ಡಮರು..ತ್ರಿಶೂಲ…ಉತ್ತರ ಪ್ರದೇಶದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ
ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಸ್ಟೇಡಿಯಂ ಎಂಬ ಖ್ಯಾತಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ಗೆ ಸಲ್ಲುತ್ತದೆ. ಏಕೆಂದರೆ ಈ ಕ್ರೀಡಾಂಗಣವನ್ನು ನಿರ್ಮಿಸಿದ್ದು 1864 ರಲ್ಲಿ. ಹಾಗೆಯೇ 1934 ರಲ್ಲಿ ಇಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಾಗಿತ್ತು. ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಿದ್ದು 1969 ರಲ್ಲಿ. ನವೆಂಬರ್ 14, 1974 ರಲ್ಲಿ ಈ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಾಯಿತು.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ. ಶಿವನಗರದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣವು ಭಗವಾನ್ ಶಿವನ ಪ್ರೇರಿತ ಥೀಮ್ನಿಂದ ಕೂಡಿರಲಿದೆ. ಅಂದರೆ ಸ್ಟೇಡಿಯಂನ ಪ್ರವೇಶವು ದ್ವಾರವನ್ನು ಡಮರು ಆಕಾರದಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಹಾಗೆಯೇ ಸ್ಟೇಡಿಯಂನ ಫ್ಲಡ್ ಲೈಟ್ಗಳು ತ್ರಿಶೂಲದ ಆಕಾರದಲ್ಲಿರುತ್ತವೆ.
ಇಷ್ಟೇ ಅಲ್ಲದೆ, ಭೋಲೆ ಭಗವಾನರ ಪ್ರೀತಿಪಾತ್ರವಾದ ಬೆಲ್ಪಾತ್ರವೂ ಈ ಕ್ರೀಡಾಂಗಣದ ವಿನ್ಯಾಸದಲ್ಲಿ ಕಾಣಿಸಲಿದೆ. ಇನ್ನು ಈ ಕ್ರೀಡಾಂಗಣದ ಮೇಲ್ಛಾವಣಿಯನ್ನು ಭಗವಾನ್ ಶಿವನ ಹಣೆಯ ಮೇಲಿರುವ ಅರ್ಧ ಚಂದ್ರನ ಆಕೃತಿಯಲ್ಲಿರಲಿದೆ. ಅಂದರೆ ಇಡೀ ಸ್ಟೇಡಿಯಂ ಅನ್ನು ಶಿವಶಂಕರ ಥೀಮ್ನಲ್ಲಿ ವಿನ್ಯಾಸಗೊಳಿಸಲಾಗಿರುವುದು ವಿಶೇಷ.
ಇನ್ನು ಈ ಸ್ಟೇಡಿಯಂ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 23 ರಂದು ಅಡಿಗಲ್ಲು ಹಾಕಲಿದ್ದಾರೆ. ಅಲ್ಲದೆ 30 ತಿಂಗಳಲ್ಲಿ ನೂತನ ಅಂತಾರಾಷ್ಟ್ರೀಯ ಸ್ಟೇಡಿಯಂ ವಾರಣಾಸಿಯಲ್ಲಿ ತಲೆ ಎತ್ತಲಿದೆ.
-The render of upcoming international cricket stadium that will be built in Varanasi.
-PM Modi will lay foundation on 23rd September
-Stadium will be built on Bhagwan Shiv ji’s theme.
‘Trishul shaped Floodlights Damru shaped Media centre Crescent moon shaped roof’ pic.twitter.com/taZZFxsI4I
— CRICKETIGA (@CRICKETIGA_) September 20, 2023
ಮಾಜಿ ಕ್ರಿಕೆಟಿಗರು ಉಪಸ್ಥಿತಿ:
ಸೆಪ್ಟೆಂಬರ್ 23 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಮಯದಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಅಲ್ಲದೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಹಲವು ಖ್ಯಾತ ವ್ಯಕ್ತಿಗಳು ಆಗಮಿಸಲಿದ್ದಾರೆ ಎಂದು ಎಂದು ವಾರಣಾಸಿ ಕಮಿಷನರ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
32 ಎಕರೆಯಲ್ಲಿ ಸ್ಟೇಡಿಯಂ:
ಈ ಸಂಪೂರ್ಣ ಕ್ರೀಡಾಂಗಣವನ್ನು 32 ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಕೂಡ ವಾರಣಾಸಿಗೆ ಬಂದು ಸ್ಥಳ ಪರಿಶೀಲಿಸಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೀಗ ಸುದೀರ್ಘ ಚರ್ಚೆಯ ನಂತರ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ ಎಂದು ವಾರಣಾಸಿ ಕಮಿಷನರ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.
400 ಕೋಟಿ ರೂ. ವೆಚ್ಚ:
ಹೊಸ ಸ್ಟೇಡಿಯಂ ಒಟ್ಟು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಕ್ರೀಡಾಂಗಣವು ಸುಮಾರು 40 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ.
Major updates about the new stadium in Varanasi. [Jagran News]
– Theme of stadium like Lord Shiva – Stadium dome will be like Trishul – Floodlights will be shaped like Damru – Entrance gate design like Belpatra – Seating arrangements like steps of Ganga Ghat. pic.twitter.com/RoKuc0QjgH
— CRICKETIGA (@CRICKETIGA_) September 20, 2023
ಭಾರತದ ಹಳೆಯ ಸ್ಟೇಡಿಯಂ ಯಾವುದು?
ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಸ್ಟೇಡಿಯಂ ಎಂಬ ಖ್ಯಾತಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ಗೆ ಸಲ್ಲುತ್ತದೆ. ಏಕೆಂದರೆ ಈ ಕ್ರೀಡಾಂಗಣವನ್ನು ನಿರ್ಮಿಸಿದ್ದು 1864 ರಲ್ಲಿ. ಹಾಗೆಯೇ 1934 ರಲ್ಲಿ ಇಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಾಗಿತ್ತು. ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಿದ್ದು 1969 ರಲ್ಲಿ. ನವೆಂಬರ್ 14, 1974 ರಲ್ಲಿ ಈ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಾಯಿತು.
Published On - 10:59 pm, Wed, 20 September 23