Asia Cup 2025: ಸೂಪರ್ 4 ಹಂತಕ್ಕೆ 4 ತಂಡಗಳು ಫೈನಲ್: ಇಲ್ಲಿದೆ ಮುಂದಿನ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ
Asia Cup 2025, Super 4 Full Schedule: ಭಾರತ ಮತ್ತು ಪಾಕಿಸ್ತಾನ ತಂಡಗಳು 'ಎ' ಗುಂಪಿನಿಂದ ಸೂಪರ್ ಫೋರ್‌ಗೆ ಅರ್ಹತೆ ಪಡೆದಿವೆ. ಅತ್ತ ಶ್ರೀಲಂಕಾ ಮತ್ತು ಬಾಂಗ್ಲಾದೇಶ 'ಬಿ' ಗುಂಪಿನಿಂದ ಸೂಪರ್ ಫೋರ್‌ಗೆ ಪ್ರವೇಶಿಸಿವೆ. ಸೆಪ್ಟೆಂಬರ್ 20 ರಿಂದ ಅಂದರೆ ನಾಳೆಯಿಂದಲೇ ಸೂಪರ್ ಫೋರ್ ಪಂದ್ಯಗಳು ಆರಂಭವಾಗಲಿವೆ.

ಬೆಂಗಳೂರು (ಸೆ. 19): 2025 ರ ಏಷ್ಯಾ ಕಪ್ನ ಸೂಪರ್ 4 ಹಂತಕ್ಕೆ ನಾಲ್ಕು ತಂಡಗಳನ್ನು ಅಂತಿಮಗೊಳಿಸಲಾಗಿದೆ. ಭಾರತ (Indian Cricket Team) ಮತ್ತು ಪಾಕಿಸ್ತಾನ ಈಗಾಗಲೇ ಗ್ರೂಪ್ ಎ ನಿಂದ ಅರ್ಹತೆ ಪಡೆದಿದ್ದರೆ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಗ್ರೂಪ್ ಬಿ ನಿಂದ ಸೂಪರ್ 4 ಗೆ ಲಗ್ಗೆ ಇಟ್ಟಿದೆ. ಏಷ್ಯಾ ಕಪ್ನ 11 ನೇ ಪಂದ್ಯವು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಶ್ರೀಲಂಕಾ 6 ವಿಕೆಟ್ ಗಳಿಂದ ಗೆದ್ದಿತು, ಇದರಿಂದಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಎರಡೂ ಸೂಪರ್ 4 ಗೆ ಅರ್ಹತೆ ಪಡೆದವು. ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನಕ್ಕೆ ಇದು ಮಾಡು-ಅಥವಾ-ಮಡಿ ಪಂದ್ಯವಾಗಿತ್ತು. ಸದ್ಯ ಸೂಪರ್ 4 ರ ಸಂಪೂರ್ಣ ವೇಳಾಪಟ್ಟಿ ನೋಡುವುದಾದರೆ..
ಏಷ್ಯಾಕಪ್ 2025 ಸೂಪರ್ -4 ಹಂತದ ವೇಳಾಪಟ್ಟಿ:
- ಸೆಪ್ಟೆಂಬರ್ 20, ಶ್ರೀಲಂಕಾ vs ಬಾಂಗ್ಲಾದೇಶ, ದುಬೈ, ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ, ರಾತ್ರಿ 8 ಗಂಟೆಗೆ.
- ಸೆಪ್ಟೆಂಬರ್ 21, ಭಾರತ vs ಪಾಕಿಸ್ತಾನ, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
- ಸೆಪ್ಟೆಂಬರ್ 23, ಪಾಕಿಸ್ತಾನ vs ಶ್ರೀಲಂಕಾ, ಅಬುಧಾಬಿ, ಶೇಖ್ ಜಾಯೆದ್ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
- ಸೆಪ್ಟೆಂಬರ್ 24, ಭಾರತ vs ಬಾಂಗ್ಲಾದೇಶ, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
- ಸೆಪ್ಟೆಂಬರ್ 25, ಪಾಕಿಸ್ತಾನ vs ಬಾಂಗ್ಲಾದೇಶ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
- ಸೆಪ್ಟೆಂಬರ್ 27, ಭಾರತ vs ಶ್ರೀಲಂಕಾ, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
- ಸೆಪ್ಟೆಂಬರ್ 28, ಏಷ್ಯಾ ಕಪ್ 2025 ಫೈನಲ್, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ.
ಸೂಪರ್ 4 ನಲ್ಲಿ ಭಾರತದ ಮೊದಲು ಎದುರಾಳಿ ಪಾಕಿಸ್ತಾನ:
ಇಲ್ಲಿಯವರೆಗೆ, ಭಾರತವು ಈ ಇಡೀ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಭಾರತವು ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಮತ್ತು ಎರಡನೇ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಆದಾಗ್ಯೂ, ಈ ಪಂದ್ಯದಲ್ಲಿ, ಭಾರತವು ಯಾವುದೇ ಪಾಕಿಸ್ತಾನಿ ಆಟಗಾರರು ಅಥವಾ ಅವರ ಸಹಾಯಕ ಸಿಬ್ಬಂದಿಯೊಂದಿಗೆ ಕೈಕುಲುಕಲಿಲ್ಲ, ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ತೀವ್ರವಾಗಿ ಕೆರಳಿಸಿತು. ಈಗ, ಸೆಪ್ಟೆಂಬರ್ 21 ರ ಭಾನುವಾರ ದುಬೈನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗುವಾಗ, ಭಾರತ ಮತ್ತೊಮ್ಮೆ ಇತಿಹಾಸವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆ. ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಸೂಪರ್ 4 ಪಂದ್ಯವನ್ನು ಆಡಲಿದೆ.
IND vs OMA Weather Report: ಟೀಮ್ ಇಂಡಿಯಾಕ್ಕೆ ಹವಮಾನದ್ದೇ ಚಿಂತೆ: ಇಂದಿನ ಪಂದ್ಯಕ್ಕೆ ಮಳೆ ಇಲ್ಲ ಆದರೆ..
ಸೂಪರ್ 4 ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳು 2025 ರ ಏಷ್ಯಾಕಪ್‌ನ ಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




