AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಒಂದು ಪಂದ್ಯ… ಮೂರು ತಂಡಗಳ ಫೈನಲ್ ಭವಿಷ್ಯ..!

Asia Cup 2025: ಏಷ್ಯಾಕಪ್ 2025ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿದಿದ್ದವು. ಈ ಎಂಟು ತಂಡಗಳಲ್ಲಿ ಈಗಾಗಲೇ 5 ಟೀಮ್​ಗಳು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಏಷ್ಯಾಕಪ್ ಫೈನಲ್ ರೇಸ್​ನಲ್ಲಿ ಉಳಿದಿರುವುದು ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್. ಈ ಮೂರು ತಂಡಗಳಲ್ಲಿ ಎರಡು ಟೀಮ್ ಫೈನಲ್ ಆಡುವುದು ಖಚಿತ.

Asia Cup 2025: ಒಂದು ಪಂದ್ಯ... ಮೂರು ತಂಡಗಳ ಫೈನಲ್ ಭವಿಷ್ಯ..!
Asia Cup 2025
ಝಾಹಿರ್ ಯೂಸುಫ್
|

Updated on: Sep 24, 2025 | 12:54 PM

Share

ಏಷ್ಯಾಕಪ್ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 15 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 3 ಮ್ಯಾಚ್​ಗಳು ಮಾತ್ರ. ಈ ಮೂರು ಪಂದ್ಯಗಳೊಂದಿಗೆ ಈ ಬಾರಿಯ ಏಷ್ಯಾಕಪ್​ನಲ್ಲಿ ಫೈನಲ್ ಆಡಲಿರುವ ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

ಅದರಲ್ಲೂ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಫೈನಲ್​ಗೆ ಎಂಟ್ರಿ ಕೊಡುವುದು ಖಚಿತ. ಒಂದು ವೇಳೆ ಬಾಂಗ್ಲಾದೇಶ್ ತಂಡ ಜಯ ಸಾಧಿಸಿದರೆ, ಅತ್ತ ಪಾಕಿಸ್ತಾನ್ ತಂಡದ ಫೈನಲ್ ಹಾದಿ ಕಠಿಣವಾಗಲಿದೆ.  ಹಾಗಿದ್ರೆ ಮೂರು ತಂಡಗಳ ಫೈನಲ್ ಸಮೀಕರಣ ಹೇಗಿದೆ ಎಂದು ನೋಡೋಣ..

ಭಾರತ: ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಪಾಕಿಸ್ತಾನ್ ತಂಡವು ಈಗಾಗಲೇ 2 ಪಂದ್ಯಗಳನ್ನಾಡಿದ್ದು, ಮುಂದಿನ ಮ್ಯಾಚ್​ನಲ್ಲಿ ಗೆದ್ದರೂ ಒಟ್ಟು 4 ಅಂಕಗಳನ್ನು ಮಾತ್ರ ಪಡೆಯಲಿದೆ. ಅತ್ತ ಪಾಕ್ ತಂಡ ತನ್ನ ಕೊನೆಯ ಪಂದ್ಯವಾಡಬೇಕಿರುವುದು ಬಾಂಗ್ಲಾದೇಶ್ ವಿರುದ್ಧ. ಅಂದರೆ ಪಾಕ್ ಅಥವಾ ಬಾಂಗ್ಲಾದೇಶ್ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದರೂ ಭಾರತ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿಯೇ ಭಾರತ ತಂಡವು ಮುಂದಿನ 2 ಮ್ಯಾಚ್​ಗಳಲ್ಲಿ ಒಂದು ಗೆಲುವು ದಾಖಲಿಸಿದರೆ ಫೈನಲ್​ಗೆ ಎಂಟ್ರಿ ಕೊಡುವುದು ಖಚಿತ. ಅದರಂತೆ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಟೀಮ್ ಇಂಡಿಯಾ ಗೆದ್ದರೆ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯಲಿದೆ.

ಬಾಂಗ್ಲಾದೇಶ್: ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಗೆದ್ದರೂ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡುವುದಿಲ್ಲ. ಏಕೆಂದರೆ ಪಾಕಿಸ್ತಾನ್ ಹಾಗೂ ಭಾರತ ತಂಡಕ್ಕೆ ಒಂದೊಂದು ಪಂದ್ಯಗಳಿವೆ. ಇತ್ತ ಟೀಮ್ ಇಂಡಿಯಾ ಇಂದು ಸೋತರೂ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್​ಗೇರಲು ಅವಕಾಶವಿದೆ. ಆದರೆ ಬಾಂಗ್ಲಾದೇಶ್ ತಂಡ ಫೈನಲ್​ಗೇರಲು ಭಾರತ ಮತ್ತು ಪಾಕಿಸ್ತಾನ್ ವಿರುದ್ಧ ಗೆಲ್ಲಲೇಬೇಕು. ಒಂದು ವೇಳೆ ಬಾಂಗ್ಲಾದೇಶ್ ತಂಡವು ಭಾರತದ ವಿರುದ್ಧ ಗೆದ್ದು ಪಾಕಿಸ್ತಾನ್ ವಿರುದ್ಧ ಸೋತರೂ ಫೈನಲ್​ಗೆ ಅರ್ಹತೆ ಪಡೆಯಬಹುದು. ಆದರೆ ಇಂತಹದೊಂದು ಅವಕಾಶ ಸೃಷ್ಟಿಯಾಗಲು ಬಾಂಗ್ಲಾದೇಶ್ ತಂಡವು ಪಾಕಿಸ್ತಾನ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ.

ಪಾಕಿಸ್ತಾನ್: ಪಾಕ್ ಪಡೆಯು ಫೈನಲ್​ಗೇರಲು ಬಾಂಗ್ಲಾದೇಶ್ ವಿರುದ್ಧ ಗೆಲ್ಲಲೇಬೇಕು. ಅದರಲ್ಲೂ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ್ ಸೋತರೆ ಪಾಕಿಸ್ತಾನ್ ತಂಡದ ಹಾದಿ ಸುಗಮವಾಗಲಿದೆ. ಏಕೆಂದರೆ ಬಾಂಗ್ಲಾ ಪಡೆ ಸೋತರೆ ನೆಟ್ ರನ್ ರೇಟ್​​ನಲ್ಲಿ ಇಳಿಕೆಯಾಗಲಿದೆ. ಅತ್ತ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಸೋಲಿಸಿ 4 ಅಂಕಗಳೊಂದಿಗೆ ನೇರವಾಗಿ ಫೈನಲ್​ಗೇರಬಹುದು. ಒಂದು ವೇಳೆ ಪಾಕಿಸ್ತಾನ್ ತಂಡವು ಕೊನೆಯ ಪಂದ್ಯದಲ್ಲಿ ಸೋತರೆ ಬಾಂಗ್ಲಾದೇಶ್ ತಂಡ ಫೈನಲ್​ಗೆ ಎಂಟ್ರಿ ಕೊಡಲಿದೆ.

ಇದನ್ನೂ ಓದಿ: ಡಕ್​ಮ್ಯಾನ್… ಅನಗತ್ಯ ವಿಶ್ವ ದಾಖಲೆ ಬರೆದ ದಸುನ್ ಶಾನಕ

ಹೀಗಾಗಿಯೇ ಸೂಪರ್-4 ಹಂತದ ಕೊನೆಯ ಮೂರು ಪಂದ್ಯಗಳು ಈ ಬಾರಿಯ ಫೈನಲಿಸ್ಟ್​ಗಳನ್ನು ನಿರ್ಧರಿಸಲಿದೆ. ಅದರಲ್ಲೂ ಇಂದಿನ ಮ್ಯಾಚ್​ನಲ್ಲಿ ಬಾಂಗ್ಲಾದೇಶ್ ವಿರುದ್ಧ ಭಾರತ ತಂಡ ಗೆದ್ದರೆ ಟೀಮ್ ಇಂಡಿಯಾ ಫೈನಲ್​ ಆಡುವುದು ಖಚಿತ. ಅತ್ತ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯವು ಸೆಮಿಫೈನಲ್ ಪೈಪೋಟಿಯಾಗಿ ಮಾರ್ಪಡಲಿದೆ.

ಏಷ್ಯಾಕಪ್ ಸೂಪರ್-4 ಪಾಯಿಂಟ್ಸ್ ಟೇಬಲ್ (ದಿನಾಂಕ 24/9/25)

ತಂಡ ಪಂದ್ಯಗಳು ಗೆಲುವು ಸೋಲು ಅಂಕಗಳು ನೆಟ್​ ರನ್​ ರೇಟ್
ಭಾರತ 1 1 0 2 +0.689
ಪಾಕಿಸ್ತಾನ್ 2 1 1 2 +0.226
ಬಾಂಗ್ಲಾದೇಶ್ 1 1 0 2 +0.121
ಶೀಲಂಕಾ 2 0 2 0 -0.590

‘ಸಾಯೋವರೆಗೆ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿದ ಗಿಲ್ಲಿ
‘ಸಾಯೋವರೆಗೆ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿದ ಗಿಲ್ಲಿ
ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ
ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ
ಬಿಗ್​​ಬಾಸ್ ಮನೆಯ ಮುಂದೆ ಹೇಗಿದೆ ಪರಿಸ್ಥಿತಿ: ವಿಡಿಯೋ ನೋಡಿ
ಬಿಗ್​​ಬಾಸ್ ಮನೆಯ ಮುಂದೆ ಹೇಗಿದೆ ಪರಿಸ್ಥಿತಿ: ವಿಡಿಯೋ ನೋಡಿ
ಬೋಡೋ ಸಾಂಸ್ಕೃತಿಕ ವೈಭವ ವೀಕ್ಷಿಸಿದ ಪ್ರಧಾನಿ ಮೋದಿ
ಬೋಡೋ ಸಾಂಸ್ಕೃತಿಕ ವೈಭವ ವೀಕ್ಷಿಸಿದ ಪ್ರಧಾನಿ ಮೋದಿ
‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ