Asian Games: ಸೆಮಿ ಫೈನಲ್​ನಲ್ಲಿ ಭಾರತ ಭರ್ಜರಿ ಆರಂಭ: ಬಾಂಗ್ಲಾದ 3 ವಿಕೆಟ್ ಪತನ

Asian Games Womens T20I, India Women vs Bangladesh Women, Semi Final 1: ಏಷ್ಯನ್ ಗೇಮ್ಸ್ ಸೆಮಿ ಫೈನಲ್​ನಲ್ಲಿ ಈಗಾಗಲೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಬಾಂಗ್ಲಾದೇಶ ಇನ್ನಿಂಗ್ಸ್ ಶುರು ಮಾಡಿದೆ. ಆದರೆ, ಮೊದಲ ಓವರ್​ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತ ಬೌಲಿಂಗ್​ನಲ್ಲಿ ಭರ್ಜರಿ ಆರಂಭ ಮಾಡಿದೆ.

Asian Games: ಸೆಮಿ ಫೈನಲ್​ನಲ್ಲಿ ಭಾರತ ಭರ್ಜರಿ ಆರಂಭ: ಬಾಂಗ್ಲಾದ 3 ವಿಕೆಟ್ ಪತನ
Indian Womens Cricket Team
Follow us
Vinay Bhat
|

Updated on: Sep 24, 2023 | 7:00 AM

ಚೀನಾದ ಹ್ಯಾಂಗ್‌ಝೌನಲ್ಲಿ ಆಯೋಜಿಸಿರುವ ಏಷ್ಯನ್ ಗೇಮ್ಸ್ 2023ರ (Asian Games 2023) ಮಹಿಳಾ ಟಿ20 ಪಂದ್ಯದಲ್ಲಿ ಇಂದು ಸ್ಮೃತಿ ಮಂದಾನ ನಾಯಕತ್ವದ ಭಾರತ ಮಹಿಳಾ ತಂಡ ಹಾಗೂ ನಿಗರ್ ಸುಲ್ತಾನಾ ನೇತೃತ್ವದ ಬಾಂಗ್ಲಾದೇಶ ತಂಡ ಸೆಣೆಸಾಟ ನಡೆಸುತ್ತಿದೆ. ಹ್ಯಾಂಗ್‌ಝೌನ ಪಿಂಗ್​ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ಈ ಪಂದ್ಯ ನಡೆಯುತ್ತಿದೆ. ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮಿನ್ನು ಮಣಿ ಬದಲು ಟಿಟಾಸ್ ಸಾಧು ಸ್ಥಾನ ಪಡೆದುಕೊಂಡಿದ್ದಾರೆ.

ಈಗಾಗಲೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಬಾಂಗ್ಲಾದೇಶ ಇನ್ನಿಂಗ್ಸ್ ಶುರು ಮಾಡಿದೆ. ಆದರೆ, ಮೊದಲ ಓವರ್​ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪೂಜಾ ವಸ್ತ್ರಾಕರ್ ಅವರ ಮೊದಲ ಓವರ್​​ನ ಮೊದಲ ಎಸೆತದಲ್ಲೇ ಶಾಥಿ ರಾಣಿ ಅವರು ರಿಚಾ ಘೋಷ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ 5ನೇ ಎಸೆತದಲ್ಲಿ ಶಮೀಮಾ ಸುಲ್ತಾನ ಎಲ್​ಬಿ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಸೋಭಾನಾ ಮೊಸ್ತರಿ 8 ರನ್ ಗಳಿಸಿ ಪೆವಿಲಿಯನ್​ಗೆ ಸೇರಿಕೊಂಡರು.

ವಿಶ್ವಕಪ್​ನಲ್ಲಿ ಬಾಬರ್ ಬೆಂಕಿ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ: ಗೌತಮ್ ಗಂಭೀರ್ ಭವಿಷ್ಯ

ಇದನ್ನೂ ಓದಿ
Image
ಇಂದು ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ: ಸರಣಿ ಜಯದ ಮೇಲೆ ರಾಹುಲ್ ಕಣ್ಣು
Image
IND vs AUS: ಟೀಮ್ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಒಂದು ಬದಲಾವಣೆ ಸಾಧ್ಯತೆ
Image
15 ವರ್ಷಗಳ ಬಳಿಕ ಬಾಂಗ್ಲಾದೇಶ್ ವಿರುದ್ಧ ಗೆದ್ದ ನ್ಯೂಝಿಲೆಂಡ್
Image
ಕರ್ನಾಟಕ U19 ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಆಯ್ಕೆ..!

ಬಾಂಗ್ಲಾದೇಶ ಮಹಿಳಾ ತಂಡದ ಪರ ಇಂದಿನ ಪಂದ್ಯದಲ್ಲಿ ಶಮೀಮಾ ಸುಲ್ತಾನ , ಶಾಥಿ ರಾಣಿ , ನಿಗರ್ ಸುಲ್ತಾನ , ಸೋಭಾನಾ ಮೊಸ್ತರಿ , ರಿತು ಮೋನಿ , ಮಾರುಫಾ ಅಕ್ಟರ್ , ನಹಿದಾ ಅಕ್ಟರ್ , ಶೋರ್ನಾ ಅಕ್ಟರ್ , ಫಾಹಿಮಾ ಖಾತುನ್ , ಸುಲ್ತಾನಾ ಖಾತುನ್ ಹಾಗೂ ರಬೇಯಾ ಖಾನ್ ಕಣಕ್ಕಿಳಿದಿದ್ದಾರೆ.

ಇತ್ತ ಭಾರತ ತಂಡದ ಪರ ಸ್ಮೃತಿ ಮಂಧಾನ ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದು ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಕನಿಕಾ ಅಹುಜಾ , ರಿಚಾ ಘೋಷ್ , ದೀಪ್ತಿ ಶರ್ಮಾ , ದೇವಿಕಾ ವೈದ್ಯ , ಅಮಂಜೋತ್ ಕೌರ್ , ಪೂಜಾ ವಸ್ತ್ರಾಕರ್ , ಟಿಟಾಸ್ ಸಾಧು ಹಾಗೂ ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದುಕೊಂಡಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಅವರನ್ನು ಐಸಿಸಿ ಎರಡು ಪಂದ್ಯಗಳ ಅಮಾನತುಗೊಳಿಸಿದೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿದಿದೆ. ಸ್ಮೃತಿ ಮಂಧಾನ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಗೆದ್ದರೆ ಫೈನಲ್​ಗೆ ಪ್ರವೇಶಿಸಲಿದ್ದಾರೆ. ಫೈನಲ್​ನಲ್ಲಿ ಹರ್ಮನ್ ಆಡಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು