AUS vs SA: ಆಫ್ರಿಕಾ ಎದುರು ಮೊದಲ ಟೆಸ್ಟ್ ಗೆದ್ದ ಆಸೀಸ್; ಭಾರತಕ್ಕೆ ಲಾಭ ತಂದ ಹರಿಣಗಳು ಸೋಲು..!

AUS vs SA: ಆಸ್ಟ್ರೆಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಕೇವಲ 2ನೇ ದಿನದಲ್ಲಿ ಅಂತ್ಯಗೊಂಡಿದೆ. ಗಾಬಾ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವುದರೊಂದಿಗೆ ಆತಿಥೇಯ ಆಸ್ಟ್ರೇಲಿಯಾ 3 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

AUS vs SA: ಆಫ್ರಿಕಾ ಎದುರು ಮೊದಲ ಟೆಸ್ಟ್ ಗೆದ್ದ ಆಸೀಸ್; ಭಾರತಕ್ಕೆ ಲಾಭ ತಂದ ಹರಿಣಗಳು ಸೋಲು..!
ಆಸ್ಟ್ರೇಲಿಯಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Dec 18, 2022 | 12:54 PM

ಗಾಬಾದಲ್ಲಿ ನಡೆದ ಆಸ್ಟ್ರೆಲಿಯಾ ಹಾಗೂ ದಕ್ಷಿಣ ಆಫ್ರಿಕಾ (Australia Vs South Africa) ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಕೇವಲ 2ನೇ ದಿನದಲ್ಲಿ ಅಂತ್ಯಗೊಂಡಿದೆ. ಅಂದರೆ 5 ದಿನಗಳ ಆಟವು 3 ದಿನಗಳು ಬಾಕಿ ಉಳಿದಿರುವಂತೆಯೇ ಮುಗಿದಿದ್ದು, ಈ ಪಂದ್ಯದಲ್ಲಿ ಅತಿಥೇಯಾ ಆಸ್ಟ್ರೇಲಿಯಾ, ಹರಿಣಗಳನ್ನು ಬಗ್ಗು ಬಡಿದಿದೆ. ಗಾಬಾ ಟೆಸ್ಟ್‌ನಲ್ಲಿ (Gabba Test) ಗೆಲುವು ಸಾಧಿಸುವುದರೊಂದಿಗೆ ಆತಿಥೇಯ ಆಸ್ಟ್ರೇಲಿಯಾ 3 ಟೆಸ್ಟ್‌ಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಗಾಬಾ ಟೆಸ್ಟ್‌ನಲ್ಲಿ ಗೆಲ್ಲಲು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಎದುರು ಕೇವಲ 34 ರನ್‌ಗಳ ಗುರಿಯನ್ನು ನೀಡಿತ್ತು. ಈ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 152 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕಡಿಮೆ ಸ್ಕೋರ್‌ಗೆ ದಕ್ಷಿಣ ಆಫ್ರಿಕಾವನ್ನು ಆಲೌಟ್ ಮಾಡಿದ ಆಸ್ಟ್ರೇಲಿಯಾಕ್ಕೂ ಸುಲಭವಾಗಿ ಈ ಗುರಿ ಸಾಧಿಸಲು ದಕ್ಷಿಣ ಆಫ್ರಿಕಾದ ಬೌಲರ್‌ಗಳು ಅವಕಾಶ ನೀಡಲಿಲ್ಲ.

ಬಾಂಗ್ಲಾ ತಂಡವನ್ನು ಮಣಿಸಿದ ಭಾರತಕ್ಕೆ ಎರಡೆರಡು ಲಾಭ; ಅಣತಿ ದೂರದಲ್ಲಿ ಡಬ್ಲ್ಯುಟಿಸಿ ಫೈನಲ್ ಟಿಕೆಟ್ ..!

2. ಎರಡನೇ ಇನ್ನಿಂಗ್ಸ್‌ನಲ್ಲೂ ಆಫ್ರಿಕಾದ ಕಳಪೆ ಬ್ಯಾಟಿಂಗ್

ಆಸೀಸ್​ ವೇಗಿಗಳಂತೆ ತಮ್ಮ ಕರಾಮತ್ತು ತೋರಿದ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಆಸ್ಟ್ರೇಲಿಯವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 218 ರನ್‌ಗಳಿಗೆ ಸೀಮಿತಗೊಳಿಸಿದರು. ಆದರೂ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 66 ರನ್​ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಎರಡನೇ ಇನ್ನಿಂಗ್ಸ್​ನಲ್ಲದಾರೂ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯಕ್ಕೆ ಮರಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆಫ್ರಿಕಾ ಆಟಗಾರರು ಮೊದಲ ಇನ್ನಿಂಗ್ಸ್‌ಗಿಂತಲೂ ಕೆಟ್ಟದಾಗಿ ಆಡಿದರು. ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್ ಕೇವಲ 99 ರನ್‌ಗಳಿಗೆ ಕುಸಿಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಹರಿಣಗಳನ್ನು 100 ರನ್‌ಗಳ ಒಳಗೆ ನಿಲ್ಲಿಸುವಲ್ಲಿ ದೊಡ್ಡ ಪಾತ್ರವಹಿಸಿದರು.

3.ಆಸ್ಟ್ರೇಲಿಯಾಕ್ಕೂ ಈ ಟಾರ್ಗೆಟ್ ಸವಾಲಾಯಿತು

ಆಫ್ರಿಕಾ ಕೇವಲ 99 ರನ್​ಗಳಿಗೆ ಎರಡನೇ ಇನ್ನಿಂಗ್ಸ್​ ಮುಗಿಸಿದ್ದರಿಂದಾಗಿ ಆಸ್ಟ್ರೇಲಿಯಾಕ್ಕೆ ಕೇವಲ 34 ರನ್‌ಗಳ ಗುರಿ ಸಿಕ್ಕಿತು. ಆದರೆ, ಈ ಸುಲಭ ಗುರಿಯನ್ನು ಸಾಧಿಸುವಲ್ಲಿಯೂ ಆಸೀಸ್​ ತಂಡದ 4 ಬ್ಯಾಟ್ಸ್‌ಮನ್‌ಗಳು ಔಟಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳು, ವಿಶೇಷವಾಗಿ ರಬಾಡ ಅವರ ವೇಗದ ಮುಂದೆ ಆಸ್ಟ್ರೇಲಿಯಾದ 4 ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ವಿಕೆಟ್​ನಲ್ಲಿ ನಿಲ್ಲಲಾಗಲಿಲ್ಲ. ಎರಡನೇ ಇನಿಂಗ್ಸ್​ನಲ್ಲಿ ರಬಾಡ ಕೇವಲ 4 ಓವರ್ ಬೌಲ್ ಮಾಡಿ 13 ರನ್ ನೀಡಿ 4 ವಿಕೆಟ್ ಪಡೆದರು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್​ನಲ್ಲಿ 6 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು.

4. ಭಾರತಕ್ಕೆ ಲಾಭ

ಈಗ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಟೆಸ್ಟ್ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವುದು ಭಾರತಕ್ಕೆ ಲಾಭ ತಂದುಕೊಟ್ಟಿದೆ. ವಾಸ್ತವವಾಗಿ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಬೇಕೆಂದರೆ, ದಕ್ಷಿಣ ಆಫ್ರಿಕಾ ಉಳಿದಿರುವ ಟೆಸ್ಟ್ ಪಂದ್ಯಗಳಲ್ಲಿ ಸೋಲಬೇಕಿದೆ. ಏಕೆಂದರೆ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಆಫ್ರಿಕಾ ಈಗ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ಫೈನಲ್​ಗೇರಬೇಕೆಂದರೆ ಆಫ್ರಿಕಾ ಟೆಸ್ಟ್ ಪಂದ್ಯಗಳನ್ನು ಸೋಲಲೇಬೇಕಿದೆ. ಇತ್ತ ಭಾರತವೂ ಕೂಡ ಬಾಂಗ್ಲಾ ಎದುರು ಉಳಿದಿರುವ ಇನ್ನೊಂದು ಪಂದ್ಯ ಹಾಗೂ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯಲ್ಲಿ ಗೆದ್ದರೆ ಮಾತ್ರ ಫೈನಲ್​ಗೆ ಎಂಟ್ರಿಕೊಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Sun, 18 December 22

ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ