Asia Cup 2025: ಏಷ್ಯಾಕಪ್‌ಗೆ 7 ತಂಡಗಳು ಪ್ರಕಟ; ಇನ್ನೊಂದು ತಂಡ ಬಾಕಿ

Asia Cup 2025: ಸೆಪ್ಟೆಂಬರ್ 9 ರಂದು ಯುಎಇಯಲ್ಲಿ ಆರಂಭವಾಗುವ ಏಷ್ಯಾಕಪ್ ಟಿ20 ಪಂದ್ಯಾವಳಿಗೆ 7 ತಂಡಗಳನ್ನು ಘೋಷಿಸಲಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಓಮನ್ ಮತ್ತು ಹಾಂಗ್ ಕಾಂಗ್ ತಂಡಗಳು ಭಾಗವಹಿಸಲಿವೆ. ಎರಡು ಗುಂಪುಗಳಾಗಿ ವಿಂಗಡಿಸಲಾದ ತಂಡಗಳ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರತಿ ತಂಡದ ಆಟಗಾರರ ಪಟ್ಟಿಯನ್ನು ಸಹ ಒಳಗೊಂಡಿದೆ.

Asia Cup 2025: ಏಷ್ಯಾಕಪ್‌ಗೆ 7 ತಂಡಗಳು ಪ್ರಕಟ; ಇನ್ನೊಂದು ತಂಡ ಬಾಕಿ
Asia Cup 2025
Edited By:

Updated on: Sep 01, 2025 | 5:21 PM

ಸೆಪ್ಟೆಂಬರ್ 9 ರಂದು ಯುಎಇಯಲ್ಲಿ ಪ್ರಾರಂಭವಾಗುವ ಟಿ20 ಏಷ್ಯಾಕಪ್​ಗಾಗಿ (Asia Cup 2025) ಇಲ್ಲಿಯವರೆಗೆ 7 ತಂಡಗಳನ್ನು ಘೋಷಿಸಲಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಓಮನ್, ಯುಎಇ ಮತ್ತು ಹಾಂಗ್ ಕಾಂಗ್ ಸೇರಿದಂತೆ ಒಟ್ಟು 8 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಇವುಗಳಲ್ಲಿ, ಯುಎಇ ಹೊರತುಪಡಿಸಿ ಎಲ್ಲಾ ತಂಡಗಳನ್ನು ಘೋಷಿಸಲಾಗಿದೆ. ಪಂದ್ಯಾವಳಿಯಲ್ಲಿ ಆಡಲಿರುವ 8 ತಂಡಗಳನ್ನು ತಲಾ 4 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಯುಎಇ, ಭಾರತ, ಪಾಕಿಸ್ತಾನ ಮತ್ತು ಓಮನ್‌ ಗ್ರೂಪ್ ಎ ನಲ್ಲಿವೆ. ಗ್ರೂಪ್ ಬಿ ಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳಿವೆ. ಇನ್ನು ಈ ಟೂರ್ನಿಗೆ ಪ್ರಕಟವಾಗಿರುವ 7 ತಂಡಗಳಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.

ಟೀಂ ಇಂಡಿಯಾ: ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ. ಮೀಸಲು ಆಟಗಾರರು: ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್.

ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯ್, ಝಾಕರ್ ಅಲಿ, ಶಮೀಮ್ ಹೊಸೈನ್, ಕಾಜಿ ನೂರುಲ್ ಹಸನ್ ಸೋಹನ್, ಸಾಕಿಬ್ ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ತನ್ಜಿ ಶೈಫ್ ಉದ್ದೀನ್. ಸ್ಟ್ಯಾಂಡ್‌ಬೈ- ಸೌಮ್ಯ ಸರ್ಕಾರ್, ಮೆಹದಿ ಹಸನ್ ಮಿರಾಜ್, ತನ್ವೀರ್ ಅಹ್ಮದ್ ಮತ್ತು ಹಸನ್ ಮಹಮೂದ್.

ಹಾಂಗ್ ಕಾಂಗ್‌ ತಂಡ: ಯಾಸಿಮ್ ಮುರ್ತಾಜಾ (ನಾಯಕ), ಬಾಬರ್ ಹಯಾತ್ (ಉಪನಾಯಕ), ಜೀಶಾನ್ ಅಲಿ (ವಿಕೆಟ್ ಕೀಪರ್), ಶಾಹಿದ್ ವಾಸಿಫ್ (ವಿಕೆಟ್ ಕೀಪರ್), ನಿಯಾಜಕತ್ ಖಾನ್ ಮೊಹಮ್ಮದ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೊಯೆಟ್ಜಿ, ಅಂಶುಮಾನ್ ರಾತ್, ಎಹ್ಸಾನ್ ಖಾನ್, ಕಲ್ಹಾನ್ ಮಾರ್ಕ್ ಚಲ್ಲು, ಆಯುಷ್ ಆಶಿಶ್ ಶುಕ್ಲಾ, ಮೊಹಮ್ಮದ್ ಐಕ್ವಾಝ್ಲ್ ಖಾನ್ ಮೆಹಮೂದ್, ಅನಸ್ ಖಾನ್, ಹರೂನ್ ಮೊಹಮ್ಮದ್ ಅರ್ಷದ್, ಅಲಿ-ಹಸನ್, ಗಜನ್ಫರ್ ಮೊಹಮ್ಮದ್, ಮೊಹಮ್ಮದ್ ವಹೀದ್.

ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಉಮರ್ಜಾಯ್, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಲ್ಲಾ ಅಶ್ರಫ್, ಮುಹಮ್ಮದೀನ್ ಅಲ್ಲಾ ಅಶ್ರಫ್, ಗಜನ್‌ಫರ್, ನೂರ್ ಅಹ್ಮದ್, ಫರೀದ್ ಮಲಿಕ್, ನವೀನ್-ಉಲ್-ಹಕ್ ಮತ್ತು ಫಜಲ್ಹಕ್ ಫಾರೂಕಿ. ಮೀಸಲು ಆಟಗಾರರು: ವಫಿವುಲ್ಲಾ ತಾರಖಿಲ್, ನಂಗ್ಯಾಲ್ ಖರೋಟೆ, ಅಬ್ದುಲ್ಲಾ ಅಹ್ಮದ್ಝೈ.

ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಮೊಹಮ್ಮದ್ ನದೀಮ್, ಹಮ್ಮದ್ ಮಿರ್ಜಾ, ಅಮೀರ್ ಕಲೀಮ್, ಸುಫಿಯಾನ್ ಮಹಮೂದ್, ಆಶಿಶ್ ಒಡೆದ್ರಾ, ಶಕೀಲ್ ಅಹ್ಮದ್, ಆರ್ಯನ್ ಬಿಶ್ತ್, ಸಮಯ್ ಶ್ರೀವಾಸ್ತವ, ಸುಫಿಯಾನ್ ಯೂಸುಫ್, ನದೀಮ್ ಖಾನ್, ಜಿಕ್ರಿಯಾ ಇಸ್ಲಾಂ, ಫೈಸಲ್ ಶಾಹ್, ಕರಣ್ ಮುಹಮ್ಮದ್ ಎ ಮತ್ತು ಕರಣ್ ಸೋನಾವಲೆ

ಶ್ರೀಲಂಕಾ ತಂಡ: ಚರಿತ್ ಅಸಲಂಕಾ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕಮಿಲ್ ಮಿಶ್ರಾ, ದಸುನ್ ಶನಕ, ಕಮೆಂದು ಮೆಂಡಿಸ್, ವನಿಂದು ಹಸರಂಗ, ನುವಾನಿಡು ಫೆರ್ನಾಂಡೋ, ದುನಿತ್ ವೆಲ್ಲಾಲಗೆ, ಚಾಮಿಕ ಕರುಣಾರತ್ನೆ, ಮಹೇಶ್ ತೀಕ್ಷಣ, ಮಥೀಶ ಪತಿರಾನ, ನುವಾನ್ ತುಷಾರ, ದುಷ್ಮಂತ ಚಮೀರ, ಬಿನೌರ ಫೆರ್ನಾಂಡೋ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 pm, Thu, 28 August 25