Asia Cup 2022: ಏಷ್ಯಾಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿರುವ ಟಾಪ್ 5 ಕ್ರಿಕೆಟಿಗರಿವರು

Asia Cup 2022: ಆಗಸ್ಟ್ 28 ರ ಭಾನುವಾರ ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಕದನ ಆರಂಭವಾಗಲಿದೆ. ಹೀಗಾಗಿ ಎರಡೂ ತಂಡಗಳ ಆಟಗಾರರು ಮೈದಾನದಲ್ಲಿ ಶ್ರಮಿಸುತ್ತಿದ್ದಾರೆ.

Asia Cup 2022: ಏಷ್ಯಾಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿರುವ ಟಾಪ್ 5 ಕ್ರಿಕೆಟಿಗರಿವರು
Virat Kohli
Follow us
| Updated By: ಪೃಥ್ವಿಶಂಕರ

Updated on:Aug 25, 2022 | 5:07 PM

ಏಷ್ಯಾಕಪ್‌ (Asia Cup 2022) ಇತಿಹಾದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದು,  ಆಟಗಾರರು ಒಂದಲ್ಲ ಒಂದು ರೀತಿಯ ದಾಖಲೆಗಳನ್ನು ಈ ಟೂರ್ನಿಯಲ್ಲಿ ಬರೆದಿದ್ದಾರೆ. ಇದೀಗ ಮತ್ತೊಮ್ಮೆ ಏಷ್ಯಾಕಪ್​ನಲ್ಲಿ ಭಾರತದ ಆಟಗಾರರಿಗೆ ಅತ್ಯುತ್ತಮ ಪ್ರದರ್ಶನ ತೋರುವ ಅವಕಾಶ ಸಿಕ್ಕಿದೆ. ಏಷ್ಯಾಕಪ್‌ನಲ್ಲಿ ಭಾರತದ ಆಟಗಾರರ ಪ್ರದರ್ಶನದ ಮೇಲೆ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಕಣ್ಣು ಕೂಡ ನೆಟ್ಟಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಭಾರತ ಕ್ರಿಕೆಟ್ ತಂಡದ ಅಭಿಯಾನ ಆರಂಭವಾಗಲಿದೆ. ಇದಕ್ಕೂ ಮುನ್ನ ಏಷ್ಯಾಕಪ್‌ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿರುವ ಕ್ರಿಕೆಟಿಗರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಆಗಸ್ಟ್ 28 ರ ಭಾನುವಾರ ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಕದನ ಆರಂಭವಾಗಲಿದೆ. ಹೀಗಾಗಿ ಎರಡೂ ತಂಡಗಳ ಆಟಗಾರರು ಮೈದಾನದಲ್ಲಿ ಶ್ರಮಿಸುತ್ತಿದ್ದಾರೆ. ಉಭಯ ತಂಡಗಳು ಪರಸ್ಪರ ಸೆಣಸಾಟಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಿವೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಸ್ಕೋರ್ ಮಾಡುವ ಆಟಗಾರ ಯಾರು ಎಂಬ ಪ್ರಶ್ನೆ ಈಗ ಸಹಜವಾಗಿಯೇ ಉದ್ಭವಿಸುತ್ತದೆ. ಆದರೆ ಈ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೊದಾಗ ಸಿಕ್ಕ ಉತ್ತರವೇ ಕಿಂಗ್ ಕೊಹ್ಲಿ. ಇದಕ್ಕೆ ಪೂರಕವೆಂಬಂತೆ ಕೊಹ್ಲಿ ಏಷ್ಯಾಕಪ್ ಪಂದ್ಯವೊಂದರಲ್ಲಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಯಾರಿದ್ದಾರೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಅಗ್ರ ಐದು ಆಟಗಾರರ ಪಟ್ಟಿ

ಇದನ್ನೂ ಓದಿ
Image
Asia Cup 2022: ಪಾಕ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ನಿರ್ಮಿಸಲಿರುವ ಶತಕದ ದಾಖಲೆಗಳಿವು..!
Image
Asia Cup 2022: ಏಷ್ಯಾಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿರುವ ಕ್ರಿಕೆಟಿಗರಿವರು
Image
Hardik Pandya: ಖಾಸಗಿ ಜೆಟ್‌, ದುಬಾರಿ ಕಾರು; ಹಾರ್ದಿಕ್ ಪಾಂಡ್ಯರ ಐಷಾರಾಮಿ ಜೀವನದ ವಿಡಿಯೋ ನೋಡಿ

ವಿರಾಟ್ ಕೊಹ್ಲಿ, ಭಾರತ: ಕೊಹ್ಲಿ, ಏಷ್ಯಾಕಪ್ 2012 ರಲ್ಲಿ ಪಾಕಿಸ್ತಾನದ ವಿರುದ್ಧ ಸಂಚಲನವನ್ನು ಸೃಷ್ಟಿಸಿದ್ದರು. ಕೊಹ್ಲಿಯ ಅಂದಿನ ಅಬ್ಬರವನ್ನು ಈಗ ನೆನೆದರು ಪಾಕಿಸ್ತಾನಕ್ಕೆ ನಡುಕ ಶುರುವಾಗುತ್ತದೆ. ಆ ಪಂದ್ಯದಲ್ಲಿ ಕೊಹ್ಲಿ 183 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. 2014ರಲ್ಲಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದ್ದ ಕೊಹ್ಲಿ, ಬಾಂಗ್ಲಾದೇಶ ವಿರುದ್ಧ 136 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಈ ಇನ್ನಿಂಗ್ಸ್ ಕೂಡ ಅಗ್ರ ಐದರಲ್ಲಿ ಸ್ಥಾನ ಪಡೆದಿದೆ.

ಮುಶ್ಫಿಕರ್ ರಹಮಾನ್, ಬಾಂಗ್ಲಾದೇಶ: ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಬಾಂಗ್ಲಾದೇಶದ ಆಟಗಾರನ ಪಾಲಾಗಿದೆ. ಮುಷ್ಫಿಕರ್ ರೆಹಮಾನ್ 2018 ರಲ್ಲಿ ಶ್ರೀಲಂಕಾ ವಿರುದ್ಧ 144 ರನ್​ಗಳ ಇನಿಂಗ್ಸ್ ಆಡಿದ್ದರು.

ಯೂನುಸ್ ಖಾನ್, ಪಾಕಿಸ್ತಾನ: ಈ ಪಟ್ಟಿಯಲ್ಲಿ ಪಾಕಿಸ್ತಾನದ ಯೂನುಸ್ ಖಾನ್ ಜಂಟಿಯಾಗಿ ಎರಡನೇ ಸ್ಥಾನ ಪಡೆದಿದ್ದಾರೆ. ಅವರು 2004 ರಲ್ಲಿ ಕೊಲಂಬೊದಲ್ಲಿ ಹಾಂಗ್​ಕಾಂಗ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು.

ಶೋಯೆಬ್ ಮಲಿಕ್, ಪಾಕಿಸ್ತಾನ: ಮೂರನೇ ಸ್ಥಾನದಲ್ಲಿರುವ ಮತ್ತೊಬ್ಬ ಪಾಕ್ ಕ್ರಿಕೆಟಿಗ ಮಲಿಕ್, 2004 ರಲ್ಲಿ ಭಾರತದ ವಿರುದ್ಧ 143 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಈ ಇನ್ನಿಂಗ್ಸ್​ನಲ್ಲಿ ಮಲಿಕ್, 18 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಸೌರವ್ ಗಂಗೂಲಿ, ಭಾರತ: ದಾದಾ 2000ನೇ ಇಸವಿಯಲ್ಲಿ ಬಾಂಗ್ಲಾದೇಶದ ವಿರುದ್ಧ 135 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದ್ದರು. ಈ ಇನ್ನಿಂಗ್ಸ್‌ನಲ್ಲಿ ದಾದಾ 7 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದರು.

ಈ ಹಿಂದೆಯೂ ಟಿ20 ಮಾದರಿಯಲ್ಲಿ ಏಷ್ಯಾಕಪ್ ಆಯೋಜಿಸಲಾಗಿತ್ತು

ಐಸಿಸಿ 2015 ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಆಕಾರವನ್ನು ಕಡಿಮೆ ಮಾಡಿದ ನಂತರ, ಏಷ್ಯಾಕಪ್ ಪಂದ್ಯಾವಳಿಯನ್ನು ODI ಮತ್ತು T20 ಸ್ವರೂಪಗಳಲ್ಲಿ ರೋಟೆಷನ್ ಆಧಾರದ ಮೇಲೆ ಆಯೋಜಿಸಲು ನಿರ್ಧರಿಸಲಾಯಿತು. ಈ ಮೊದಲು ಟಿ20 ಮಾದರಿಯಲ್ಲಿ ಒಮ್ಮೆ ಮಾತ್ರ ಏಷ್ಯಾಕಪ್ ಆಯೋಜಿಸಲಾಗಿದ್ದು, 2016 ರಲ್ಲಿ ಚುಟುಕು ಮಾದರಿಲ್ಲಿ ಪಂದ್ಯಾವಳಿ ನಡೆದಿತ್ತು. ಇದರಲ್ಲಿ ಭಾರತ ತಂಡದ ಪ್ರಸ್ತುತ ನಿಯಮಿತ ನಾಯಕರಾಗಿರುವ ರೋಹಿತ್ ಶರ್ಮಾ ಅತ್ಯುತ್ತಮ ಸ್ಕೋರ್ ದಾಖಲಿಸಿದ್ದರು. ಮೊದಲ ಸೀಸನ್​ನಲ್ಲಿ ರೋಹಿತ್ ಶರ್ಮಾ 83 ರನ್‌ಗಳ ಇನ್ನಿಂಗ್ಸ್‌ ಆಡಿದ್ದರೆ, ಶಬ್ಬೀರ್ ರೆಹಮಾನ್ 80 ರನ್, ದಿಲ್ಶನ್ 75 ಮತ್ತು ಶೋಯೆಬ್ ಮಲಿಕ್ 63 ಮತ್ತು ಶಿಖರ್ ಧವನ್ 60 ರನ್ ಗಳಿಸಿದ್ದರು.

Published On - 5:06 pm, Thu, 25 August 22