ದಾಖಲೆಯ ಗೆಲುವು ಸಾಧಿಸಿದ ಪಾಕಿಸ್ತಾನ್: ಟೀಮ್ ಇಂಡಿಯಾ ರೆಕಾರ್ಡ್ ಸೇಫ್

| Updated By: ಝಾಹಿರ್ ಯೂಸುಫ್

Updated on: Aug 30, 2023 | 10:00 PM

Pakistan vs Nepal: ಐದನೇ ವಿಕೆಟ್​ಗೆ ಜೊತೆಯಾದ ಬಾಬರ್ ಆಝಂ ಹಾಗೂ ಇಫ್ತಿಕರ್ ಬರೋಬ್ಬರಿ 214 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಬಾಬರ್ ಆಝಂ 109 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ 131 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 151 ರನ್​ ಬಾರಿಸಿ ನಿರ್ಗಮಿಸಿದರು.

ದಾಖಲೆಯ ಗೆಲುವು ಸಾಧಿಸಿದ ಪಾಕಿಸ್ತಾನ್: ಟೀಮ್ ಇಂಡಿಯಾ ರೆಕಾರ್ಡ್ ಸೇಫ್
Pakistan
Follow us on

Asia Cup 2023: ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಪಾಕಿಸ್ತಾನ್ ತಂಡ ಶುಭಾರಂಭ ಮಾಡಿದೆ. ಮುಲ್ತಾನ್​ನ ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ನೇಪಾಳ ಬೌಲರ್​ಗಳು ಯಶಸ್ವಿಯಾಗಿದ್ದರು.

ಪವರ್​ಪ್ಲೇನಲ್ಲಿ ಭರ್ಜರಿ ಬೌಲಿಂಗ್:

ನೇಪಾಳ ತಂಡವು ಮೊದಲ 10 ಓವರ್​ಗಳಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆರಂಭಿಕರಾದ ಫಖರ್ ಝಮಾನ್ (14) ಹಾಗೂ ಇಮಾಮ್ ಉಲ್ ಹಕ್ (5) ವಿಕೆಟ್ ಪಡೆಯುವ ಮೂಲಕ ಪಾಕ್ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಅಷ್ಟೇ ಅಲ್ಲದೆ ಮೊದಲ ಓವರ್​ಗಳಲ್ಲಿ ನೀಡಿದ್ದು ಕೇವಲ 44 ರನ್​ಗಳು ಮಾತ್ರ.

ಪಂದ್ಯದ ಚಿತ್ರಣ ಬದಲಿಸಿದ ಬಾಬರ್-ಇಫ್ತಿಕರ್:

ಪಾಕಿಸ್ತಾನ್ ತಂಡವು ಆರಂಭಿಕ ಆಘಾತಕ್ಕೆ ಒಳಗಾದರೂ ಆ ಬಳಿಕ ಕಣಕ್ಕಿಳಿದ ಬಾಬರ್ ಆಝಂ ಹಾಗೂ ಇಫ್ತಿಕರ್ ಅಹ್ಮದ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ರಿಝ್ವಾನ್ 44 ರನ್​ಗಳ ಕೊಡುಗೆ ನೀಡಿದರು. ಆದರೆ ಕೇವಲ 4 ರನ್​ಗೆ ವಿಕೆಟ್ ಒಪ್ಪಿಸಿ ಆಘಾ ಸಲ್ಮಾನ್ ನಿರಾಸೆ ಮೂಡಿಸಿದರು.

ಐದನೇ ವಿಕೆಟ್​ಗೆ ಜೊತೆಯಾದ ಬಾಬರ್ ಆಝಂ ಹಾಗೂ ಇಫ್ತಿಕರ್ ಬರೋಬ್ಬರಿ 214 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಬಾಬರ್ ಆಝಂ 109 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ 131 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 151 ರನ್​ ಬಾರಿಸಿ ನಿರ್ಗಮಿಸಿದರು.

ಇಫ್ತಿಕರ್ ಅಹ್ಮದ್ ಅಬ್ಬರ:

ಬಾಬರ್ ಆಝಂ ಔಟಾಗುತ್ತಿದ್ದಂತೆ ಮತ್ತೊಂದೆಡೆ ಇಫ್ತಿಕ್ ಅಹ್ಮದ್ ಅಬ್ಬರ ಶುರು ಮಾಡಿದ್ದರು. ಕೇವಲ 67 ಎಸೆತಗಳಲ್ಲಿ ಶತಕ ಪೂರೈಸಿದ ಇಫ್ತಿಕರ್ ತಂಡದ ಮೊತ್ತವನ್ನು 300 ರ ಗಡಿದಾಟಿಸಿದರು. ಅಷ್ಟೇ ಅಲ್ಲದೆ 71 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ 109 ರನ್ ಬಾರಿಸಿ ತಂಡದ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 342 ಕ್ಕೆ ತಂದು ನಿಲ್ಲಿಸಿದರು.

ಪಾಕ್ ಮಾರಕ ಬೌಲಿಂಗ್​ಗೆ ತತ್ತರಿಸಿದ ನೇಪಾಳ:

343 ರನ್​ಗಳ ಕಠಿಣ ಗುರಿ ಪಡೆದ ನೇಪಾಳ ತಂಡವು ಶಾಹೀನ್ ಅಫ್ರಿದಿಯ ಮೊದಲ ಓವರ್​ನಲ್ಲೇ 2 ವಿಕೆಟ್ ಕಳೆದುಕೊಂಡಿತು. ಇನ್ನು 2ನೇ ಓವರ್​ನಲ್ಲಿ ನಸೀಮ್ ಶಾ 3ನೇ ಯಶಸ್ಸು ತಂದುಕೊಟ್ಟರು. ಈ ಆರಂಭಿಕ ಆಘಾತದಿಂದ ನೇಪಾಳ ತಂಡವು ಚೇತರಿಸಿಕೊಳ್ಳಲೇ ಇಲ್ಲ ಎನ್ನಬಹುದು.

ಏಕೆಂದರೆ 2 ವಿಕೆಟ್ ಕಬಳಿಸುವ ಮೂಲಕ ಹ್ಯಾರಿಸ್ ರೌಫ್ ನೇಪಾಳ ತಂಡದ ಮಧ್ಯಮ ಕ್ರಮಾಂಕಕ್ಕೆ ಶಾಕ್ ನೀಡಿದರು. ಇದಾಗ್ಯೂ ನೇಪಾಳ ಪರ ಆರಿಫ್ ಶೇಖ್ 26 ರನ್​ಗಳಿಸಿದರೆ, ಸೋಂಪಲ್ 28 ರನ್​ಗಳ ಕೊಡುಗೆ ನೀಡಿದರು.

ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಶಾದಾಬ್ ಖಾನ್ ಕೆಳ ಕ್ರಮಾಂಕದ ಬ್ಯಾಟರ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರೊಂದಿಗೆ ನೇಪಾಳ ತಂಡವು 23.4 ಓವರ್​ಗಳಲ್ಲಿ 104 ರನ್​ಗಳಿಸಿ ಆಲೌಟ್ ಆಯಿತು. ಇತ್ತ 238 ರನ್​ಗಳ ಭರ್ಜರಿ ಜಯದೊಂದಿಗೆ ಪಾಕಿಸ್ತಾನ್ ಶುಭಾರಂಭ ಮಾಡಿದೆ.

ದಾಖಲೆಯ ಜಯ:

ಇದು ಪಾಕಿಸ್ತಾನ್ ತಂಡದ ಏಷ್ಯಾಕಪ್​ನಲ್ಲಿನ ಅತ್ಯಂತ ದೊಡ್ಡ ಗೆಲುವಾಗಿದೆ. ಅಂದರೆ ಈ ಹಿಂದೆ ಪಾಕ್ ತಂಡವು ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ್ ವಿರುದ್ಧ 233 ರನ್​ಗಳಿಂದ ಜಯ ಸಾಧಿಸಿತ್ತು. ಇದೀಗ ಈ ದಾಖಲೆಯನ್ನು ಮುರಿದು ಬಾಬರ್ ಆಝಂ ಪಡೆದ 238 ರನ್​ಗಳ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಟೀಮ್ ಇಂಡಿಯಾ ದಾಖಲೆ ಸೇಫ್:

ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್​ಗಳ ಅಂತರದಿಂದ ಗೆದ್ದ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಭಾರತ ತಂಡವು 2008 ರಲ್ಲಿ ಹಾಂಗ್​ಕಾಂಗ್ ವಿರುದ್ಧ 256 ರನ್​ಗಳ ಜಯ ಸಾಧಿಸಿ ದಾಖಲೆ ನಿರ್ಮಿಸಿದೆ. ಇದೀಗ ಪಾಕ್ ತಂಡವು 238 ರನ್​ಗಳ ಗೆಲುವು ಸಾಧಿಸುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ.