Irfan Pathan: ಅನುಚಿತವಾಗಿ ವರ್ತಿಸಿದ ಏರ್​ಲೈನ್ಸ್ ಸಿಬ್ಬಂದಿಗಳು: ಕ್ರಮಕ್ಕೆ ಆಗ್ರಹಿಸಿದ ಇರ್ಫಾನ್ ಪಠಾಣ್

Irfan Pathan: ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕಾಮೆಂಟೇಟರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

Irfan Pathan: ಅನುಚಿತವಾಗಿ ವರ್ತಿಸಿದ ಏರ್​ಲೈನ್ಸ್ ಸಿಬ್ಬಂದಿಗಳು: ಕ್ರಮಕ್ಕೆ ಆಗ್ರಹಿಸಿದ ಇರ್ಫಾನ್ ಪಠಾಣ್
irfan pathan family
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 25, 2022 | 2:55 PM

ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಅವರು ಸಾಮಾಜಿಕ ಜಾಲತಾಣದಲ್ಲಿ ವಿಸ್ತಾರಾ ಏರ್‌ಲೈನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನಗಳ ಹಿಂದೆಯಷ್ಟೇ ಏಷ್ಯಾಕಪ್​ ಕಾಮೆಂಟ್ರಿ ಪ್ಯಾನೆಲ್​ ಸೇರಲು ಇರ್ಫಾನ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಿಸ್ತಾರಾ ಏರ್​ಲೈನ್ಸ್​ನಲ್ಲಿ ಯುಎಇಗೆ ಪ್ರಯಾಣಿಸಿದ್ದಾರೆ. ಈ ವೇಳೆ ಏರ್​ಲೈನ್ಸ್ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಒರಟಾಗಿ ವರ್ತಿಸಿದ್ದರು. ಇದರಿಂದ ನನ್ನ ಕುಟುಂಬ ಸೇರಿದಂತೆ ಅನೇಕ ಪ್ರಯಾಣಿಕರಿಗೆ ತೊಂದರೆಯಾಗಿತ್ತು ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಇರ್ಫಾನ್ ಪಠಾಣ್, ನಾನು ಮುಂಬೈನಿಂದ ದುಬೈಗೆ ವಿಸ್ತಾರಾ ಫ್ಲೈಟ್ ಯುಕೆ-201 ನಲ್ಲಿ ಪ್ರಯಾಣಿಸಿದ್ದೆ. ಇದೇ ವೇಳೆ ಚೆಕ್-ಇನ್ ಕೌಂಟರ್‌ನಲ್ಲಿ ನನಗೆ ತುಂಬಾ ಕೆಟ್ಟ ಅನುಭವವಾಯಿತು. ವಿಸ್ತಾರಾ ಸಿಬ್ಬಂದಿಗಳು ನನ್ನ ಟಿಕೆಟ್ ಅನ್ನು ತಪ್ಪಾಗಿ ಡೌನ್‌ಗ್ರೇಡ್ ಮಾಡಿದ್ದರು. ಆದರೆ ಅದು ಕನ್ಫರ್ಮ್ ಬುಕಿಂಗ್ ಆಗಿತ್ತು. ಇದಕ್ಕಾಗಿ ಕೌಂಟರ್ ನಲ್ಲಿ ಒಂದೂವರೆ ಗಂಟೆ ಕಾಯಬೇಕಾಯಿತು. ನನ್ನೊಂದಿಗೆ ನನ್ನ ಹೆಂಡತಿ, 8 ತಿಂಗಳ ಮಗು ಮತ್ತು 5 ವರ್ಷದ ಮಗು ಕೂಡ ಈ ಮೂಲಕ ಈ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

ಅಷ್ಟೇ ಅಲ್ಲದೆ ಗ್ರೌಂಡ್ ಸ್ಟಾಫ್​ಗಳು ವರ್ತನೆಯು ತುಂಬಾ ಅಸಭ್ಯವಾಗಿತ್ತು. ಸುಮ್ಮನೆ ಬೈಯುತ್ತಾ ಕೆಲಸ ಮಾಡುತ್ತಿದ್ದರು. ಅವರು ಏಕೆ ದೊಡ್ಡ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಿದರು ಮತ್ತು ಆ ಬಳಿಕ ಅದನ್ನು ನಿರ್ವಾಹಕರು ಹೇಗೆ ತೆರವುಗೊಳಿಸಿದರು ಎಂದು ನನಗೆ ಅರ್ಥವಾಗುತ್ತಿಲ್ಲ?. ನನ್ನನ್ನು ಹೊರತುಪಡಿಸಿ, ಇತರ ಅನೇಕ ಪ್ರಯಾಣಿಕರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದರು. ಇನ್ನೊಮ್ಮೆ ಇಂತಹ ಸಮಸ್ಯೆಗಳು ಎದುರಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಇರ್ಫಾನ್ ಪಠಾಣ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಕ್ಷಮೆಯಾಚಿಸಿದ ವಿಸ್ತಾರಾ:

ಇರ್ಫಾನ್‌ರ ದೂರಿನ ಮೇರೆಗೆ ಏರ್‌ಲೈನ್ಸ್ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದೆತ. ಅಲ್ಲದೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಉಂಟಾದ ತೊಂದರೆಗೆ ಕ್ಷಮೆಯಾಚಿಸಿದ್ದಾರೆ. ನಿಮಗೆ ಆದ ಕೆಟ್ಟ ಅನುಭವಕ್ಕೆ ನಾವು ವಿಷಾದಿಸುತ್ತೇವೆ. ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಇರ್ಫಾನ್ ಪಠಾಣ್ ಕಾಮೆಂಟೇಟರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಯುಎಇಗೆ ತೆರಳುವ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಪಠಾಣ್ ಸೋಷಿಯಲ್ ಮೀಡಿಯಾ ಮೂಲಕ ವಿಸ್ತಾರಾ ಏರ್​ಲೈನ್ಸ್​ಗೆ ದೂರು ನೀಡಿದ್ದರು.