ಇಂಗ್ಲೆಂಡ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಕರುಣ್ ನಾಯರ್
Karun Nair Century: 197 ರನ್ಗಳಿಸುಷ್ಟರಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವು 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಟಾಮ್ ಟೇಲರ್ ಜೊತೆಗೂಡಿ ಕರುಣ್ ನಾಯರ್ ಅತ್ಯುತ್ತಮ ಜೊತೆಯಾಟವಾಡಿದರು. ಅಲ್ಲದೆ 184 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಕರುಣ್ ಬ್ಯಾಟ್ ಮೇಲೆಕ್ಕೆತ್ತಿದರು.
ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಕರುಣ್ ನಾಯರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ನಾರ್ಥಾಂಪ್ಟನ್‌ಶೈರ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸರ್ರೆ ತಂಡದ ನಾಯಕ ರೋರಿ ಬರ್ನ್ಸ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ನಾರ್ಥಾಂಪ್ಟನ್‌ಶೈರ್ ತಂಡಕ್ಕೆ ಹಸನ್ ಆಝಾದ್ (48) ಉತ್ತಮ ಆರಂಭ ಒದಗಿಸಿದರು. ಆದರೆ ಮತ್ತೋರ್ವ ಆರಂಭಿಕ ಎಮಿಲಿಯೋ (16) ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ಲ್ಯೂಕ್ ಪ್ರಾಕ್ಟರ್ (8) ವಿಕೆಟ್ ಕೈಚೆಲ್ಲಿದರು.
ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ನಾಯರ್ ನಿಧಾನವಾಗಿ ರನ್ ಪೇರಿಸುತ್ತಾ ಸಾಗಿದರು. ಇನ್ನು ಕ್ರೀಸ್ ಕಚ್ಚಿ ನಿಲ್ಲುತ್ತಿದ್ದಂತೆ ಆಕರ್ಷಕ ಹೊಡೆತಗಳ ಮೂಲಕ ರನ್ ಗತಿಯನ್ನು ಹೆಚ್ಚಿಸಿದರು. ಒಂದೆಡೆ ಕರುಣ್ ನಾಯರ್ ಬಂಡೆಯಂತೆ ನೆಲೆಯೂರಿದ್ದರೆ ಮತ್ತೊಂದೆಡೆ ನಾರ್ಥಾಂಪ್ಟನ್‌ಶೈರ್ ಬ್ಯಾಟರ್ಗಳು ವಿಕೆಟ್ ಒಪ್ಪಿಸುತ್ತಾ ಸಾಗಿದರು.
ಪರಿಣಾಮ 197 ರನ್ಗಳಿಸುಷ್ಟರಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವು 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಟಾಮ್ ಟೇಲರ್ ಜೊತೆಗೂಡಿ ಕರುಣ್ ನಾಯರ್ ಅತ್ಯುತ್ತಮ ಜೊತೆಯಾಟವಾಡಿದರು. ಅಲ್ಲದೆ 184 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಕರುಣ್ ಬ್ಯಾಟ್ ಮೇಲೆಕ್ಕೆತ್ತಿದರು.
What a moment. 🤩
Karun Nair has looked incredible all innings and this shot just tops it off. 💪pic.twitter.com/nniGStJl0G
— Northamptonshire CCC (@NorthantsCCC) September 20, 2023
ಅತ್ತ ಟಾಮ್ ಟೇಲರ್ 66 ರನ್ಗಳಿಸಿ ಔಟಾದರು. ಇದಾಗ್ಯೂ ಕರುಣ್ ನಾಯರ್ ವಿಕೆಟ್ ಪಡೆಯಲು ಸರ್ರೆ ಬೌಲರ್ಗಳಿಗೆ ಸಾಧ್ಯವಾಗಲೇ ಇಲ್ಲ. 2ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು ನಾರ್ಥಾಂಪ್ಟನ್‌ಶೈರ್ ತಂಡವು 351 ರನ್ ಕಲೆಹಾಕಿದೆ.
Just Karun hitting a six over point, 1 handed. 🤷
3 batting points are secured before the light deteriorates and the players head off. 🔒 pic.twitter.com/65XMNGtPBt
— Northamptonshire CCC (@NorthantsCCC) September 20, 2023
ಇನ್ನು 238 ಎಸೆತಗಳಲ್ಲಿ 22 ಫೋರ್ ಹಾಗೂ 2 ಸಿಕ್ಸ್ನೊಂದಿಗೆ ಅಜೇಯ 144 ರನ್ ಬಾರಿಸಿರುವ ಕರುಣ್ ನಾಯರ್ ಹಾಗೂ ಜಾಕ್ ವೈಟ್ ಕ್ರೀಸ್ನಲ್ಲಿದ್ದಾರೆ.
ಸರ್ರೆ ಪ್ಲೇಯಿಂಗ್ 11: ರೋರಿ ಬರ್ನ್ಸ್ (ನಾಯಕ) , ಡೊಮಿನಿಕ್ ಸಿಬ್ಲಿ , ರಯಾನ್ ಪಟೇಲ್ , ಸಾಯಿ ಸುದರ್ಶನ್ , ಬೆನ್ ಫೋಕ್ಸ್ (ವಿಕೆಟ್ ಕೀಪರ್) , ಕ್ಯಾಮೆರಾನ್ ಸ್ಟೀಲ್ , ಜೋರ್ಡಾನ್ ಕ್ಲಾರ್ಕ್ , ಜೇಮೀ ಓವರ್ಟನ್ , ಟಾಮ್ ಲಾವ್ಸ್ , ಕೆಮರ್ ರೋಚ್ , ಡೇನಿಯಲ್ ವೊರಾಲ್.
ಇದನ್ನೂ ಓದಿ: ಕರ್ನಾಟಕ ತಂಡವನ್ನು ತೊರೆದ ಕರುಣ್ ನಾಯರ್
ನಾರ್ಥಾಂಪ್ಟನ್‌ಶೈರ್ ಪ್ಲೇಯಿಂಗ್ 11: ಎಮಿಲಿಯೊ ಗೇ , ಹಸನ್ ಆಝಾದ್ , ಲ್ಯೂಕ್ ಪ್ರಾಕ್ಟರ್ (ನಾಯಕ) , ಕರುಣ್ ನಾಯರ್ , ರಾಬ್ ಕಿಯೋಗ್ , ಸೈಫ್ ಜೈಬ್ , ಲೆವಿಸ್ ಮೆಕ್ ಮ್ಯಾನಸ್ (ವಿಕೆಟ್ ಕೀಪರ್) , ಟಾಮ್ ಟೇಲರ್ , ಜಸ್ಟಿನ್ ಬ್ರಾಡ್ , ಜ್ಯಾಕ್ ವೈಟ್ , ಬೆನ್ ಸ್ಯಾಂಡರ್ಸನ್.