Steve Smith: 9ನೇ ಕ್ರಮಾಂಕದಿಂದ ಆರಂಭಿಕ: ಸ್ಟೀವ್ ಸ್ಮಿತ್ ಹೊಸ ಇನಿಂಗ್ಸ್​

Australia vs West Indies: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಜನವರಿ 17 ರಿಂದ ಶುರುವಾಗಲಿದೆ. ಇನ್ನು  ಜನವರಿ 25 ರಿಂದ ದ್ವಿತೀಯ ಟೆಸ್ಟ್ ಪ್ರಾರಂಭವಾಗಲಿದೆ. ಮೊದಲ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಿದರೆ, 2ನೇ ಪಂದ್ಯವು ಗಬ್ಬಾದಲ್ಲಿ ನಡೆಯಲಿದೆ.

Steve Smith: 9ನೇ ಕ್ರಮಾಂಕದಿಂದ ಆರಂಭಿಕ: ಸ್ಟೀವ್ ಸ್ಮಿತ್ ಹೊಸ ಇನಿಂಗ್ಸ್​
Steve Smith
Edited By:

Updated on: Jan 11, 2024 | 11:53 AM

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ (Steve Smith) ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಡೇವಿಡ್ ವಾರ್ನರ್ ಅವರ ನಿವೃತ್ತಿಯಿಂದ ತೆರವಾಗಿದ್ದ ಓಪನರ್ ಸ್ಥಾನದಲ್ಲಿ ಸ್ಮಿತ್ ಬ್ಯಾಟ್ ಬೀಸಲಿದ್ದಾರೆ. ಇದಕ್ಕೂ ಮುನ್ನ ಸ್ಮಿತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಇದೀಗ ಉಸ್ಮಾನ್ ಖ್ವಾಜಾ ಜೊತೆ ಇನಿಂಗ್ಸ್ ಆರಂಭಿಸಲು ಸ್ಟೀವ್ ಸ್ಮಿತ್ ಅಣಿಯಾಗಿದ್ದಾರೆ. ವಿಶೇಷ ಎಂದರೆ ಸ್ಮಿತ್ ಟೆಸ್ಟ್ ಕೆರಿಯರ್ ಆರಂಭಿಸಿದ್ದು 9ನೇ ಕ್ರಮಾಂಕದ ಮೂಲಕ. ಆ ಬಳಿಕ ಬಡ್ತಿ ಪಡೆಯುತ್ತಾ ಇದೀಗ ಆರಂಭಿಕನ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

9ನೇ ಕ್ರಮಾಂಕದಿಂದ ಆರಂಭಿಕ:

2010 ರಲ್ಲಿ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಸ್ಟೀವ್ ಸ್ಮಿತ್ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಅಂದು ಲೆಗ್ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಮಿತ್ 9ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು.

ಇದಾದ ಬಳಿಕ ತಮ್ಮ ಆಲ್​ರೌಂಡರ್ ಪ್ರದರ್ಶನದ ಮೂಲಕ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದರು. ಅದರಂತೆ ಟಾಪ್-5 ಕ್ರಮಾಂಕದಲ್ಲಿ ಕಾಣಿಸಿಕೊಂಡ ಬಳಿಕ ಸ್ಟೀವ್ ಸ್ಮಿತ್ ಬ್ಯಾಟರ್ ಆಗಿ ಬದಲಾಗಿದ್ದರು. ಆ ನಂತರ ಸ್ಮಿತ್ ಹಿಂತಿರುಗಿ ನೋಡಿಲ್ಲ ಎನ್ನಬಹುದು.

ಏಕೆಂದರೆ ಆಸ್ಟ್ರೇಲಿಯಾ ಪರ 187 ಟೆಸ್ಟ್ ಇನಿಂಗ್ಸ್ ಆಡಿರುವ ಸ್ಮಿತ್ 4 ದ್ವಿಶತಕ, 32 ಶತಕ ಹಾಗೂ 40 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಒಟ್ಟು 9514 ರನ್​ ಕಲೆಹಾಕಿದ್ದಾರೆ. ಅಲ್ಲದೆ ಪ್ರಸ್ತುತ ಟೆಸ್ಟ್ ಕ್ರಿಕೆಟ್​ನ ಅತ್ಯುತ್ತಮ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಂದರೆ 9ನೇ ಕ್ರಮಾಂಕದಿಂದ ಇನಿಂಗ್ಸ್​ ಆರಂಭಿಸಿ ಇದೀಗ ಸ್ಟೀವ್ ಸ್ಮಿತ್ ಆರಂಭಿಕನ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವಿಸ್ಮಯಕಾರಿ ಏರಿಕೆಗಳಲ್ಲಿ ಒಂದನ್ನು ಪೂರ್ಣಗೊಳಿಸಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ:

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಜನವರಿ 17 ರಿಂದ ಶುರುವಾಗಲಿದೆ. ಇನ್ನು  ಜನವರಿ 25 ರಿಂದ ದ್ವಿತೀಯ ಟೆಸ್ಟ್ ಪ್ರಾರಂಭವಾಗಲಿದೆ. ಮೊದಲ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಿದರೆ, 2ನೇ ಪಂದ್ಯವು ಗಬ್ಬಾದಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್.

ಇದನ್ನೂ ಓದಿ: ನನಗೆ RCB ಪರ ಆಡೋದು ಇಷ್ಟವಿರಲಿಲ್ಲ, ಬೆದರಿಸಿ ಆಡ್ಸಿದ್ರು..!

ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಅಲ್ಝಾರಿ ಜೋಸೆಫ್ (ಉಪನಾಯಕ), ತೇಜ್​ನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಅಲಿಕ್ ಅಥಾನಾಝ್, ಕವೆಮ್ ಹಾಡ್ಜ್, ಜಸ್ಟಿನ್ ಗ್ರೀವ್ಸ್, ಜೋಶುವಾ ಡಾಸಿಲ್ವಾ, ಅಕೀಮ್ ಜೋರ್ಡಾನ್, ಗುಡಾಕೇಶ್ ಮೋಟಿ, ಕೆಮರ್ ರೋಚ್, ಕೆವಿನ್ ಸಿಂಕ್ಲೇರ್, ಟೆವಿನ್ ಇಮ್ಲಾಚ್, ಶಮರ್ ಜೋಸೆಫ್, ಜಕಾರಿ ಮೆಕಾಸ್ಕಿ.