂ (17) ಔಟ್.
Asia cup 2023 PAK vs BAN Live Score: 25 ಓವರ್ಗಳು ಮುಕ್ತಾಯ: ಪಾಕ್ ಉತ್ತಮ ಬ್ಯಾಟಿಂಗ್
25 ಓವರ್ಗಳ ಮುಕ್ತಾಯದ ವೇಳೆಗೆ 114 ರನ್ ಕಲೆಹಾಕಿದ ಪಾಕಿಸ್ತಾನ್.
ಅರ್ಧಶತಕ ಪೂರೈಸಿದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್.
ಫಖರ್ ಝಮಾನ್ (20) ಹಾಗೂ ಬಾಬಾರ್ ಆಝಂ (17) ಔಟ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
BAN 193 (38.4)
PAK 114/2 (25)
Asia cup 2023 PAK vs BAN Live Score: ಶತಕ ಪೂರೈಸಿದ ಪಾಕಿಸ್ತಾನ್
ಮೆಹದಿ ಹಸನ್ ಮಿರಾಝ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಬಾರಿಸಿದ ಮೊಹಮ್ಮದ್ ರಿಝ್ವಾನ್. ಈ ಫೋರ್ನೊಂದಿಗೆ ಶತಕ ಪೂರೈಸಿದ ಪಾಕಿಸ್ತಾನ್ ತಂಡ.
BAN 193 (38.4)
PAK 102/2 (23)
PAK vs BAN Live Score: ಪಾಕಿಸ್ತಾನ್ ತಂಡದ 2ನೇ ವಿಕೆಟ್ ಪತನ
ತಸ್ಕಿನ್ ಅಹ್ಮದ್ ಎಸೆತದಲ್ಲಿ ಬೌಲ್ಡ್ ಆದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ.
22 ಎಸೆತಗಳಲ್ಲಿ 17 ರನ್ ಬಾರಿಸಿ ನಿರ್ಗಮಿಸಿದ ಬಾಬರ್ ಆಝಂ.
ಬಾಂಗ್ಲಾದೇಶ್ ತಂಡಕ್ಕೆ 2ನೇ ಯಶಸ್ಸು.
PAK 74/2 (15.3)
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
Asia cup 2023 PAK vs BAN Live Score: ಭರ್ಜರಿ ಸಿಕ್ಸ್ ಸಿಡಿಸಿದ ಇಮಾಮ್
ಹಸನ್ ಮಹಮೂದ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಮಾಮ್ ಉಲ್ ಹಕ್.
15 ಓವರ್ ಮುಕ್ತಾಯದ ವೇಳೆಗೆ 74 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
PAK 74/1 (15)
Asia cup 2023 PAK vs BAN Live Score: ಅರ್ಧಶತಕ ಪೂರೈಸಿದ ಪಾಕಿಸ್ತಾನ್
12ನೇ ಓವರ್ನಲ್ಲಿ ಅರ್ಧಶತಕ ಪೂರೈಸಿದ ಪಾಕಿಸ್ತಾನ್ ತಂಡ. ಕ್ರೀಸ್ನಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಝಂ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
PAK 52/1 (11.5)
PAK vs BAN Live Score: ಪಾಕಿಸ್ತಾನ್ ತಂಡದ ಮೊದಲ ವಿಕೆಟ್ ಪತನ
ಶೋರಿಫುಲ್ ಇಸ್ಲಾಂ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದ ಫಖರ್ ಝಮಾನ್. 31 ಎಸೆತಗಳಲ್ಲಿ 20 ರನ್ ಬಾರಿಸಿ ನಿರ್ಗಮಿಸಿದ ಆರಂಭಿಕ ಬ್ಯಾಟರ್ ಫಖರ್. ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು.
BAN 193 (38.4)
PAK 35/1 (9.1)
Asia cup 2023 PAK vs BAN Live Score: ಆಕರ್ಷಕ ಬೌಂಡರಿ ಬಾರಿಸಿದ ಫಖರ್
ಶೋರಿಫುಲ್ ಇಸ್ಲಾಂ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಫಖರ್ ಝಮಾನ್.
6 ಓವರ್ ಮುಕ್ತಾಯದ ವೇಳೆ 21 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಫಖರ್ ಝಮಾನ್ – ಇಮಾಮ್ ಉಲ್ ಹಕ್ ಬ್ಯಾಟಿಂಗ್.
BAN 193 (38.4)
PAK 21/0 (6)
Asia cup 2023 PAK vs BAN Live Score: ಫ್ಲಡ್‌ಲೈಟ್ ವೈಫಲ್ಯದಿಂದ ಆಟ ಸ್ಥಗಿತ
ಲಾಹೋರ್ನ ಗಡ್ಡಾಫಿ ಮೈದಾನದಲ್ಲಿನ ಫ್ಲಡ್‌ಲೈಟ್ ವೈಫಲ್ಯದಿಂದ ಆಟ ಸ್ಥಗಿತಗೊಂಡಿದೆ.
ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು 45 ಓವರ್ಗಳಲ್ಲಿ 179 ರನ್ಗಳ ಅವಶ್ಯಕತೆಯಿದೆ.
ಕ್ರೀಸ್ನಲ್ಲಿ ಫಖರ್ ಝಮಾನ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
BAN 193 (38.4)
PAK 15/0 (5)
Asia cup 2023 PAK vs BAN Live Score: 5 ಓವರ್ಗಳು ಮುಕ್ತಾಯ
5 ಓವರ್ಗಳಲ್ಲಿ 15 ರನ್ ಕಲೆಹಾಕಿದ ಪಾಕಿಸ್ತಾನ್ ಆರಂಭಿಕರು.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್.
BAN 193 (38.4)
PAK 15/0 (5)
Asia cup 2023 PAK vs BAN Live Score: ಬಾಂಗ್ಲಾದೇಶ್ ಆಲೌಟ್
ನಸೀಮ್ ಶಾ ಎಸೆತದಲ್ಲಿ ಶೊರಿಫುಲ್ ಇಸ್ಲಾಂ ಕ್ಲೀನ್ ಬೌಲ್ಡ್.
38.4 ಓವರ್ಗಳಲ್ಲಿ 193 ರನ್ಗಳಿಗೆ ಬಾಂಗ್ಲಾದೇಶ್ ತಂಡ ಆಲೌಟ್.
3 ರನ್ಗಳಿಸುವಷ್ಟರಲ್ಲಿ ಕೊನೆಯ 3 ವಿಕೆಟ್ ಪತನ.
ಪಾಕಿಸ್ತಾನ್ ಪರ 4 ವಿಕೆಟ್ ಕಬಳಿಸಿದ ಹ್ಯಾರಿಸ್ ರೌಫ್, 3 ವಿಕೆಟ್ ಪಡೆದ ನಸೀಮ್ ಶಾ.
BAN 193 (38.4)
Asia cup 2023 PAK vs BAN Live Score: ಬಾಂಗ್ಲಾದೇಶ್ ತಂಡದ 9ನೇ ವಿಕೆಟ್ ಪತನ
ನಸೀಮ್ ಶಾ ಎಸೆತದಲ್ಲಿ ಫಯೀಮ್ ಅಶ್ರಫ್ಗೆ ಸುಲಭ ಕ್ಯಾಚ್ ನೀಡಿದ ಆಫಿಫ್ ಹೊಸೈನ್. ಪಾಕಿಸ್ತಾಣ್ ತಂಡಕ್ಕೆ 9ನೇ ಯಶಸ್ಸು.
11 ಎಸೆತಗಳಲ್ಲಿ 12 ರನ್ಗಳಿಸಿ ನಿರ್ಗಮಿಸಿದ ಆಫಿಫ್ ಹೊಸೈನ್.
ಕ್ರೀಸ್ನಲ್ಲಿ ಶೋರಿಫುಲ್ ಇಸ್ಲಾಂ ಹಾಗೂ ಹಸನ್ ಮಹಮೂದ್ ಬ್ಯಾಟಿಂಗ್
BAN 192/9 (38.1)
Asia cup 2023 PAK vs BAN Live Score: ಬಾಂಗ್ಲಾದೇಶ್ ತಂಡದ 7ನೇ ವಿಕೆಟ್ ಪತನ
ಹ್ಯಾರಿಸ್ ರೌಫ್ ಎಸೆತದಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ಗೆ ಕ್ಯಾಚ್ ನೀಡಿದ ಮುಶ್ಫಿಕುರ್ ರಹೀಮ್.
87 ಎಸೆತಗಳಲ್ಲಿ 64 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮುಶ್ಫಿಕುರ್ ರಹೀಮ್.
ಪಾಕಿಸ್ತಾನ್ ತಂಡಕ್ಕೆ 7ನೇ ಯಶಸ್ಸು.
ಕ್ರೀಸ್ನಲ್ಲಿ ಆಫಿಫ್ ಹೊಸೈನ್ ಹಾಗೂ ತಸ್ಕಿನ್ ಅಹ್ಮದ್ ಬ್ಯಾಟಿಂಗ್.
BAN 190/7 (37.2)
PAK vs BAN Live Score: ಬಾಂಗ್ಲಾದೇಶ್ ತಂಡದ 6ನೇ ವಿಕೆಟ್ ಪತನ
ಇಫ್ತಿಕರ್ ಅಹ್ಮದ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಶಮೀಮ್ ಹೊಸೈನ್.
23 ಎಸೆತಗಳಲ್ಲಿ 16 ರನ್ಗಳಿಸಿ ನಿರ್ಗಮಿಸಿದ ಶಮೀಮ್. ಪಾಕಿಸ್ತಾನ್ ತಂಡಕ್ಕೆ 6ನೇ ಯಶಸ್ಸು.
ಕ್ರೀಸ್ನಲ್ಲಿ ಮುಶ್ಫಿಕುರ್ ರಹೀಮ್ ಹಾಗೂ ಆಫಿಫ್ ಹೊಸೈನ್ ಬ್ಯಾಟಿಂಗ್.
BAN 174/6 (34.4)
Asia cup 2023 PAK vs BAN Live Score: ವಾಟ್ ಎ ಶಾಟ್: ಭರ್ಜರಿ ಸಿಕ್ಸ್ ಸಿಡಿಸಿದ ಶಮೀಮ್
ಶಾಹೀನ್ ಶಾ ಅಫ್ರಿದಿ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಮೀಮ್ ಹೊಸೈನ್. ಈ ಸಿಕ್ಸ್ನೊಂದಿಗೆ ಬಾಂಗ್ಲಾದೇಶ್ ತಂಡದ ಸ್ಕೋರ್ 174 ಕ್ಕೆ ಏರಿಕೆ. ಕ್ರೀಸ್ನಲ್ಲಿ ಮುಶ್ಫಿಕುರ್ ರಹೀಮ್ ಹಾಗೂ ಶಮೀಮ್ ಹೊಸೈನ್ ಬ್ಯಾಟಿಂಗ್.
BAN 174/5 (34)
Asia cup 2023 PAK vs BAN Live Score: ಆಕರ್ಷಕ ಬೌಂಡರಿ ಬಾರಿಸಿದ ರಹೀಮ್
ಫಯೀಮ್ ಅಶ್ರಫ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಮುಶ್ಫಿಕುರ್ ರಹೀಮ್.
ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮುಂದುವರೆಸಿರುವ ಬಾಂಗ್ಲಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಹೀಮ್.
ಕ್ರೀಸ್ನಲ್ಲಿ ಶಮೀಮ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್
BAN 160/5 (32)
Asia cup 2023 PAK vs BAN Live Score: ಬಾಂಗ್ಲಾದೇಶ್ ತಂಡದ 5ನೇ ವಿಕೆಟ್ ಪತನ
ಫಯೀಮ್ ಅಶ್ರಫ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್. ಶಕೀಬ್ ಅಲ್ ಹಸನ್ ಔಟ್.
57 ಎಸೆತಗಳಲ್ಲಿ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶಕೀಬ್ ಅಲ್ ಹಸನ್. ಪಾಕಿಸ್ತಾನ್ ತಂಡಕ್ಕೆ 5ನೇ ಯಶಸ್ಸು.
BAN 147/5 (29.1)
PAK vs BAN Live Score: ಅರ್ಧಶತಕ ಪೂರೈಸಿದ ಶಕೀಬ್ ಅಲ್ ಹಸನ್
53 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶಕೀಬ್ ಅಲ್ ಹಸನ್
ಏಕದಿನ ಕ್ರಿಕೆಟ್ನಲ್ಲಿ 54ನೇ ಅರ್ಧಶತಕ ಬಾರಿಸಿದ ಬಾಂಗ್ಲಾದೇಶ್ ತಂಡದ ನಾಯಕ
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.
BAN 140/4 (27.1)
PAK vs BAN Live Score: 25 ಓವರ್ ಮುಕ್ತಾಯ: ಬಾಂಗ್ಲಾ ಉತ್ತಮ ಬ್ಯಾಟಿಂಗ್
25 ಓವರ್ ಮುಕ್ತಾಯದ ವೇಳೆಗೆ 120 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.
5ನೇ ವಿಕೆಟ್ಗೆ 73 ರನ್ಗಳ ಜೊತೆಯಾಟವಾಡಿದ ಶಕೀಬ್ ಅಲ್ ಹಸನ್ – ಮುಶ್ಫಿಕುರ್ ರಹೀಮ್.
ಮೊದಲ 10 ಓವರ್ಗಳಲ್ಲಿ 4 ವಿಕೆಟ್ ಕಬಳಿಸಿದ್ದ ಪಾಕಿಸ್ತಾನ್.
ಇದೀಗ ಶಕೀಬ್ ಅಲ್ ಹಸನ್ (46) ಹಾಗೂ ಮುಶ್ಫಿಕುರ್ ರಹೀಮ್ (33) ರಿಂದ ಭರ್ಜರಿ ಬ್ಯಾಟಿಂಗ್.
BAN 120/4 (25)
PAK vs BAN Live Score: ಸ್ವೀಪ್ ಶಾಟ್: ರಹೀಮ್ ಬ್ಯಾಟ್ನಿಂದ ಫೋರ್
ಶಾದಾಬ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಫೋರ್ ಬಾರಿಸಿದ ಮುಶ್ಫಿಕುರ್ ರಹೀಮ್. ಈ ಫೋರ್ನೊಂದಿಗೆ ಶತಕ ಪೂರೈಸಿದ ಬಾಂಗ್ಲಾದೇಶ್ ತಂಡ.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್
BAN 103/4 (20.2)
PAK vs BAN Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಕೀಬ್ ಅಲ್ ಹಸನ್
ನಸೀಮ್ ಶಾ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಕೀಬ್ ಅಲ್ ಹಸನ್. ಕಂಬ್ಯಾಕ್ ಪ್ರಯತ್ನದಲ್ಲಿ ಬಾಂಗ್ಲಾ ಬ್ಯಾಟರ್ಗಳು. ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.
BAN 99/4 (19.4)
PAK vs BAN Live Score: 15 ಓವರ್ ಮುಕ್ತಾಯ: ಬಾಂಗ್ಲಾ ತಂಡದಿಂದ ರಕ್ಷಣಾತ್ಮಕ ಆಟ
15 ಓವರ್ ಮುಕ್ತಾಯದ ವೇಳೆ 72 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.
4 ವಿಕೆಟ್ ಕಬಳಿಸುವ ಮೂಲಕ 15 ಓವರ್ಗಳಲ್ಲಿ ಮೇಲುಗೈ ಸಾಧಿಸಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ (14) ಹಾಗೂ ಮುಶ್ಫಿಕುರ್ ರಹೀಮ್ (14) ಬ್ಯಾಟಿಂಗ್.
BAN 72/4 (15)
ಪಾಕ್ ಪರ 2 ವಿಕೆಟ್ ಕಬಳಿಸಿದ ಹ್ಯಾರಿಸ್ ರೌಫ್.
PAK vs BAN Live Score: 10 ಓವರ್ ಮುಕ್ತಾಯ: ಪಾಕ್ ಭರ್ಜರಿ ಬೌಲಿಂಗ್
ಮೊದಲ 10 ಓವರ್ಗಳಲ್ಲೇ 4 ವಿಕೆಟ್ ಉರುಳಿಸಿದ ಪಾಕಿಸ್ತಾನ್ ವೇಗಿಗಳು.
ಮೊದಲ ಪವರ್ಪ್ಲೇ ಓವರ್ಗಳಲ್ಲಿ 49 ರನ್ ಕಲೆಹಾಕಿದ ಬಾಂಗ್ಲಾದೇಶ್.
ಪಾಕಿಸ್ತಾನ್ ಪರ 2 ವಿಕೆಟ್ ಕಬಳಿಸಿದ ಹ್ಯಾರಿಸ್ ರೌಫ್.
ನಸೀಮ್ ಶಾ ಹಾಗೂ ಶಾಹೀನ್ ಅಫ್ರಿದಿಗೆ ತಲಾ ಒಂದು ವಿಕೆಟ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮುಶ್ಫುಕುರ್ ರಹೀಮ್ ಬ್ಯಾಟಿಂಗ್.
BAN 49/4 (10)
PAK vs BAN Live Score: ಪೇಸ್ ಈಸ್ ಪೇಸ್: ಹ್ಯಾರಿಸ್ ರೌಫ್ ಮ್ಯಾಜಿಕ್
ಹ್ಯಾರಿಸ್ ರೌಫ್ ಬೆಂಕಿ ಬೌಲಿಂಗ್ಗೆ ತೌಹಿದ್ ಹೃದೋಯ್ ಕ್ಲೀನ್ ಬೌಲ್ಡ್.
ಪಾಕಿಸ್ತಾನ್ ತಂಡಕ್ಕೆ 4ನೇ ಯಶಸ್ಸು ತಂದುಕೊಟ್ಟ ರೌಫ್
9 ಎಸೆತಗಳಲ್ಲಿ 4 ರನ್ಗಳಿಸಿ ನಿರ್ಗಮಿಸಿದ ತೌಹಿದ್ ಹೃದೋಯ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್
BAN 47/4 (9.1)
PAK vs BAN Live Score: ಬಾಂಗ್ಲಾದೇಶ್ ತಂಡದ 3ನೇ ವಿಕೆಟ್ ಪತನ
ಹ್ಯಾರಿಸ್ ರೌಫ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಮೊಹಮ್ಮದ್ ನಯಿಮ್. ಕ್ರೀಸ್ನಲ್ಲೇ ಚಿಮ್ಮಿದ ಚೆಂಡು ನೇರವಾಗಿ ಹ್ಯಾರಿಸ್ ರೌಫ್ಗೆ ಕೈ ಕ್ಯಾಚ್. 25 ಎಸೆತಗಳಲ್ಲಿ 20 ರನ್ಗಳಿಸಿ ವಿಕೆಟ್ ಒಪ್ಪಿಸಿದ ಮೊಹಮ್ಮದ್ ನಯಿಮ್. ಪಾಕಿಸ್ತಾನ್ ತಂಡಕ್ಕೆ ಮೂರನೇ ಯಶಸ್ಸು.
BAN 45/3 (7.3)
PAK vs BAN Live Score: 7 ಓವರ್ ಮುಕ್ತಾಯ: ಬಾಂಗ್ಲಾ ಉತ್ತಮ ಬ್ಯಾಟಿಂಗ್
ಶಾಹೀನ್ ಅಫ್ರಿದಿ ಎಸೆದ 7ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಮೊಹಮ್ಮದ್ ನಯಿಮ್. 7 ಓವರ್ ಮುಕ್ತಾಯದ ವೇಳೆಗೆ 44 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ. 2 ವಿಕೆಟ್ ಕಬಳಿಸಿದ ಪಾಕಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಮೊಹಮ್ಮದ್ ನಯಿಮ್ ಹಾಗೂ ಶಕೀಬ್ ಅಲ್ ಹಸನ್ ಬ್ಯಾಟಿಂಗ್.
BAN 44/2 (7)
PAK vs BAN Live Score: ಬಾಂಗ್ಲಾದೇಶ್ 2ನೇ ವಿಕೆಟ್ ಪತನ
ಶಾಹೀನ್ ಶಾ ಅಫ್ರಿದಿ ಎಸೆತದಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ಗೆ ಕ್ಯಾಚ್ ನೀಡಿದ ಲಿಟ್ಟನ್ ದಾಸ್. 13 ಎಸೆತಗಳಲ್ಲಿ 4 ಫೋರ್ಗಳೊಂದಿಗೆ 16 ರನ್ ಬಾರಿಸಿ ನಿರ್ಗಮಿಸಿದ ಲಿಟ್ಟನ್ ದಾಸ್. ಪಾಕಿಸ್ತಾನ್ ತಂಡಕ್ಕೆ 2ನೇ ಯಶಸ್ಸು. ಕ್ರೀಸ್ನಲ್ಲಿ ಮೊಹಮ್ಮದ್ ನಯಿಮ್ ಹಾಗೂ ಶಕೀಬ್ ಅಲ್ ಹಸನ್ ಬ್ಯಾಟಿಂಗ್.
BAN 31/2 (4.5)
PAK vs BAN Live Score: ದಾಸ್ ಬ್ಯಾಟ್ನಿಂದ ಕ್ಲಾಸಿ ಕವರ್ ಡ್ರೈವ್
ನಸೀಮ್ ಶಾ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್…ಅತ್ಯುತ್ತಮ ಟೈಮಿಂಗ್ನೊಂದಿಗೆ ಫೋರ್ ಬಾರಿಸಿದ ಲಿಟ್ಟನ್ ದಾಸ್. ಬಾಂಗ್ಲಾದೇಶ್ ತಂಡದ ಉತ್ತಮ ಬ್ಯಾಟಿಂಗ್. ಕ್ರೀಸ್ನಲ್ಲಿ ಮೊಹಮ್ಮದ್ ನಯಿಮ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.
BAN 22/1 (3.4)
PAK vs BAN Live Score: ಬಾಂಗ್ಲಾ ಖಾತೆ ತೆರೆದ ಲಿಟ್ಟನ್ ದಾಸ್
ನಸೀಮ್ ಶಾ ಎಸೆತದಲ್ಲಿ ಸ್ಕ್ವೇರ್ ಮೂಲಕ ಆಕರ್ಷಕ ಫೋರ್ ಬಾರಿಸಿದ ಲಿಟ್ಟನ್ ದಾಸ್. ಈ ಫೋರ್ನೊಂದಿಗೆ ಬಾಂಗ್ಲಾ ತಂಡದ ರನ್ ಖಾತೆ ಓಪನ್. ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಮೊಹಮ್ಮದ್ ನಯಿಮ್ ಬ್ಯಾಟಿಂಗ್.
BAN 4/1 (1.5)
PAK vs BAN Live Score: ಬಾಂಗ್ಲಾದೇಶ್ ತಂಡದ ಮೊದಲ ವಿಕೆಟ್ ಪತನ
ನಸೀಮ್ ಶಾ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿ ಹೊರ ನಡೆದ ಮೆಹದಿ ಹಸನ್ ಮಿರಾಝ್.
ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಮಿರಾಝ್, ಈ ಪಂದ್ಯದಲ್ಲಿ ಗೋಲ್ಡನ್ ಡಕ್.
ಪಾಕಿಸ್ತಾನ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಯುವ ವೇಗಿ ನಸೀಮ್ ಶಾ.
BAN 0/1 (1.1)
PAK vs BAN Live Score: ಮೊದಲ ಓವರ್ ಮೇಡನ್
ಮೇಡನ್ ಓವರ್ನೊಂದಿಗೆ ಶುಭಾರಂಭ ಮಾಡಿದ ಶಾಹೀನ್ ಅಫ್ರಿದಿ. 6 ಎಸೆತಗಳನ್ನು ಎದುರಿಸಿ ಒಂದೇ ಒಂದು ರನ್ ಕಲೆಹಾಕದ ಮೊಹಮ್ಮದ್ ನಯಿಮ್. ಕ್ರೀಸ್ನಲ್ಲಿ ಮೆಹದಿ ಹಸನ್ ಮಿರಾಝ್ ಹಾಗೂ ಮೊಹಮ್ಮದ್ ನಯಿಮ್ ಬ್ಯಾಟಿಂಗ್.
ಬಾಂಗ್ಲಾದೇಶ್- 0/0 (1)
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ಮೊದಲು ಬ್ಯಾಟಿಂಗ್.
PAK vs BAN Live Score: ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ತೌಹಿದ್ ಹೃದೋಜ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಮೀಮ್ ಹೊಸೈನ್, ಅಫೀಫ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.
PAK vs BAN Live Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಪಾಕಿಸ್ತಾನ್ (ಪ್ಲೇಯಿಂಗ್ XI): ಫಖರ್ ಝಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
PAK vs BAN Live Score: ಟಾಸ್ ಗೆದ್ದ ಬಾಂಗ್ಲಾದೇಶ್ ತಂಡ
ಏಷ್ಯಾಕಪ್ ಸೂಪರ್-4 ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿದೆ. ಲಾಹೋರ್ನ ಗಡ್ಡಾಫಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯದ ಮೂಲಕ ದ್ವಿತೀಯ ಸುತ್ತಿನಲ್ಲಿ ಶುಭಾರಂಭ ಮಾಡುವ ಇರಾದೆಯಲ್ಲಿದೆ ಉಭಯ ತಂಡಗಳು.
PAK vs BAN Live Score: ಇಂದಿನಿಂದ ಸೂಪರ್-4 ಹಂತದ ಪಂದ್ಯಗಳು ಶುರು
ಏಷ್ಯಾಕಪ್ನ ಸೂಪರ್ ಫೋರ್ ಪಂದ್ಯಗಳು ಇಂದಿನಿಂದ ಶುರುವಾಗಿದೆ. ಈ ಸುತ್ತಿನಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ್ ತಂಡಗಳು ಸೆಣಸಲಿದೆ. ಲಾಹೋರ್ನ ಗಡ್ಢಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಟೀಮ್ ಇಂಡಿಯಾ ತನ್ನ ಮೊದಲ ಸೂಪರ್ ಫೋರ್ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಪಾಕಿಸ್ತಾನ್ ವಿರುದ್ಧ ಆಡಲಿದೆ.
Published On - Sep 06,2023 2:12 PM