AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025 squads: ಏಷ್ಯಾಕಪ್​ಗೆ ಕೊನೆಗೂ ತಂಡ ಪ್ರಕಟಿಸಿದ ಯುಎಇ; ಎಲ್ಲಾ 8 ತಂಡಗಳ ವಿವರ ಇಲ್ಲಿದೆ

Asia Cup 2025 squads: ಇನ್ನೈದು ದಿನಗಳಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟಿ20 ಟೂರ್ನಿಗೆ ಯುಎಇ ತನ್ನ ತಂಡವನ್ನು ಪ್ರಕಟಿಸಿದೆ. ಮುಹಮ್ಮದ್ ವಾಸಿಮ್ ನಾಯಕತ್ವದಲ್ಲಿ 17 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ 8 ತಂಡಗಳು ಈಗ ಪ್ರಕಟವಾಗಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು A ಮತ್ತು B ನಲ್ಲಿ ಯಾವ ತಂಡಗಳಿವೆ ಮತ್ತು ಪ್ರತಿ ತಂಡದ ಆಟಗಾರರ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

Asia Cup 2025 squads: ಏಷ್ಯಾಕಪ್​ಗೆ ಕೊನೆಗೂ ತಂಡ ಪ್ರಕಟಿಸಿದ ಯುಎಇ; ಎಲ್ಲಾ 8 ತಂಡಗಳ ವಿವರ ಇಲ್ಲಿದೆ
Asia Cup 2025
ಪೃಥ್ವಿಶಂಕರ
|

Updated on:Sep 04, 2025 | 5:31 PM

Share

ಇನ್ನೈದು ದಿನಗಳಲ್ಲಿ ಆರಂಭವಾಗಲಿರುವ ಟಿ20 ಏಷ್ಯಾಕಪ್​ಗೆ (Asia Cup 2025) ಕೊನೆಗೂ ಯುಎಇ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ 17 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ತಂಡದ ನಾಯಕತ್ವವನ್ನು ಮುಹಮ್ಮದ್ ವಾಸಿಮ್ ಅವರಿಗೆ ನೀಡಲಾಗಿದೆ. ಯುಎಇ ತಂಡ ಪ್ರಕಟವಾಗುತ್ತಿದ್ದಂತೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 8 ತಂಡಗಳನ್ನು ಘೋಷಿಸಿದಂತ್ತಾಗಿದೆ. ಮೂರನೇ ಬಾರಿಗೆ ನಡೆಯುತ್ತಿರುವ ಟಿ20 ಏಷ್ಯಾಕಪ್​ನಲ್ಲಿ ಭಾಗವಹಿಸುತ್ತಿರುವ 8 ತಂಡಗಳನ್ನು ತಲಾ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಗ್ರೂಪ್ ಎ ನಲ್ಲಿ ಭಾರತ, ಓಮನ್, ಯುಎಇ ಮತ್ತು ಪಾಕಿಸ್ತಾನ ತಂಡಗಳಿದ್ದರೆ, ಗ್ರೂಪ್​ ಬಿ ನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್ ಕಾಂಗ್ ದೇಶಗಳಿವೆ. ಉಳಿದಂತೆ ಎಲ್ಲಾ ತಂಡಗಳಲ್ಲಿ ಯಾವ್ಯಾವ ಆಟಗಾರರು ಸೇರಿದ್ದಾರೆ ಎಂಬುದರ ವಿವರ ಇಲ್ಲಿದೆ.

ಎಲ್ಲಾ 8 ತಂಡಗಳು ಇಂತಿವೆ

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.

ಟೀಂ ಇಂಡಿಯಾ: ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ.

ಮೀಸಲು ಆಟಗಾರರು: ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್.

ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯ್, ಝಾಕರ್ ಅಲಿ, ಶಮೀಮ್ ಹೊಸೈನ್, ಕಾಜಿ ನೂರುಲ್ ಹಸನ್ ಸೋಹನ್, ಸಾಕಿಬ್ ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ತನ್ಜಿ ಶೈಫ್ ಉದ್ದೀನ್.

ಸ್ಟ್ಯಾಂಡ್‌ಬೈ- ಸೌಮ್ಯ ಸರ್ಕಾರ್, ಮೆಹದಿ ಹಸನ್ ಮಿರಾಜ್, ತನ್ವೀರ್ ಅಹ್ಮದ್ ಮತ್ತು ಹಸನ್ ಮಹಮೂದ್.

ಹಾಂಗ್ ಕಾಂಗ್‌ ತಂಡ: ಯಾಸಿಮ್ ಮುರ್ತಾಜಾ (ನಾಯಕ), ಬಾಬರ್ ಹಯಾತ್ (ಉಪನಾಯಕ), ಜೀಶಾನ್ ಅಲಿ (ವಿಕೆಟ್ ಕೀಪರ್), ಶಾಹಿದ್ ವಾಸಿಫ್ (ವಿಕೆಟ್ ಕೀಪರ್), ನಿಯಾಜಕತ್ ಖಾನ್ ಮೊಹಮ್ಮದ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೊಯೆಟ್ಜಿ, ಅಂಶುಮಾನ್ ರಾತ್, ಎಹ್ಸಾನ್ ಖಾನ್, ಕಲ್ಹಾನ್ ಮಾರ್ಕ್ ಚಲ್ಲು, ಆಯುಷ್ ಆಶಿಶ್ ಶುಕ್ಲಾ, ಮೊಹಮ್ಮದ್ ಐಕ್ವಾಝ್ಲ್ ಖಾನ್ ಮೆಹಮೂದ್, ಅನಸ್ ಖಾನ್, ಹರೂನ್ ಮೊಹಮ್ಮದ್ ಅರ್ಷದ್, ಅಲಿ-ಹಸನ್, ಗಜನ್ಫರ್ ಮೊಹಮ್ಮದ್, ಮೊಹಮ್ಮದ್ ವಹೀದ್.

ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಉಮರ್ಜಾಯ್, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಲ್ಲಾ ಅಶ್ರಫ್, ಮುಹಮ್ಮದೀನ್ ಅಲ್ಲಾ ಅಶ್ರಫ್, ಗಜನ್‌ಫರ್, ನೂರ್ ಅಹ್ಮದ್, ಫರೀದ್ ಮಲಿಕ್, ನವೀನ್-ಉಲ್-ಹಕ್ ಮತ್ತು ಫಜಲ್ಹಕ್ ಫಾರೂಕಿ.

ಮೀಸಲು ಆಟಗಾರರು: ವಫಿವುಲ್ಲಾ ತಾರಖಿಲ್, ನಂಗ್ಯಾಲ್ ಖರೋಟೆ, ಅಬ್ದುಲ್ಲಾ ಅಹ್ಮದ್ಝೈ.

ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಮೊಹಮ್ಮದ್ ನದೀಮ್, ಹಮ್ಮದ್ ಮಿರ್ಜಾ, ಅಮೀರ್ ಕಲೀಮ್, ಸುಫಿಯಾನ್ ಮಹಮೂದ್, ಆಶಿಶ್ ಒಡೆದ್ರಾ, ಶಕೀಲ್ ಅಹ್ಮದ್, ಆರ್ಯನ್ ಬಿಶ್ತ್, ಸಮಯ್ ಶ್ರೀವಾಸ್ತವ, ಸುಫಿಯಾನ್ ಯೂಸುಫ್, ನದೀಮ್ ಖಾನ್, ಜಿಕ್ರಿಯಾ ಇಸ್ಲಾಂ, ಫೈಸಲ್ ಶಾಹ್, ಕರಣ್ ಮುಹಮ್ಮದ್ ಎ ಮತ್ತು ಕರಣ್ ಸೋನಾವಲೆ

ಶ್ರೀಲಂಕಾ ತಂಡ: ಚರಿತ್ ಅಸಲಂಕಾ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕಮಿಲ್ ಮಿಶ್ರಾ, ದಸುನ್ ಶನಕ, ಕಮೆಂದು ಮೆಂಡಿಸ್, ವನಿಂದು ಹಸರಂಗ, ನುವಾನಿಡು ಫೆರ್ನಾಂಡೋ, ದುನಿತ್ ವೆಲ್ಲಾಲಗೆ, ಚಾಮಿಕ ಕರುಣಾರತ್ನೆ, ಮಹೇಶ್ ತೀಕ್ಷಣ, ಮಥೀಶ ಪತಿರಾನ, ನುವಾನ್ ತುಷಾರ, ದುಷ್ಮಂತ ಚಮೀರ, ಬಿನೌರ ಫೆರ್ನಾಂಡೋ.

ಯುಎಇ ತಂಡ: ಮುಹಮ್ಮದ್ ವಾಸಿಂ (ನಾಯಕ), ಅಲಿಶಾನ್ ಶರಾಫು, ಆರ್ಯನ್ಶ್ ಶರ್ಮಾ, ಆಸಿಫ್ ಖಾನ್, ಧ್ರುವ ಪರಾಶರ್, ಇತಾ ಡಿಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕಿ, ಮತಿಯುಲ್ಲಾ ಖಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವದುಲ್ಲಾ, ಮುಹಮ್ಮದ್ ಜೊಹೆಬ್, ರಾಹುಲ್ ಚೋಪ್ರಾ, ರೋಹಿದ್ ಸಿಂಗ್ ಮತ್ತು ಸಿಮ್ಗ್ರಾನ್‌ಜಿತ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Thu, 4 September 25

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ