Asian Games Womens T20I: ಟಾಸ್ ಗೆದ್ದ ಮಲೇಷ್ಯಾ: ಭಾರತ ಮಹಿಳಾ ತಂಡ ಬ್ಯಾಟಿಂಗ್
INDW vs MLYW, Quarter Final 1, Asian Games Womens T20I 2023: ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸ್ಮೃತಿ ಮಂಧಾನ ಮುನ್ನಡೆಸುತ್ತಿದ್ದಾರೆ. ಈಗಾಗಲೇ ಟಾಸ್ ಗೆದ್ದ ಮಲೇಷ್ಯಾ ಮಹಿಳಾ ತಂಡದ ನಾಯಕಿ ವಿನಿಫ್ರೆಡ್ ದುರೈಸಿಂಗಮ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಅವರನ್ನು ಐಸಿಸಿ ಎರಡು ಪಂದ್ಯಗಳ ಅಮಾನತುಗೊಳಿಸಿದೆ. ಹೀಗಾಗಿ ಅವರ ಅನುಪಸ್ಥಿತಿ ಭಾರತಕ್ಕೆ ಎದ್ದು ಕಾಣಲಿದೆ.
ಚೀನಾದ ಹ್ಯಾಂಗ್‌ಝೌನಲ್ಲಿ ಬಹುನಿರೀಕ್ಷಿತ ಏಷ್ಯನ್ ಗೇಮ್ಸ್ 2023ಕ್ಕೆ (Asian Games 2023) ಚಾಲನೆ ಸಿಕ್ಕಾಗಿದೆ. ವಿಶೇಷ ಎಂದರೆ ಈ ಬಾರಿ ಏಷ್ಯನ್ ಗೇಮ್ಸ್‌ಗೆ ಕ್ರಿಕೆಟ್ ಪಂದ್ಯವನ್ನು ಸೇರ್ಪಡಿಸಲಾಗಿದೆ. ಈ ಮೂಲಕ ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ಗೆ ಕ್ರಿಕೆಟ್ ಮರಳಿದೆ. ಇಂದು ಹ್ಯಾಂಗ್‌ಝೌನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಹಾಗೂ ವಿನಿಫ್ರೆಡ್ ದುರೈಸಿಂಗಮ್ ನೇತೃತ್ವದ ಮಲೇಷ್ಯಾ ತಂಡಗಳು ಮುಖಾಮುಖಿ ಆಗುತ್ತಿದೆ.
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸ್ಮೃತಿ ಮಂಧಾನ ಮುನ್ನಡೆಸುತ್ತಿದ್ದಾರೆ. ಈಗಾಗಲೇ ಟಾಸ್ ಗೆದ್ದ ಮಲೇಷ್ಯಾ ಮಹಿಳಾ ತಂಡದ ನಾಯಕಿ ವಿನಿಫ್ರೆಡ್ ದುರೈಸಿಂಗಮ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾ ಈ ಪಂದ್ಯಾವಳಿಯ ಅಗ್ರ 8 ರೊಳಗೆ ನೇರ ಪ್ರವೇಶವನ್ನು ಪಡೆದ ನಂತರ ತಮ್ಮ ಏಷ್ಯನ್ ಅಭಿಯಾನವನ್ನು ಪ್ರಾರಂಭಿಸುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೂಡ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆದ ಇತರ ತಂಡಗಳಾಗಿದೆ.
ಐಸಿಸಿ ರ್ಯಾಂಕಿಂಗ್ನಲ್ಲಿ ಭಾರತೀಯರದ್ದೇ ದರ್ಬಾರು..!
ಹರ್ಮನ್‌ಪ್ರೀತ್ ಕೌರ್ ಅವರನ್ನು ಐಸಿಸಿ ಎರಡು ಪಂದ್ಯಗಳ ಅಮಾನತುಗೊಳಿಸಿದೆ. ಹೀಗಾಗಿ ಅವರ ಅನುಪಸ್ಥಿತಿ ಭಾರತಕ್ಕೆ ಎದ್ದು ಕಾಣಲಿದೆ. ಓಪನರ್ಗಳಾಗಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಇದ್ದು, ಜೆಮಿಮಾ ರೊಡ್ರಿಗಸ್, ಕನಿಕಾ ಅಹುಜಾ, ವಿಕೆಟ್ ಕೀಪರ್ ಆಗಿ ರಿಚಾ ಘೋಷ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮಂಜೋತ್ ಕೌರ್, ಪೂಜಾ ವಸ್ತ್ರಾಕರ್, ಮಿನ್ನು ಮಣಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್‌ವಾಡ್, ಮಿನ್ನು ಮಣಿ, ಕನಿಕಾ , ಉಮಾ ಚೆಟ್ರಿ, ಅನುಷಾ ಬಾರೆಡ್ಡಿ.
ಮಲೇಷ್ಯಾ ಮಹಿಳಾ ತಂಡ: ಐನ್ನಾ ಹಮೀಝಾ ಹಾಶಿಮ್, ವಿನಿಫ್ರೆಡ್ ದುರೈಸಿಂಗಮ್(ನಾಯಕಿ), ಮಾಸ್ ಎಲಿಸಾ, ವಾನ್ ಜೂಲಿಯಾ(ವಿಕೆಟ್ ಕೋಪರ್), ಮಹಿರಾಹ್ ಇಜ್ಜಾತಿ ಇಸ್ಮಾಯಿಲ್, ಐನಾ ನಜ್ವಾ, ಜಮಾಹಿದಯಾ ಇಂಟಾನ್, ನೂರ್ ಅರಿಯಾನ್ನಾ ನಟ್ಯಾ, ಐಸ್ಯಾ ಎಲೀಸಾ, ನೂರ್ ದಾನಿಯಾ ಸ್ಯುಹದಾ, ನಿಕ್ ನೂರ್ ಅಟಿಲಾ, ಐನಾ, ಐನೂರ್ ಅಮೆಲಿನಾ, ಧನುಸ್ರಿ ಮುಹುನನ್, ವಾನ್ ನಾರ್ ಝುಲೈಕಾ.
ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಪಂದ್ಯಗಳು ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದ್ದು, ಪುರುಷರ ಪಂದ್ಯಗಳು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿವೆ. ಎಲ್ಲಾ ಪಂದ್ಯಗಳು ಟಿ20 ಮಾದರಿಯಲ್ಲಿ ಏರ್ಪಡಿಸಲಾಗಿದೆ. ಕ್ವಾರ್ಟರ್ ಫೈನಲ್ ಹಂತದಿಂದ ನೇರವಾಗಿ ಪುರುಷರ ಮತ್ತು ಮಹಿಳಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ