
ಜನವರಿ 15 ರಿಂದ ಶುರುವಾಗಲಿರುವ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಭಾರತೀಯ ಮೂಲದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ತಂಡದ ನಾಯಕನಾಗಿ ಒಲೀವರ್ ಪೀಕ್ ಕಾಣಿಸಿಕೊಂಡಿದ್ದಾರೆ.
ಹದಿನೈದು ಸದಸ್ಯರುಗಳಲ್ಲಿ ಭಾರತೀಯ ಮೂಲದವರಾದ ಆರ್ಯನ್ ಶರ್ಮಾ ಹಾಗೂ ಜಾನ್ ಜೇಮ್ಸ್ ಸ್ಥಾನ ಪಡೆದಿದ್ದಾರೆ. ಆರ್ಯನ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದರೆ, ಜಾನ್ ಜೇಮ್ಸ್ ಬಲಗೈ ವೇಗದ ಆಲ್‌ರೌಂಡರ್. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದ ಅಂಡರ್-19 ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಇಬ್ಬರೂ ಆಟಗಾರರು ಕಾಣಿಸಿಕೊಂಡಿದ್ದರು.
ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆರ್ಯನ್ ಶರ್ಮಾ ಹಾಗೂ ಜಾನ್ ಜೇಮ್ಸ್ಗೆ ಕಿರಿಯರ ವಿಶ್ವಕಪ್ ತಂಡದಲ್ಲೂ ಸ್ಥಾನ ಲಭಿಸಿದೆ.
ಕಿರಿಯರ ವಿಶ್ವಕಪ್ಗೆ ಪ್ರಕಟಿಸಲಾದ 15 ಸದಸ್ಯರುಗಳ ಈ ತಂಡದಲ್ಲಿ ಐದು ಮಂದಿ ಏಷ್ಯನ್ನರು ಇರುವುದು ವಿಶೇಷ. ಅಂದರೆ ಆರ್ಯನ್ ಶರ್ಮಾ ಮತ್ತು ಜಾನ್ ಜೇಮ್ಸ್ ಅಲ್ಲದೆ, ಶ್ರೀಲಂಕಾ ಮೂಲದ ನಾಡೆನ್ ಕೂರೆ ಮತ್ತು ನಿತೇಶ್ ಸ್ಯಾಮ್ಯುಯೆಲ್ ಕಾಣಿಸಿಕೊಂಡಿದ್ದಾರೆ. ಇನ್ನು ಚೀನೀ ಮೂಲದ ಒಅಲೆಕ್ಸ್ ಲೀ ಯಂಗ್ ಕೂಡ ಆಸೀಸ್ ಪಡೆಯಲ್ಲಿದ್ದಾರೆ. ಅಂದರೆ 15 ಮಂದಿಯಲ್ಲಿ 5 ಮಂದಿ ಏಷ್ಯಾ ಮೂಲದವರು ಎಂಬುದು ವಿಶೇಷ.
ಆಸ್ಟ್ರೇಲಿಯಾ ಅಂಡರ್-19 ಏಕದಿನ ತಂಡ: ಒಲೀವರ್ ಪೀಕ್ (ನಾಯಕ), ಕೇಸಿ ಬಾರ್ಟನ್, ನಾಡೆನ್ ಕೂರೆ, ಜೇಡೆನ್ ಡ್ರೇಪರ್, ಬೆನ್ ಗಾರ್ಡನ್, ಸ್ಟೀವನ್ ಹೊಗನ್, ಥಾಮಸ್ ಹೊಗನ್, ಜಾನ್ ಜೇಮ್ಸ್, ಚಾರ್ಲ್ಸ್ ಲ್ಯಾಚ್ಮಂಡ್, ವಿಲ್ ಮಲಾಜ್‌ಜುಕ್, ನಿತೇಶ್ ಸ್ಯಾಮ್ಯುಯೆಲ್, ಹೇಡನ್ ಶಿಲ್ಲರ್, ಆರ್ಯನ್ ಶರ್ಮಾ, ವಿಲಿಯಂ ಟೇಲರ್, ಅಲೆಕ್ಸ್ ಲೀ ಯಂಗ್.
ಇದನ್ನೂ ಓದಿ: IPL 2026: ಐಪಿಎಲ್ನಿಂದ ಸ್ಟಾರ್ ಆಟಗಾರ ಬ್ಯಾನ್..!
ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಜನವರಿ 15 ರಿಂದ ಶುರುವಾಗಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ.