Asia cup 2025 IND vs PAK Live Score: ಭಾರತಕ್ಕೆ ಭರ್ಜರಿ ಜಯ
Asia cup 2025 India vs Pakistan Live Score in Kannada: ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಈವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ 12 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು ಮೂರು ಮ್ಯಾಚ್ಗಳು ಕಾರಣಾಂತರಗಳಿಂದ ರದ್ದಾಗಿದ್ದವು.

ಏಷ್ಯಾಕಪ್ ಟೂರ್ನಿ 14ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಸಿಡಿಸಿದರು. ಈ ಮೂಲಕ ಭಾರತ ತಂಡವು 18.5 ಓವರ್ಗಳಲ್ಲಿ 174 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನಲ್ಲಿ ಪಾಕ್ ಪಡೆಯನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲಿಸಿತ್ತು. ದುಬೈನಲ್ಲೇ ನಡೆದಿದ್ದ ಈ ಮ್ಯಾಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ ಕೇವಲ 129 ರನ್ ಮಾತ್ರ ಕಲೆಹಾಕಿದ್ದರು. ಈ ಗುರಿಯನ್ನು ಟೀಮ್ ಇಂಡಿಯಾ 15.5 ಓವರ್ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.
ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್, ಸುಫಿಯಾನ್ ಮುಖಿಮ್.
LIVE NEWS & UPDATES
-
Asia cup 2025 IND vs PAK Live Score: ಗೆದ್ದು ಬೀಗಿದ ಟೀಮ್ ಇಂಡಿಯಾ
ಪಾಕಿಸ್ತಾನ್ ನೀಡಿದ 172 ರನ್ಗಳ ಗುರಿಯನ್ನು 18.5 ಓವರ್ಗಳಲ್ಲಿ ಚೇಸ್ ಮಾಡಿದ ಟೀಮ್ ಇಂಡಿಯಾ.
ಭಾರತ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ.
ಏಷ್ಯಾಕಪ್ನಲ್ಲಿ 12ನೇ ಬಾರಿ ಪಾಕ್ ಪಡೆಯನ್ನು ಬಗ್ಗು ಬಡಿದೆ ಭಾರತ ತಂಡ.
PAK 171/5 (20)
IND 174/4 (18.5)
-
Asia cup 2025 IND vs PAK Live Score: ಭರ್ಜರಿ ಸಿಕ್ಸ್
ಫಹೀಮ್ ಅಶ್ರಫ್ ಎಸೆದ 18ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ತಿಲಕ್ ವರ್ಮಾ.
ಗೆಲುವಿನತ್ತ ಸಾಗಿದ ಟೀಮ್ ಇಂಡಿಯಾ. ಭಾರತ ತಂಡದ ಗೆಲುವಿಗೆ ಕೇವಲ 9 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್.
IND 163/4 (18)
-
-
Asia cup 2025 IND vs PAK Live Score: ಸಂಜು ಸ್ಯಾಮ್ಸನ್ ಔಟ್
ಹ್ಯಾರಿಸ್ ರೌಫ್ ಎಸೆದ 17ನೇ ಓವರ್ನ 4ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಸಂಜು ಸ್ಯಾಮ್ಸನ್.
17 ಎಸೆತಗಳಲ್ಲಿ ಕೇವಲ 13 ರನ್ಗಳಿಸಿ ವಿಕೆಟ್ ಒಪ್ಪಿಸಿದ ಸಂಜು ಸ್ಯಾಮ್ಸನ್.
ಕ್ರೀಸ್ನಲ್ಲಿ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.
IND 148/4 (16.4)
-
Asia cup 2025 IND vs PAK Live Score: 32 ರನ್ಗಳ ಅವಶ್ಯಕತೆ
ಶಾಹಿನ್ ಶಾ ಅಫ್ರಿದಿ ಎಸೆದ 15ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ತಿಲಕ್ ವರ್ಮಾ.
15 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 140 ರನ್ಗಳು.
ಭಾರತ ತಂಡಕ್ಕೆ ಗೆಲ್ಲಲು ಇನ್ನು 30 ಎಸೆತಗಳಲ್ಲಿ ಕೇವಲ 32 ರನ್ಗಳ ಗುರಿ.
IND 140/3 (15)
-
Asia cup 2025 IND vs PAK Live Score: ಅಭಿಷೇಕ್ ಶರ್ಮಾ ಔಟ್
ಅಬ್ರಾರ್ ಅಹ್ಮದ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ಅಭಿಷೇಕ್ ಶರ್ಮಾ.
ಕೇವಲ 39 ಎಸೆತಗಳಲ್ಲಿ 74 ರನ್ ಚಚ್ಚಿ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ.
ಟೀಮ್ ಇಂಡಿಯಾ ಪರ ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ – ತಿಲಕ್ ವರ್ಮಾ ಬ್ಯಾಟಿಂಗ್.
IND 126/3 (13)
-
-
Asia cup 2025 IND vs PAK Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ
ಹ್ಯಾರಿಸ್ ರೌಫ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್.
3 ಎಸೆತಗಳಲ್ಲಿ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿದ ಟೀಮ್ ಇಂಡಿಯಾ ನಾಯಕ.
ಟೀಮ್ ಇಂಡಿಯಾ ಪರ ಕ್ರೀಸ್ನಲ್ಲಿ ಅಭಿಷೇಕ್ ಶರ್ಮಾ – ತಿಲಕ್ ವರ್ಮಾ ಬ್ಯಾಟಿಂಗ್.
IND 106/2 (10.4)
-
Asia cup 2025 IND vs PAK Live Score: ಟೀಮ್ ಇಂಡಿಯಾ ಮೊದಲ ವಿಕೆಟ್ ಪತನ
ಫಹೀಮ್ ಅಶ್ರಫ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಶುಭ್ಮನ್ ಗಿಲ್
28 ಎಸೆತಗಳಲ್ಲಿ 47 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಗಿಲ್
10 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 105 ರನ್ಗಳು.
ಕ್ರೀಸ್ನಲ್ಲಿ ಅಭಿಷೇಕ್ ಶರ್ಮಾ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.
IND 105/1 (10)
-
Asia cup 2025 IND vs PAK Live Score: ಅರ್ಧಶತಕ ಪೂರೈಸಿದ ಅಭಿಷೇಕ್ ಶರ್ಮಾ
ಸೈಮ್ ಅಯ್ಯೂಬ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಅಭಿಷೇಕ್ ಶರ್ಮಾ.
ಈ ಫೋರ್ನೊಂದಿಗೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ಶರ್ಮಾ.
8 ಓವರ್ಗಳಲ್ಲಿ 96 ರನ್ ಚಚ್ಚಿದ ಟೀಮ್ ಇಂಡಿಯಾ
IND 96/0 (8)
-
Asia cup 2025 IND vs PAK Live Score: ಪವರ್ಪ್ಲೇ ಮುಕ್ತಾಯ
ಸೈಮ್ ಅಯ್ಯೂಬ್ ಎಸೆದ 6ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್.
ಪವರ್ಪ್ಲೇನ ಕೊನೆಯ ಓವರ್ನಲ್ಲಿ 14 ರನ್ ಕಲೆಹಾಕಿದ ಅಭಿಷೇಕ್ ಶರ್ಮಾ – ಶುಭ್ಮನ್ ಗಿಲ್.
ಮೊದಲ 6 ಓವರ್ಗಳಲ್ಲಿ 69 ರನ್ಗಳಿಸಿದ ಟೀಮ್ ಇಂಡಿಯಾ.
IND 69/0 (6)
ಇನ್ನು 84 ಎಸೆತಗಳಲ್ಲಿ 103 ರನ್ಗಳ ಗುರಿ.
-
Asia cup 2025 IND vs PAK Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ
5 ಓವರ್ಗಳಲ್ಲೇ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ.
ಭಾರತ ತಂಡಕ್ಕೆ ಭರ್ಜರಿ ಆರಂಭ ನೀಡಿದ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ.
5 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾದ ಸ್ಕೋರ್ 55 ರನ್ಗಳು.
IND 55/0 (5)
ಟೀಮ್ ಇಂಡಿಯಾಗೆ 172 ರನ್ಗಳ ಗುರಿ ನೀಡಿರುವ ಪಾಕಿಸ್ತಾನ್.
-
Asia cup 2025 IND vs PAK Live Score: ಟೀಮ್ ಇಂಡಿಯಾ ಆರಂಭಿಕರ ಆರ್ಭಟ
ಅಬ್ರಾರ್ ಅಹ್ಮದ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಭಿಷೇಕ್ ಶರ್ಮಾ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್.
4 ಓವರ್ಗಳಲ್ಲಿ 43 ರನ್ ಚಚ್ಚಿದ ಟೀಮ್ ಇಂಡಿಯಾ ಆರಂಭಿಕರು.
IND 43/0 (4)
-
Asia cup 2025 IND vs PAK Live Score: ಶುಭ್ಮನ್ ಶುಭಾರಂಭ
ಶಾಹಿನ್ ಶಾ ಅಫ್ರಿದಿ ಓವರ್ನಲ್ಲಿ 2 ಫೋರ್ ಬಾರಿಸಿದ ಶುಭ್ಮನ್ ಗಿಲ್.
2 ಬೌಂಡರಿಗಳೊಂದಿಗೆ 3ನೇ ಓವರ್ನಲ್ಲಿ 12 ರನ್ ಕಲೆಹಾಕಿದ ಟೀಮ್ ಇಂಡಿಯಾ ಆರಂಭಿಕರು.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ – ಬಲಗೈ ಬ್ಯಾಟರ್ ಶುಭ್ಮನ್ ಗಿಲ್ ಬ್ಯಾಟಿಂಗ್.
IND 31/0 (3)
-
Asia cup 2025 IND vs PAK Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಸೈಮ್ ಅಯ್ಯೂಬ್ ಎಸೆದ 2ನೇ ಓವರ್ನ 4ನೇ ಮತ್ತು 5ನೇ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್.
ದ್ವಿತೀಯ ಓವರ್ನಲ್ಲಿ 10 ರನ್ ಕಲೆಹಾಕಿದ ಟೀಮ್ ಇಂಡಿಯಾ ಆರಂಭಿಕರು.
IND 19/0 (2)
ಕ್ರೀಸ್ನಲ್ಲಿ ಗಿಲ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್
-
Asia cup 2025 IND vs PAK Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಶಾಹಿನ್ ಅಫ್ರಿದಿ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದ ಅಭಿಷೇಕ್ ಶರ್ಮಾ
ಮೊದಲ ಓವರ್ನಲ್ಲಿ 9 ರನ್ ಕಲೆಹಾಕಿದ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ – ಅಭಿಷೇಕ್ ಶರ್ಮಾ ಬ್ಯಾಟಿಂಗ್
IND 9/0 (1)
-
Asia cup 2025 IND vs PAK Live Score: ಪಾಕಿಸ್ತಾನ್ ಇನಿಂಗ್ಸ್ ಅಂತ್ಯ
20 ಓವರ್ಗಳಲ್ಲಿ 171 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಟೀಮ್ ಇಂಡಿಯಾಗೆ 172 ರನ್ಗಳ ಗುರಿ ನೀಡಿದ ಪಾಕ್ ಪಡೆ.
ಪಾಕಿಸ್ತಾನ್ ಪರ ಗರಿಷ್ಠ ಸ್ಕೋರರ್ ಸಾಹಿಬ್ಝಾದ ಫರ್ಹಾನ್ (58).
ಟೀಮ್ ಇಂಡಿಯಾ ಪರ 4 ಓವರ್ಗಳಲ್ಲಿ 33 ರನ್ ನೀಡಿ 2 ವಿಕೆಟ್ ಕಬಳಿಸಿದ ಶಿವಂ ದುಬೆ.
PAK 171/5 (20)
-
Asia cup 2025 IND vs PAK Live Score: ಪಾಕ್ ತಂಡದ 5ನೇ ವಿಕೆಟ್ ಪತನ
ಮೈಮರೆತು ರನೌಟ್ ಆದ ಮೊಹಮ್ಮದ್ ನವಾಝ್.
ಟೀಮ್ ಇಂಡಿಯಾಗೆ 5ನೇ ಯಶಸ್ಸು.
ಜಸ್ಪ್ರೀತ್ ಬುಮ್ರಾ ಎಸೆದ 19ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಫಹೀಮ್.
ಕೊನೆಯ ಓವರ್ ಬಾಕಿ, ಕ್ರೀಸ್ನಲ್ಲಿ ಸಲ್ಮಾನ್ ಅಲಿ ಅಘಾ-ಫಹೀಮ್ ಅಶ್ರಫ್ ಬ್ಯಾಟಿಂಗ್.
PAK 157/5 (19)
-
Asia cup 2025 IND vs PAK Live Score: ಬರೋಬ್ಬರಿ 17 ರನ್ಗಳು
ಶಿವಂ ದುಬೆ ಎಸೆದ 18ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಮೊಹಮ್ಮದ್ ನವಾಝ್.
ಒಂದೇ ಓವರ್ನಲ್ಲಿ 17 ರನ್ ಕಲೆಹಾಕಿದ ನವಾಝ್ – ಸಲ್ಮಾನ್ ಅಲಿ ಅಘಾ.
18 ಓವರ್ಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 146 ರನ್ಗಳು.
PAK 146/4 (18)
-
Asia cup 2025 IND vs PAK Live Score: 4 ಓವರ್ಗಳು ಬಾಕಿ
16 ಓವರ್ಗಳು ಮುಕ್ತಾಯ. ಹದಿನಾರು ಓವರ್ಗಳಲ್ಲಿ 121 ರನ್ ಕಲೆಹಾಕಿರುವ ಪಾಕಿಸ್ತಾನ್.
4 ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ ಬೌಲರ್ಗಳು. ಇನ್ನು ಕೇವಲ 4 ಓವರ್ಗಳು ಬಾಕಿ.
ಪಾಕ್ ಪರ ಕ್ರೀಸ್ನಲ್ಲಿ ಸಲ್ಮಾನ್ ಅಲಿ ಅಘಾ ಹಾಗೂ ಮೊಹಮ್ಮದ್ ನವಾಝ್ ಬ್ಯಾಟಿಂಗ್.
PAK 121/4 (16)
-
Asia cup 2025 IND vs PAK Live Score: ಫರ್ಹಾನ್ ಔಟ್
ಶಿವಂ ದುಬೆ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಕ್ಯಾಚ್ ನೀಡಿದ ಸಾಹಿಬ್ಝಾದ ಫರ್ಹಾನ್.
45 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 58 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ದಾಂಡಿಗ.
PAK 115/4 (14.1)
ಕ್ರೀಸ್ನಲ್ಲಿ ಸಲ್ಮಾನ್ ಅಲಿ ಅಘಾ ಹಾಗೂ ಮೊಹಮ್ಮದ್ ನವಾಝ್ ಬ್ಯಾಟಿಂಗ್.
-
Asia cup 2025 IND vs PAK Live Score: ಪಾಕ್ ತಂಡದ 3ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆದ 14ನೇ ಓವರ್ನ ಮೊದಲ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ ಬಾರಿಸಲು ಯತ್ನಿಸಿದ ಹುಸೈನ್ ತಲಾತ್.
ಚೆಂಡು ನೇರವಾಗಿ ವರುಣ್ ಚಕ್ರವರ್ತಿ ಕೈಗೆ… ಹುಸೈನ್ ತಲಾತ್ (10) ಔಟ್… ಟೀಮ್ ಇಂಡಿಯಾಗೆ ಮೂರನೇ ಯಶಸ್ಸು.
PAK 110/3 (13.1)
-
Asia cup 2025 IND vs PAK Live Score: ಶತಕ ಪೂರೈಸಿದ ಪಾಕಿಸ್ತಾನ್
ಪಾಕಿಸ್ತಾನ್ ತಂಡದಿಂದ ಉತ್ತಮ ಬ್ಯಾಟಿಂಗ್.
13 ಓವರ್ಗಳಲ್ಲಿ 110 ರನ್ ಕಲೆಹಾಕಿದ ಪಾಕಿಸ್ತಾನ್.
ಕೇವಲ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ಟೀಮ್ ಇಂಡಿಯಾ ಬೌಲರ್ಗಳು.
ಪಾಕ್ ಪರ ಕ್ರೀಸ್ನಲ್ಲಿ ಸಾಹಿಬ್ಝಾದ ಫರ್ಹಾನ್ ಹಾಗೂ ಹುಸೈನ್ ತಲಾತ್ ಬ್ಯಾಟಿಂಗ್.
PAK 110/2 (13)
-
Asia cup 2025 IND vs PAK Live Score: ಭಾರತಕ್ಕೆ 2ನೇ ಯಶಸ್ಸು
ಶಿವಂ ದುಬೆ ಎಸೆದ 11ನೇ ಓವರ್ನ 3ನೇ ಎಸೆತದಲ್ಲಿ ಲೈಗ್ ಸೈಡ್ನತ್ತ ಬಾರಿಸಿದ ಸೈಮ್ ಅಯ್ಯೂಬ್.
ಬೌಂಡರಿ ಲೈನ್ನಿಂದ ಓಡಿ ಬಂದು ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಅಭಿಷೇಕ್ ಶರ್ಮಾ.
17 ಎಸೆತಗಳಲ್ಲಿ 21 ರನ್ ಬಾರಿಸಿ ಹೊರ ನಡೆದ ಎಡಗೈ ದಾಂಡಿಗ ಸೈಮ್ ಅಯ್ಯೂಬ್.
ಟೀಮ್ ಇಂಡಿಯಾಗೆ 2ನೇ ಯಶಸ್ಸು .
PAK 93/2 (10.3)
-
Asia cup 2025 IND vs PAK Live Score: ಅರ್ಧಶತಕ ಸಿಡಿಸಿದ ಫರ್ಹಾನ್
ಅಕ್ಷರ್ ಪಟೇಲ್ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸಾಹಿಬ್ಝಾದ ಫರ್ಹಾನ್.
ಭರ್ಜರಿ ಸಿಕ್ಸ್ನೊಂದಿಗೆ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫರ್ಹಾನ್.
ಟೀಮ್ ಇಂಡಿಯಾ ವಿರುದ್ಧ ಇದೇ ಮೊದಲ ಬಾರಿಗೆ ಹಾಫ್ ಸೆಂಚುರಿ ಸಿಡಿಸಿದ ಸಾಹಿಬ್ಝಾದ ಫರ್ಹಾನ್.
PAK 91/1 (10)
-
Asia cup 2025 IND vs PAK Live Score: ಒಂದೇ ಓವರ್ನಲ್ಲಿ 2 ಸಿಕ್ಸ್
ಕುಲ್ದೀಪ್ ಯಾದವ್ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಸೈಮ್ ಅಯ್ಯೂಬ್.
4ನೇ ಎಸೆತದಲ್ಲಿ ಸಾಹಿಬ್ಝಾದ ಫರ್ಹಾನ್ ಬ್ಯಾಟ್ನಿಂದ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್.
ಅರ್ಧಶತಕದ ಜೊತೆಯಾಟ ಪೂರೈಸಿದ ಅಯ್ಯೂಬ್-ಫರ್ಹಾನ್.
PAK 83/1 (9)
-
Asia cup 2025 IND vs PAK Live Score: ಪಾಕಿಸ್ತಾನ್ ಭರ್ಜರಿ ಬ್ಯಾಟಿಂಗ್
ವರುಣ್ ಚಕ್ರವರ್ತಿ ಎಸೆದ 8ನೇ ಓವರ್ನ 3ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಸಿಕ್ಸ್ ಬಾರಿಸಿದ ಫರ್ಹಾನ್.
ಬೌಂಡರಿ ಲೈನ್ನಲ್ಲಿ ಕ್ಯಾಚ್ ಹಿಡಿಯುವ ಅವಕಾಶವನ್ನು ಕೈಚೆಲ್ಲಿದ ಅಭಿಷೇಕ್ ಶರ್ಮಾ… ಸಿಕ್ಸ್.
29 ಎಸೆತಗಳಲ್ಲಿ 39 ರನ್ ಬಾರಿಸಿರುವ ಸಾಹಿಬ್ಝಾದ ಫರ್ಹಾನ್.
PAK 70/1 (8)
-
Asia cup 2025 IND vs PAK Live Score: ಪವರ್ಪ್ಲೇ ಮುಕ್ತಾಯ
ಪವರ್ಪ್ಲೇನಲ್ಲಿ ಅರ್ಧಶತಕ ಪೂರೈಸಿದ ಪಾಕಿಸ್ತಾನ್.
ಬುಮ್ರಾ ಎಸೆದ 6ನೇ ಓವರ್ನಲ್ಲಿ 2 ಫೋರ್ಗಳೊಂದಿಗೆ 13 ರನ್ ಚಚ್ಚಿದ ಫರ್ಹಾನ್.
ಮೊದಲ 6 ಓವರ್ಗಳಲ್ಲಿ 55 ರನ್ ಕಲೆಹಾಕಿದ ಪಾಕಿಸ್ತಾನ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಸಾಹಿಬ್ಝಾದ ಫರ್ಹಾನ್ (29) ಹಾಗೂ ಸೈಮ್ ಅಯ್ಯೂಬ್ (9) ಬ್ಯಾಟಿಂಗ್.
PAK 55/1 (6)
-
Asia cup 2025 IND vs PAK Live Score: ಕ್ಯಾಚ್ ಡ್ರಾಪ್
ವರುಣ್ ಚಕ್ರವರ್ತಿ ಎಸೆದ 5ನೇ ಓವರ್ನ 4ನೇ ಎಸೆತದಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕುಲ್ದೀಪ್ ಯಾದವ್.
ಸೈಮ್ ಅಯ್ಯೂಬ್ಗೆ ಜೀವದಾನ ನೀಡಿದ ಕುಲ್ದೀಪ್ ಯಾದವ್.
5ನೇ ಓವರ್ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಸಾಹಿಬ್ಝಾದ ಫರ್ಹಾನ್ .
PAK 42/1 (5)
-
Asia cup 2025 IND vs PAK Live Score: 10 ರನ್ ನೀಡಿದ ಬುಮ್ರಾ
4ನೇ ಓವರ್ನಲ್ಲಿ 2 ಫೋರ್ಗಳೊಂದಿಗೆ 10 ರನ್ ನೀಡಿದ ಜಸ್ಪ್ರೀತ್ ಬುಮ್ರಾ.
4 ಓವರ್ಗಳ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 36 ರನ್ಗಳು.
ಕ್ರೀಸ್ನಲ್ಲಿ ಬಲಗೈ ದಾಂಡಿಗ ಫರ್ಹಾನ್ ಹಾಗೂ ಎಡಗೈ ದಾಂಡಿಗ ಸೈಮ್ ಅಯ್ಯೂಬ್ ಬ್ಯಾಟಿಂಗ್.
PAK 36/1 (4)
-
Asia cup 2025 IND vs PAK Live Score: ಪಾಕಿಸ್ತಾನ್ ಮೊದಲ ವಿಕೆಟ್ ಪತನ
ಹಾರ್ದಿಕ್ ಪಾಂಡ್ಯ ಎಸೆದ 3ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಫಖರ್ ಝಮಾನ್ (15).
21 ರನ್ಗೆ ಮೊದಲ ವಿಕೆಟ್ ಕಳೆದುಕೊಂಡ ಪಾಕಿಸ್ತಾನ್.
ಕ್ರೀಸ್ನಲ್ಲಿ ಸೈಮ್ ಅಯ್ಯೂಬ್ ಹಾಗೂ ಫರ್ಹಾನ್ ಬ್ಯಾಟಿಂಗ್.
PAK 21/1 (2.3)
-
Asia cup 2025 IND vs PAK Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಜಸ್ಪ್ರೀತ್ ಬುಮ್ರಾ ಎಸೆದ 2ನೇ ಓವರ್ನ 3ನೇ ಮತ್ತು 4ನೇ ಎಸೆತಗಳಲ್ಲಿ ಫೋರ್ ಬಾರಿಸಿದ ಎಡಗೈ ದಾಂಡಿಗ ಫಖರ್ ಝಮಾನ್.
ಕ್ರೀಸ್ನಲ್ಲಿ ಫರ್ಹಾನ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್.
PAK 17/0 (2)
-
Asia cup 2025 IND vs PAK Live Score: ಮೊದಲ ಓವರ್ ಮುಕ್ತಾಯ
ಮೊದಲ ಓವರ್ನಲ್ಲಿ ಕೇವಲ 6 ರನ್ ನೀಡಿದ ಹಾರ್ದಿಕ್ ಪಾಂಡ್ಯ
2,2,2 ರನ್ಗಳೊಂದಿಗೆ 6 ರನ್ ಕಲೆಹಾಕಿದ ಫರ್ಹಾನ್.
ಕ್ರೀಸ್ನಲ್ಲಿ ಫರ್ಹಾನ್ ಹಾಗೂ ಫಖರ್ ಝಮಾನ್ ಬ್ಯಾಟಿಂಗ್.
PAK 6/0 (1)
-
Asia cup 2025 IND vs PAK Live Score: ಪಾಕಿಸ್ತಾನ್ ಇನಿಂಗ್ಸ್ ಆರಂಭ
ಪಾಕಿಸ್ತಾನ್ ತಂಡದ ಆರಂಭಿಕರು: ಸಾಹಿಬ್ಝಾದ ಫರ್ಹಾನ್ ಹಾಗೂ ಫಖರ್ ಝಮಾನ್
ಟೀಮ್ ಇಂಡಿಯಾ ಪರ ಮೊದಲ ಓವರ್: ಹಾರ್ದಿಕ್ ಪಾಂಡ್ಯ.
ಪಾಕಿಸ್ತಾನ್ ಬ್ಯಾಟಿಂಗ್ ಲೈನಪ್: ಸಾಹಿಬ್ಝಾದ ಫರ್ಹಾನ್, ಫಖರ್ ಝಮಾನ್, ಸೈಮ್ ಅಯೂಬ್, ಹುಸೈನ್ ತಲಾತ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ (ನಾಯಕ), ಮೊಹಮ್ಮದ್ ನವಾಝ್, ಶಾಹೀನ್ ಶಾ ಆಫ್ರಿದಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್.
-
Asia cup 2025 IND vs PAK Live Score: ಟೀಮ್ ಇಂಡಿಯಾದಿಂದ ಇಬ್ಬರು ಔಟ್
ಒಮಾನ್ ವಿರುದ್ಧದ ಪಂದ್ಯದ ವೇಳೆ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಇಂದಿನ ಪಂದ್ಯಕ್ಕೆ ಲಭ್ಯ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದ ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್.
ಭಾರತ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
-
Asia cup 2025 IND vs PAK Live Score: ಪಾಕಿಸ್ತಾನ್ ಪ್ಲೇಯಿಂಗ್ 11
ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್: ಸಾಹಿಬ್ಝಾದ ಫರ್ಹಾನ್, ಸೈಮ್ ಅಯೂಬ್, ಫಖರ್ ಝಮಾನ್, ಹುಸೈನ್ ತಲಾತ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ (ನಾಯಕ), ಮೊಹಮ್ಮದ್ ನವಾಝ್, ಶಾಹೀನ್ ಶಾ ಆಫ್ರಿದಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್.
-
Asia cup 2025 IND vs PAK Live Score: ಭಾರತ ಪ್ಲೇಯಿಂಗ್ 11
ಭಾರತ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
-
Asia cup 2025 IND vs PAK Live Score: ಟಾಸ್ ಗೆದ್ದ ಟೀಮ್ ಇಂಡಿಯಾ
ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
Asia cup 2025 IND vs PAK Live Score: ಸೂಪರ್-4 ಪಂದ್ಯ
ಸೂಪರ್-4 ಹಂತದಲ್ಲಿ ಒಟ್ಟು 4 ತಂಡಗಳು ಕಣಕ್ಕಿಳಿಯಲಿವೆ.
ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್.
ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ್ಗೆ ಜಯ.
ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ.
-
Asia cup 2025 IND vs PAK Live: ಗೆದ್ದು ಬೀಗಿದ ಭಾರತ
ಮೊದಲ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡಕ್ಕೆ ಹೀನಾಯ ಸೋಲುಣಿಸಿದ್ದ ಟೀಮ್ ಇಂಡಿಯಾ.
ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದ್ದ ಭಾರತ.
ಇಂದು ಕೂಡ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ.
-
Asia cup 2025 IND vs PAK Live: ಬದ್ಧವೈರಿಗಳ ಕದನಕ್ಕೆ ಕೌಂಟ್ಡೌನ್ ಶುರು
ಏಷ್ಯಾಕಪ್ನ 14ನೇ ಪಂದ್ಯದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಸೂಪರ್-4 ಸುತ್ತಿನ ಅಭಿಯಾನ ಆರಂಭಿಸಲಿದೆ ಉಭಯ ತಂಡಗಳು.
Published On - Sep 21,2025 6:42 PM
