Asian Games 2023: ಏಷ್ಯನ್ ಗೇಮ್ಸ್ನ ಮೊದಲ ಪಂದ್ಯದಲ್ಲೇ ಭಾರತ ಸ್ಫೋಟಕ ಬ್ಯಾಟಿಂಗ್: ಮಲೇಷ್ಯಾಕ್ಕೆ ಬಿಗ್ ಟಾರ್ಗೆಟ್
India Women vs Malaysia Women, Quarter Final 1: ಏಷ್ಯನ್ ಗೇಮ್ಸ್ 2023 ರಲ್ಲಿ ಈಗ ಭಾರತ ಮಹಿಳಾ ತಂಡ ಹಾಗೂ ಮಲೇಷ್ಯಾ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಮಳೆ ಬಾಧಿತ ಪಂದ್ಯದಲ್ಲಿ ಭಾರತ ನಿಗದಿತ 15 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿದೆ. ಶಫಾಲಿ ವರ್ಮಾ ಕೇವಲ 39 ಎಸೆತಗಳಲ್ಲಿ 4 ಫೋರ್, 5 ಸಿಕ್ಸರ್ ಸಿಡಿಸಿ 67 ರನ್ ಚಚ್ಚಿದರು.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ (Asian Games 2023) ಸ್ಮೃತಿ ಮಂಧಾನ ನಾಯಕತ್ವದ ಭಾರತ ಮಹಿಳಾ ತಂಡ ಹಾಗೂ ವಿನಿಫ್ರೆಡ್ ದುರೈಸಿಂಗಮ್ ನೇತೃತ್ವದ ಮಲೇಷ್ಯಾ ತಂಡ ಕ್ರಿಕೆಟ್ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸ್ಫೋಟಕ ಆಟ ಪ್ರದರ್ಶಿಸಿದೆ. ಮಳೆ ಬಾಧಿತ ಪಂದ್ಯದಲ್ಲಿ ಭಾರತೀಯ ವನಿತೆಯರು 15 ಓವರ್ಗಳಲ್ಲಿ ಬರೋಬ್ಬರಿ 173 ರನ್ ಸಿಡಿಸಿದೆ.
ಭಾರತ ಪರ ಓಪನರ್ಗಳಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಪವರ್ ಪ್ಲೇ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಬೌಂಡರಿಗಳ ಮಳೆ ಸುರಿಸಿದ ಈ ಜೋಡಿ 5 ಓವರ್ ಆಗಿವ ಹೊತ್ತಿಗೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ, ಚೆನ್ನಾಗಿಯೆ ಆಡುತ್ತಿದ್ದ ಸ್ಮೃತಿ 16 ಎಸೆತಗಳಲ್ಲಿ 5 ಫೋರ್ನೊಂದಿಗೆ 27 ರನ್ ಗಳಿಸಿ ಮಹಿರಾ ಬೌಲಿಂಗ್ನಲ್ಲಿ ಔಟಾದರು. ಮಂಧಾನ ಔಟಾದಾಗ ಮಳೆ ಸುರಿಯಲು ಪ್ರಾರಂಭವಾಯಿತು. ಹೀಗಾಗಿ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು.
202 ರನ್ಗಳ ಗುರಿ ಬೆನ್ನತ್ತಿದ ತಂಡ 22 ರನ್ಗಳಿಗೆ ಆಲೌಟ್..!
ಸ್ವಲ್ಪ ಸಮಯ ಕಾದ ನಂತರ ಮಳೆ ನಿಂತು 15 ಓವರ್ಗಳ ಪಂದ್ಯವನ್ನು ಆಡಿಸಲು ತೀರ್ಮಾನಿಸಲಾಯಿತು. ನಂತರ ಪುನಃ ಬ್ಯಾಟಿಂಗ್ ಶುರುಮಾಡಿದ ಭಾರತ ಅಬ್ಬರಿಸಿತು. ಅದರಲ್ಲೂ ಶಫಾಲಿ ಮನಬಂದಂತೆ ಬ್ಯಾಟ್ ಬೀಸಿದರು. ಕೇವಲ 39 ಎಸೆತಗಳಲ್ಲಿ 4 ಫೋರ್, 5 ಸಿಕ್ಸರ್ ಸಿಡಿಸಿ 67 ರನ್ ಚಚ್ಚಿದರು. ಜೆಮಿಮಾ ರೊಡ್ರಿಗಸ್ ಕೂಡ ಸ್ಫೋಟಕ ಆಟವಾಡಿ ಕೇವಲ 29 ಎಸೆತಗಳಲ್ಲಿ 6 ಫೋರ್ನೊಂದಿಗೆ 47 ಹಾಗೂ ರಿಚಾ ಘೋಷ್ 7 ಎಸೆತಗಳಲ್ಲಿ 21 ರನ್ ಸಿಡಿಸಿದರು. ಭಾರತ ನಿಗದಿತ 15 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು. ಮಲೇಷ್ಯಾ ಪರ ಮಹಿರಾ ಇಜ್ಜಾತಿ ಇಸ್ಮಾಯಿಲ್ ಹಾಗೂ ಐಸ್ಯಾ ಎಲೀಸಾ ತಲಾ 1 ವಿಕೆಟ್ ಪಡೆದರು.
ಹರ್ಮನ್‌ಪ್ರೀತ್ ಕೌರ್ ಅವರನ್ನು ಐಸಿಸಿ ಎರಡು ಪಂದ್ಯಗಳ ಅಮಾನತುಗೊಳಿಸಿದೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿದಿದೆ. ಸ್ಮೃತಿ ಮಂಧಾನ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ) , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಕನಿಕಾ ಅಹುಜಾ , ರಿಚಾ ಘೋಷ್ ( ವಿಕೆಟ್ ಕೀಪರ್ ) , ದೀಪ್ತಿ ಶರ್ಮಾ , ದೇವಿಕಾ ವೈದ್ಯ , ಅಮಂಜೋತ್ ಕೌರ್ , ಪೂಜಾ ವಸ್ತ್ರಾಕರ್ , ಮಿನ್ನು ಮಣಿ , ರಾಜೇಶ್ವರಿ ಗಾಯಕ್ವಾಡ್.
ಮಲೇಷ್ಯಾ ಪ್ಲೇಯಿಂಗ್ XI: ಐನ್ನಾ ಹಮೀಝಾ ಹಾಶಿಮ್ , ವಿನಿಫ್ರೆಡ್ ದುರೈಸಿಂಗಮ್ (ನಾಯಕಿ) , ಮಾಸ್ ಎಲಿಸಾ , ವಾನ್ ಜೂಲಿಯಾ ( ವಿಕೆಟ್ ಕೀಪರ್ ) , ಮಹಿರಾ ಇಜ್ಜಾತಿ ಇಸ್ಮಾಯಿಲ್ , ಐನಾ ನಜ್ವಾ , ವಾನ್ ನಾರ್ ಝುಲೈಕಾ , ನೂರ್ ಅರಿಯಾನಾ ನತ್ಸ್ಯಾ , ಐಸ್ಯಾ ಎಲೀಸಾ , ನೂರ್ ದಾನಿಯಾ ಸ್ಯುಹಾದಾ , ನಿಕ್ ನೌರ್ ಅಟಿಯೆಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ