AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಪಾಕ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ನಿರ್ಮಿಸಲಿರುವ ಶತಕದ ದಾಖಲೆಗಳಿವು..!

Asia Cup 2022: ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಶತಕ ನೋಡಲು ಜನ ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನು ಕಂಡು 1000 ದಿನಗಳು ಕಳೆದಿವೆ.

Asia Cup 2022: ಪಾಕ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ನಿರ್ಮಿಸಲಿರುವ ಶತಕದ ದಾಖಲೆಗಳಿವು..!
ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Aug 25, 2022 | 3:08 PM

Share

ಏಷ್ಯನ್ ಕ್ರಿಕೆಟ್ (Asia Cup 2022) ಹಬ್ಬ ಆಗಸ್ಟ್ 27 ರಿಂದ ಆರಂಭವಾಗುತ್ತಿದ್ದು, ಬದ್ಧವೈರಿಗಳ ಕಾಳಗ ಆ. 28 ರಂದು ನಡೆಯಲಿದೆ. ಒಂದೆಡೆ ಭಾರತ- ಪಾಕ್ (India-Pakistan) ನಡುವಿನ ಕ್ರಿಕೆಟ್ ಕದನ ನೋಡಲು ಅಭಿಮಾನಿಗಳು ಕಾತುರರಾಗಿದ್ದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ (Virat Kohli) ವಿಶೇಷ ಶತಕ ಬಾರಿಸುವುದು ಗ್ಯಾರಂಟಿ. ಇದೇ ಭಾನುವಾರ, ಭಾರತೀಯ ಕಾಲಮಾನ ರಾತ್ರಿ 7:30 ಕ್ಕೆ, ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಎದುರಾಳಿಯಾಗುತ್ತಿದ್ದಂತೆ, ವಿರಾಟ್ ಕೊಹ್ಲಿ ಶತಕ ಮತ್ತು ಇತಿಹಾಸ ಎರಡನ್ನೂ ಮಾಡುವುದನ್ನು ನಾವು ಕಾಣಬಹುದು. ವಾಸ್ತವವಾಗಿ ಕೊಹ್ಲಿ, ಪಾಕ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ಇಳಿದೊಡನೆ ಅವರ ಹೆಸರಿನಲ್ಲಿ ದೊಡ್ಡ ಇತಿಹಾಸ ಸೃಷ್ಟಿಯಾಗಲಿದೆ.

ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಶತಕ ನೋಡಲು ಜನ ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನು ಕಂಡು 1000 ದಿನಗಳು ಕಳೆದಿವೆ. ಆದರೆ, ಆಗಸ್ಟ್ 28 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಕೊಹ್ಲಿ ಶತಕದ ಪಂದ್ಯವನ್ನಾಡಲಿದ್ದಾರೆ. ಜೊತೆಗೆ ಇನ್ನು ಹಲವು ದಾಖಲೆಗಳನ್ನು ಸಹ ಬರೆಯಲಿದ್ದಾರೆ.

– ವಿರಾಟ್ ಕೊಹ್ಲಿ ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಖಾಡಕ್ಕಿಳಿದ ತಕ್ಷಣ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ 100 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿರುವ ಕ್ರಿಕೆಟಿಗರಿವರು
Image
Asia Cup 2022: ಕಿಂಗ್ ಕೊಹ್ಲಿ ಎಂದರೆ ಪಾಕ್ ತಂಡಕ್ಕೆ ಯಾಕಷ್ಟು ಭಯ? ಈ ರೆಕಾರ್ಡ್​ ನೋಡಿ
Image
Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು

– ವಿರಾಟ್ ಕೊಹ್ಲಿ ಈ ಮೊದಲು ಅಂತಾರಾಷ್ಟ್ರೀಯ ಪಿಚ್‌ನಲ್ಲಿ ಏಕದಿನ ಪಂದ್ಯಗಳಲ್ಲಿ ಶತಕ ಪೂರೈಸಿದರು. 11 ಜೂನ್ 2013 ರಂದು ಕೊಹ್ಲಿ ತಮ್ಮ 100 ನೇ ಏಕದಿನ ಪಂದ್ಯವನ್ನು ಆಡಿದ್ದರು. ಈ ಪಂದ್ಯವು ಇಂಗ್ಲೆಂಡ್‌ನಲ್ಲಿ ಆಡಿದ ಚಾಂಪಿಯನ್ಸ್ ಟ್ರೋಫಿಯ ಪಂದ್ಯವಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಶತಕದ ಪಂದ್ಯವನ್ನು ಆಡಿದ್ದರು.

– ಜೊತೆಗೆ 4 ಮಾರ್ಚ್ 2022 ರಂದು ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ 100 ನೇ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿ ತಮ್ಮ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದರು.

– ಇದೀಗ 5 ತಿಂಗಳ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತೊಂದು ಶತಕ ಪೂರೈಸಲಿದ್ದಾರೆ. ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧ ದುಬೈನಲ್ಲಿ ಆಡಲಿರುವ ಪಂದ್ಯ ಅವರ T20I ವೃತ್ತಿಜೀವನದ 100 ನೇ ಪಂದ್ಯವಾಗಿದೆ.

– ವಿರಾಟ್ ಕೊಹ್ಲಿ ಇದುವರೆಗೆ 99 ಟಿ20 ಪಂದ್ಯಗಳಲ್ಲಿ 3308 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಸರಾಸರಿ 50 ಕ್ಕಿಂತ ಹೆಚ್ಚು ಮತ್ತು ಸ್ಟ್ರೈಕ್ ರೇಟ್ 137.66 ಆಗಿದೆ. ಅಂತರಾಷ್ಟ್ರೀಯ ಟಿ20ಯಲ್ಲಿ ಅವರ ಹೆಸರಿನಲ್ಲಿ ಒಂದೇ ಒಂದು ಶತಕ ಕೂಡ ದಾಖಲಾಗಿಲ್ಲ. ಆದರೆ 50 ಕ್ಕೂ ಅಧಿಕ ರನ್​ಗಳನ್ನು 30 ಬಾರಿ ಸಿಡಿಸಿದ್ದಾರೆ.