ಸೆಮಿಫೈನಲ್ ಇಲ್ಲದೆ ಫೈನಲ್: ಹೀಗಿರಲಿದೆ ಏಷ್ಯಾಕಪ್ ಟೂರ್ನಿ

Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್​ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್​ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಸೆಮಿಫೈನಲ್ ಇಲ್ಲದೆ ಫೈನಲ್: ಹೀಗಿರಲಿದೆ ಏಷ್ಯಾಕಪ್ ಟೂರ್ನಿ
Asia Cup 2025

Updated on: Sep 04, 2025 | 8:55 AM

ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ದೇಶಗಳು ಕಣಕ್ಕಿಳಿಯಲಿವೆ. ಈ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಈ ಬಾರಿ ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಮೊದಲ ಸುತ್ತಿನಲ್ಲಿ ಗ್ರೂಪ್​ನಲ್ಲಿರುವ ತಂಡಗಳು ಮುಖಾಮುಖಿಯಾಗಲಿದೆ.

ಏಷ್ಯಾಕಪ್ ಗ್ರೂಪ್​:

  • ಗ್ರೂಪ್ ಎ: ಭಾರತ, ಪಾಕಿಸ್ತಾನ್, ಒಮಾನ್, ಯುಎಇ
  • ಗ್ರೂಪ್ ಬಿ: ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಹಾಂಗ್ ಕಾಂಗ್.

ಇಲ್ಲಿ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಹಾಗೂ ಯುಎಇ ತಂಡಗಳು ಇವೆ. ಹೀಗಾಗಿ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್, ಯುಎಇ ಹಾಗೂ ಒಮಾನ್ ತಂಡಗಳನ್ನು ಮಾತ್ರ ಎದುರಿಸಲಿದೆ.

ಗ್ರೂಪ್ ಅಂಕ ಪಟ್ಟಿ:

ಮೊದಲ ಸುತ್ತಿನಲ್ಲಿ ಎರಡೂ ಗ್ರೂಪ್​ಗಳಿಗೂ ಅಂಕ ಪಟ್ಟಿ ಇರಲಿದೆ. ಈ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೂಪರ್-4 ಹಂತಕ್ಕೆ ಅರ್ಹತೆ ಪಡೆಯಲಿದೆ.

ಸೂಪರ್-4 ಹಂತ:

ಮೊದಲ ಸುತ್ತಿನಲ್ಲಿ ಕಣಕ್ಕಿಳಿದ 8 ತಂಡಗಳಲ್ಲಿ 4 ಟೀಮ್​ಗಳು ಮಾತ್ರ ದ್ಚಿತೀಯ ಸುತ್ತಿಗೆ ಪ್ರವೇಶಿಸುತ್ತದೆ. ಹೀಗಾಗಿಯೇ ದ್ವಿತೀಯ ಸುತ್ತಿಗೆ ಸೂಪರ್-4 ಎಂದು ಹೆಸರಿಡಲಾಗಿದೆ. ಈ ಹಂತದಲ್ಲಿ ಯಾವುದೇ ಗ್ರೂಪ್​ಗಳಿರುವುದಿಲ್ಲ. ಅಂದರೆ 4 ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ.

ಸೆಮಿಫೈನಲ್​ ಇಲ್ಲ:

ದ್ವಿತೀಯ ಸುತ್ತಿನ ಬಳಿಕ ಯಾವುದೇ ಸೆಮಿಫೈನಲ್ ಪಂದ್ಯ ಇರುವುದಿಲ್ಲ. ಅಂದರೆ ಸೂಪರ್-4 ಹಂತದಲ್ಲಿ ಒಂದು ತಂಡವು ಮೂರು ಮ್ಯಾಚ್​ಗಳನ್ನು ಆಡಲಿದೆ. ಇಲ್ಲಿ ಕೂಡ ಅಂಕ ಪಟ್ಟಿ ಇರಲಿದ್ದು, ಈ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್​ಗೇರಲಿದೆ.

ಟೂರ್ನಿಯ ಸ್ವರೂಪವೇನು?

ಈ ಬಾರಿಯ ಏಷ್ಯಾಕಪ್ ನಡೆಯುತ್ತಿರುವುದು ಟಿ20 ಸ್ವರೂಪದಲ್ಲಿ. ಅಂದರೆ ಕಳೆದ ಬಾರಿ ಏಕದಿನ ಮಾದರಿಯಲ್ಲಿ ಆಡಲಾಗಿತ್ತು. ಇದೀಗ ಸ್ವರೂಪ ಬದಲಿಸಲು ಮುಖ್ಯ ಕಾರಣ ಮುಂಬರುವ ಟಿ20 ವಿಶ್ವಕಪ್. ಅಂದರೆ ಮುಂಬರುವ ಐಸಿಸಿ ಟೂರ್ನಿಯ ಸ್ವರೂಪದಲ್ಲೇ ಏಷ್ಯಾಕಪ್ ಅನ್ನು ಆಯೋಜಿಸಲಾಗುತ್ತದೆ.

2023ರ ಏಕದಿನ ವಿಶ್ವಕಪ್​ ಅನ್ನು ಗಮನದಲ್ಲಿರಿಸಿ ಏಷ್ಯಾಕಪ್ 2023 ಅನ್ನು ಏಕದಿನ ಸ್ವರೂಪದಲ್ಲಿ ಆಡಲಾಗಿತ್ತು. 2026ರಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಹೀಗಾಗಿ ಈ ಬಾರಿ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.

ಏಷ್ಯಾಕಪ್ ವೇಳಾಪಟ್ಟಿ:

ಗ್ರೂಪ್- A ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 10 ಭಾರತ vs ಯುಎಇ ದುಬೈ ಸಂಜೆ 7:30
ಸೆಪ್ಟೆಂಬರ್ 12 ಪಾಕಿಸ್ತಾನ್ vs ಒಮಾನ್ ಅಬುಧಾಬಿ ಸಂಜೆ 7:30
ಸೆಪ್ಟೆಂಬರ್ 14 ಭಾರತ vs ಪಾಕಿಸ್ತಾನ್ ದುಬೈ ಸಂಜೆ 7:30
15ನೇ ಸೆಪ್ಟೆಂಬರ್ ಯುಎಇ vs ಒಮಾನ್ ಅಬುಧಾಬಿ ಸಂಜೆ 7:30
17ನೇ ಸೆಪ್ಟೆಂಬರ್ ಪಾಕಿಸ್ತಾನ್ vs ಯುಎಇ ದುಬೈ ಸಂಜೆ 7:30
19ನೇ ಸೆಪ್ಟೆಂಬರ್ ಭಾರತ vs ಒಮಾನ್ ಅಬುಧಾಬಿ ಸಂಜೆ 7:30

ಗ್ರೂಪ್-B ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 9 ಅಫ್ಘಾನಿಸ್ತಾನ್ vs ಹಾಂಗ್ ಕಾಂಗ್ ಅಬುಧಾಬಿ ಸಂಜೆ 7:30
ಸೆಪ್ಟೆಂಬರ್ 11 ಬಾಂಗ್ಲಾದೇಶ್ vs ಹಾಂಗ್ ಕಾಂಗ್ ದುಬೈ ಸಂಜೆ 7:30
ಸೆಪ್ಟೆಂಬರ್ 13 ಶ್ರೀಲಂಕಾ vs ಬಾಂಗ್ಲಾದೇಶ್ ಅಬುಧಾಬಿ ಸಂಜೆ 7:30
15ನೇ ಸೆಪ್ಟೆಂಬರ್ ಶ್ರೀಲಂಕಾ vs ಹಾಂಗ್ ಕಾಂಗ್ ದುಬೈ ಸಂಜೆ 7:30
ಸೆಪ್ಟೆಂಬರ್ 16 ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ ಅಬುಧಾಬಿ ಸಂಜೆ 7:30
18ನೇ ಸೆಪ್ಟೆಂಬರ್ ಶ್ರೀಲಂಕಾ vs ಅಫ್ಘಾನಿಸ್ತಾನ್ ದುಬೈ ಸಂಜೆ 7:30

ಇದನ್ನೂ ಓದಿ: ಇಂಗ್ಲೆಂಡ್ ತಂಡಕ್ಕೆ ಸ್ಫೋಟಕ ದಾಂಡಿಗ ಎಂಟ್ರಿ..!

ಸೂಪರ್-4 ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ ಸಮಯ (IST)
ಸೆಪ್ಟೆಂಬರ್ 20 ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ B ಕ್ವಾಲಿಫೈಯರ್ 2 ದುಬೈ ಸಂಜೆ 7:30
ಸೆಪ್ಟೆಂಬರ್ 21 ಗ್ರೂಪ್ A ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 ದುಬೈ ಸಂಜೆ 7:30
23ನೇ ಸೆಪ್ಟೆಂಬರ್ ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 2 ದುಬೈ ಸಂಜೆ 7:30
24ನೇ ಸೆಪ್ಟೆಂಬರ್ ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 ದುಬೈ ಸಂಜೆ 7:30
25ನೇ ಸೆಪ್ಟೆಂಬರ್ ಗ್ರೂಪ್ A ಕ್ವಾಲಿಫೈಯರ್ 2 vs ಗ್ರೂಪ್ B ಕ್ವಾಲಿಫೈಯರ್ 2 ದುಬೈ ಸಂಜೆ 7:30
ಸೆಪ್ಟೆಂಬರ್ 26 ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 1 ದುಬೈ ಸಂಜೆ 7:30
ಸೆಪ್ಟೆಂಬರ್ 28 ಫೈನಲ್ ದುಬೈ ಸಂಜೆ 7:30